ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಖಾಕಿ ತೊಟ್ಟು ಮಕ್ಕಳಂತೆ ಪಾರ್ಕ್‌ನಲ್ಲಿ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ: ವಿಡಿಯೊ ವೈರಲ್

Viral News: ಉದ್ಯಾನವನವೊಂದರಲ್ಲಿ ಕರ್ತವ್ಯದ ನಡುವಿನ ಬಿಡುವಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಮೆರ್ರಿ-ಗೋ-ರೌಂಡ್ ಆಟ ಆಡುತ್ತಾ ಸಮಯ ಕಳೆದಿದ್ದಾರೆ. ಮಕ್ಕಳು ಆಡುವ ಆಟಿಕೆ ಮೇಲೆ ಕುಳಿತು ಸಮವಸ್ತ್ರಧಾರಿ ಸಿಬ್ಬಂದಿ ಬಾಲ್ಯದ ಕ್ಷಣ ಕಳೆದಿದ್ದಾರೆ. ಆದರೆ ಈ ವಿಡಿಯೊವನ್ನು ಯಾವಾಗ ಅಥವಾ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದೆ.

ಪಾರ್ಕ್‌ನಲ್ಲಿ ಮಕ್ಕಳಂತೆ ಆಡಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ

ಖಾಕಿ ತೊಟ್ಟು ಪಾರ್ಕ್‌ನಲ್ಲಿ ಸಂಭ್ರಮಿಸಿದ ಸೆಕ್ಯುರಿಟಿ ಸಿಬ್ಬಂದಿ -

Profile
Pushpa Kumari Sep 15, 2026 9:10 PM

ನವದೆಹಲಿ, ಸೆ. 15: ಸಮಾಜದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಪೊಲೀಸ್ ಮತ್ತು ಪ್ಯಾರಾ ಸಿಬ್ಬಂದಿ ಪಾತ್ರ ದೊಡ್ಡದು. ಯಾವಾಗಲೂ ಕಟ್ಟುನಿಟ್ಟಿನ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪೊಲೀಸ್ ಸಿಬ್ಬಂದಿ ಈ ಭಾರಿ ಕರ್ತವ್ಯದ ನಡುವೆಯೂ ಮಕ್ಕಳಂತೆ ಉದ್ಯಾನವನದಲ್ಲಿ ಆಟವಾಡುತ್ತಾ ಸಮಯ ಕಳೆದಿದ್ದಾರೆ‌. ಈ ಮುದ್ದಾದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ. ಸ್ಥಳೀಯ ಉದ್ಯಾನವವೊಂದರಲ್ಲಿ ಪೊಲೀಸರು ಮತ್ತು ಸೈನಿಕ ಸಿಬ್ಬಂದಿ ಗುಂಪೊಂದು ಪುಟ್ಟ ಮಕ್ಕಳಂತೆ ಆಟವಾಡುತ್ತಾ ಖುಷಿಯಾಗಿ ಕ್ಷಣ ಕಳೆದಿದ್ದಾರೆ.

ಸ್ಥಳೀಯ ಉದ್ಯಾನವನವೊಂದರಲ್ಲಿ ಕರ್ತವ್ಯದ ನಡುವಿನ ಬಿಡುವಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಸಿಬ್ಬಂದಿ ಮೆರ್ರಿ-ಗೋ-ರೌಂಡ್ ಆಟ ಆಡುತ್ತಾ ಸಮಯ ಕಳೆದಿದ್ದಾರೆ. ಮಕ್ಕಳು ಆಡುವ ಆಟಿಕೆ ಮೇಲೆ ಕುಳಿತು ಸಮವಸ್ತ್ರಧಾರಿ ಸಿಬ್ಬಂದಿ ಬಾಲ್ಯದ ಕ್ಷಣ ಕಳೆದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದ ಈ ವಿಡಿಯೊವನ್ನು ಯಾವಾಗ ಅಥವಾ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾಗಿಲ್ಲ.

ವಿಡಿಯೊ ನೋಡಿ:



​ಈ ವಿಡಿಯೊವನ್ನು ಶಿಲ್ಪಾ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ಪಾರ್ಕ್‌ನಲ್ಲಿ ಮೆರ್ರಿ-ಗೋ-ರೌಂಡ್ ಆನಂದಿಸಿದ್ದಾರೆ. ಬಾಲ್ಯದ ನೆನಪು ಮರುಕಳಿಸುತ್ತಿದೆ ಎಂದು ಬರೆದಿದ್ದಾರೆ. ​ಈ ಪೋಸ್ಟ್ ಈಗಾಗಲೇ 48,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ.

ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಅನೇಕರು ಸರಳ ಮತ್ತು ಸಂತೋಷದ ಕ್ಷಣವನ್ನು ಆನಂದಿಸಿದ್ದಕ್ಕಾಗಿ ಸೆಕ್ಯುರಿಟಿ ಸಿಬ್ಬಂದಿಯನ್ನು ಹೊಗಳಿದ್ದಾರೆ. ಒಬ್ಬರು, ʼʼಪ್ರತಿಯೊಬ್ಬರಿಗೂ ಸಂತೋಷದ ಕ್ಷಣವನ್ನು ಆನಂದಿಸುವ ಹಕ್ಕಿದೆ. ಆದರೆ ಸಮವಸ್ತ್ರದಲ್ಲಿರುವ ಸಿಬ್ಬಂದಿಯ ವಿಡಿಯೊಗಳನ್ನು ಸಾರ್ವಜನಿಕವಾಗಿ ಪೋಸ್ಟ್ ಮಾಡಬಾರದು. ಸಮವಸ್ತ್ರವು ಕರ್ತವ್ಯ, ಶಿಸ್ತು ಮತ್ತು ಘನತೆಯನ್ನು ತೊರಿಸುತ್ತದೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಬಹಳ ಸುಂದರವಾದ ದೃಶ್ಯ! ಪ್ರತಿಯೊಬ್ಬರೂ ತಮ್ಮೊಳಗಿನ ಬಾಲ್ಯವನ್ನು ಮತ್ತೆ ಮತ್ತೆ ಅನುಭವಿಸಬೇಕುʼʼ ಎಂದಿದ್ದಾರೆ.