ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೌಂದರ್ಯ ವರ್ಧಕ ಚಿಕಿತ್ಸೆಗಾಗಿ 4 ಕೋಟಿ ರೂಪಾಯಿ ವೆಚ್ಚ ಮಾಡಿದ 75 ವರ್ಷದ ವೃದ್ಧೆ; ಈಗ ಊಟಕ್ಕೂ ಗತಿ ಇಲ್ಲ

Viral News: 75 ವರ್ಷದ ವೃದ್ಧೆಯೊಬ್ಬಳು ತಮ್ಮ ಇಡೀ ಉಳಿತಾಯ ಹಣವನ್ನು ಕೇವಲ ಸೌಂದರ್ಯ ಚಿಕಿತ್ಸೆಗೆ ವ್ಯಯಿಸಿದ್ದಾರೆ. ಸುಮಾರು 4 ಕೋಟಿ ರೂಪಾಯಿ ಹಣವನ್ನು ಒಂದೇ ಬ್ಯೂಟಿ ಸೆಲೂನ್‌ನಲ್ಲಿ ಖರ್ಚು ಮಾಡಿದ್ದಾಳೆ ಎನ್ನಲಾಗಿದೆ. ಆದರೆ ಈ ಇಡೀ ಹಣ ಖಾಲಿಯಾದ ನಂತರ ವೃದ್ಧೆ ಮನೆ ಬಾಡಿಗೆ ಕಟ್ಟಲು ಮತ್ತು ದಿನನಿತ್ಯದ ವೆಚ್ಚಗಳಿಗೂ ಹಣವಿಲ್ಲದೆ ಒಡವೆಗಳನ್ನು ಮಾರಾಟ ಮಾಡುವ ಹಂತಕ್ಕೆ ತಲುಪಿದ್ದಾಳೆ.

ಸೌಂದರ್ಯ ಚಿಕಿತ್ಸೆಗೆ 4 ಕೋಟಿ ರೂ. ಖರ್ಚು ಮಾಡಿದ 75 ವರ್ಷದ ವೃದ್ಧೆ

ಸಾಂದರ್ಭಿಕ ಚಿತ್ರ -

Profile
Pushpa Kumari Sep 15, 2026 8:35 PM

​ಚೀನಾ, ಸೆ. 15: ಇಂದು ಜಗತ್ತಿನಲ್ಲಿ ದಿನನಿತ್ಯ ವಿಚಿತ್ರ ಘಟನೆಗಳು (Viral News) ನಡೆಯುತ್ತಿರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ 75 ವರ್ಷದ ವೃದ್ಧೆಯೊಬ್ಬಳು ತನ್ನ ಇಡೀ ಉಳಿತಾಯ ಹಣವನ್ನು ಕೇವಲ ಸೌಂದರ್ಯ ಚಿಕಿತ್ಸೆಗೆ ವ್ಯಯಿಸಿದ್ದಾಳೆ. ಹೌದು, ಬರೋಬ್ಬರಿ 4 ಕೋಟಿ ರೂಪಾಯಿಯನ್ನು ಒಂದೇ ಬ್ಯೂಟಿ ಸೆಲೂನ್‌ನಲ್ಲಿ ಖರ್ಚು ಮಾಡಿದ್ದಾಳೆ ಎನ್ನಲಾಗಿದೆ. ಆದರೆ ಈಗ ಇಡೀ ಹಣ ಖಾಲಿಯಾದ ನಂತರ ವೃದ್ಧೆ ಮನೆ ಬಾಡಿಗೆ ಕಟ್ಟಲು ಮತ್ತು ದಿನನಿತ್ಯದ ವೆಚ್ಚಗಳಿಗೆ ಹಣವಿಲ್ಲದೆ ಒಡವೆಗಳನ್ನು ಮಾರಾಟ ಮಾಡುವ ಹಂತಕ್ಕೆ ತಲುಪಿದ್ದಾಳೆ.

ಚೀನಾದ ಯು ಎನ್ನುವ ವೃದ್ದೆ ಈ ಸೌಂದರ್ಯ ಚಿಕಿತ್ಸೆ ಮಾಡಿಸಿಕೊಂಡವಳು. ಹಲವು ವರ್ಷಗಳಿಂದ ಒಂದೇ ಸಲೂನ್‌ನಲ್ಲಿ ಸೌಂದರ್ಯ ಚಿಕಿತ್ಸೆಗಳಿಗೆ 4 ಕೋಟಿ ರೂಪಾಯಿ ಖರ್ಚು ಮಾಡಿದ್ದಾಳೆ. ಆದರೆ ವೆಚ್ಚದವಾದ ಮೊತ್ತವನ್ನು ಕಂಡ ನಂತರ ಅವರ ಮಗಳು ಆಘಾತಕ್ಕೊಳಗಾಗಿದ್ದಾರೆ.‌ ಯು ಅವರ ಮಗಳು ಚಿಕಿತ್ಸಾ ದಾಖಲೆಗಳನ್ನು ಪರಿಶೀಲಿಸಿದಾಗ ಖರ್ಚಿನ ಪ್ರಮಾಣ ಬೆಳಕಿಗೆ ಬಂದಿದೆ. ತಮ್ಮ ಎಲ್ಲ ಉಳಿತಾಯ ಮತ್ತು ಮನೆ ಮಾರಾಟದಿಂದ ಬಂದಿದ್ದ 4 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಸೌಂದರ್ಯಕ್ಕಾಗಿ ಖರ್ಚು ಮಾಡಿ ಮೂರ್ಖತನ ಮೆರೆದಿದ್ದಾಳೆ..

ವೃದ್ಧೆ 2016ರಿಂದ ಯೋಂಗ್ಕಿ ಬ್ಯೂಟಿ ಮತ್ತು ಹೇರ್ ಡ್ರೆಸ್ಸಿಂಗ್ ಕಂಪನಿ ಮತ್ತು ಸಂಯೋಜಿತ ವೈದ್ಯಕೀಯ ಸೌಂದರ್ಯ ಚಿಕಿತ್ಸಾಲಯಕ್ಕೆ ಭೇಟಿ ನೀಡುತ್ತಿದ್ದಳು. ಇಲ್ಲಿ ಜೋತು ಬಿದ್ದ ಚರ್ಮ ಬಿಗಿಗೊಳಿಸುವ ಚಿಕಿತ್ಸೆ, ಥ್ರೆಡ್ ಲಿಮೆರಿಡಿಯನ್ ಮಸಾಜ್ ಚಿಕಿತ್ಸೆಗಳನ್ನು ಒಳಗೊಂಡಿತ್ತು. ಅಲ್ಲದೆ ಹುಬ್ಬು ಮತ್ತು ತುಟಿ ಹಚ್ಚೆ ಹಾಕುವಂತಹ ಕಾಸ್ಮೆಟಿಕ್ ಕಾರ್ಯ ವಿಧಾನಗಳಿಗೆ ಒಳಗಾಗಿದ್ದಾಳೆ ಎಂದು ದಾಖಲೆಗಳು ತೋರಿಸಿವೆ

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ?

ಪರಿಸ್ಥಿತಿ ಲಾಭ ಪಡೆದುಕೊಂಡ ಸೆಲೂನ್‌ನವರು ಸಾಮಾನ್ಯ ಮಾರುಕಟ್ಟೆ ದರಕ್ಕಿಂತ 20 ಪಟ್ಟು ಹೆಚ್ಚು ಫೀಸ್‌ ವಿಧಿಸಿದ್ದಾರೆ ಎಂದು ಮಗಳು ಆರೋಪಿಸಿದ್ದಾರೆ‌. ಕೇವಲ ತುಟಿಗೆ ಹಚ್ಚೆ ಹಾಕುವ ಚಿಕಿತ್ಸೆಗೆ ಸರಿ ಸುಮಾರು 6 ಲಕ್ಷ ರೂಪಾಯಿ ಬಿಲ್ ಮಾಡಲಾಗಿದೆ‌. ಇಂಟಿಮೇಟ್ ಕೇರ್ ಹೆಸರಿನಲ್ಲಿ 42.8 ಲಕ್ಷ ರೂಪಾಯಿ ಬಿಲ್ ಮಾಡಲಾಗಿತ್ತು. ಆದರೆ ಆ ಚಿಕಿತ್ಸೆಯನ್ನು ನೀಡದೆ ಕೇವಲ ಸಾಮಾನ್ಯ ಸ್ಕಿನ್ ಕೇರ್‌ ಮಾಡಲಾಗಿತ್ತು.

​ಆದರೆ ಹಣ ಖಾಲಿಯಾದ ನಂತರ ವೃದ್ಧೆ ಒಡವೆಗಳನ್ನು ಮಾರಾಟ ಮಾಡುವ ಸ್ಥಿತಿ ತಲುಪಿದ್ದಾಳೆ. ಆದರೆ ಸೆಲೂನ್ ಸಿಬ್ಬಂದಿ ಈ ಆರೋಪವನ್ನು ನಿರಾಕರಿಸಿದ್ದು, ವೃದ್ಧೆಗೆ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಇದ್ದುದರಿಂದ ಪದೇ ಪದೆ ಚಿಕಿತ್ಸೆಗಳನ್ನು ಕೇಳಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.