ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಳದಿ ಶಾಸ್ತ್ರದ ವೇಳೆ ಬೆಂಕಿ ದುರಂತ: ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ವರ

Viral Video: ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ 12 ಮಂದಿ ಬೆಂಕಿಯ ಜ್ವಾಲೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವಧು ಸೇರಿ ಒಟ್ಟು 12 ಜನರು ತೀವ್ರವಾಗಿ ಸುಟ್ಟು ಹೋಗಿದ್ದಾರೆ. ಹಳದಿ ಸಾಸ್ತ್ರದ ವೇಳೆ ಈ ಘಟನೆ ನಡೆದಿದ್ದು, ವರ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ್ದಾನೆ.

ಬೆಂಕಿ ಅವಘಡದಿಂದ ವಧು ಸುಟ್ಟು ಹೋದರೂ ಆಸ್ಪತ್ರೆಯಲ್ಲೇ ವರಿಸಿದ ವರ

ಬೆಂಕಿ ಅವಘಡದಿಂದ ವಧು ಸುಟ್ಟು ಹೋದರೂ ಆಸ್ಪತ್ರೆಯಲ್ಲೇ ವರಿಸಿದ ವರ -

Profile
Pushpa Kumari May 17, 2026 6:28 PM

ಲಖನೌ, ಮೇ 17: ಸಂಭ್ರಮದಿಂದ ಕೂಡಿರಬೇಕಿದ್ದ ಉತ್ತರ ಪ್ರದೇಶದ ಕಾನ್ಪುರದಲ್ಲಿನ ಮದುವೆ ಮನೆಯೊಂದರಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ 12 ಜನರು ಬೆಂಕಿಯ ಜ್ವಾಲೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಘಟನೆಯಲ್ಲಿ ವಧು ಸೇರಿದಂತೆ ಒಟ್ಟು ಹನ್ನೆರಡು ಜನರು ತೀವ್ರವಾಗಿ ಸುಟ್ಟು ಹೋಗಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ಹಳದಿ ಶಾಸ್ತ್ರದ ಖುಷಿಯಲ್ಲಿದ್ದ ವಧುವಿನ ಮನೆಯಲ್ಲಿ ಈ ದುರಂತ ಘಟನೆ ನಡೆದಿದೆ. 22 ವರ್ಷದ ಶ್ವೇತಾ ಅವರ ಕುಟುಂಬವು ಮರುದಿನ ನಡೆಯಬೇಕಿದ್ದ ಮದುವೆಗೆ ತಯಾರಿ ನಡೆಸುತ್ತಿದ್ದಾಗ ಸಂಜೆ ಅನಿಲ ದುರಂತ ಸಂಭವಿಸಿದೆ. ಅತಿಥಿಗಳಿಗಾಗಿ ಆಹಾರವನ್ನು ತಯಾರಿಸುತ್ತಿರುವಾಗ, ಗ್ಯಾಸ್ ಸಿಲಿಂಡರ್ ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ:

ಬೆಂಕಿಯನ್ನು ನಂದಿಸಲೆಂದು ಅಲ್ಲಿ ನೆರೆದಿದ್ದ ಜನರು ಒಟ್ಟು ಸೇರಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಕುದಿಯುವ ಎಣ್ಣೆಯ ಬಾಂಡ್ಲಿ ಉರುಳಿ ಬಿದ್ದಿದ್ದು ಇದರಿಂದ ಬೆಂಕಿಯಿಂದ ತೀವ್ರತೆ ಹೆಚ್ಚಾಗಿದೆ. ಬೆಂಕಿಯ ಜ್ವಾಲೆ ಹೆಚ್ಚಾಗಿ ಅಲ್ಲಿ ನೆರೆದಿದ್ದ ಜನರನ್ನು ಬೆಂಕಿ ಆವರಿಸಿಕೊಂಡಿದೆ.

ಗಾಯಗೊಂಡ ಎಲ್ಲಾ ಹನ್ನೆರಡು ಮಂದಿಯನ್ನು ಮೊದಲು ಪ್ರಾಥಮಿಕ ಚಿಕಿತ್ಸೆಗಾಗಿ ಘಟಂಪುರ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸುಟ್ಟ ಗಾಯಗಳ ತೀವ್ರತೆ ಯಿಂದಾಗಿ, ವೈದ್ಯರು ಅವರನ್ನು ವಿಶೇಷ ವೈದ್ಯಕೀಯ ಆರೈಕೆಗಾಗಿ ಕಾನ್ಪುರದ ಉರ್ಸುಲಾ ಆಸ್ಪತ್ರೆಗೆ ಕಳುಹಿಸಿದರು. ಬೆಂಕಿಯಲ್ಲಿ ಗಾಯಗೊಂಡವರಲ್ಲಿ ಶ್ವೇತಾ, ಅವರ ತಂದೆ ಜಗದೀಶ್, ಅಜ್ಜಿ ಉಷಾ, ಸಹೋದರ ಹಂಸರಾಜ್ ಮತ್ತು ಸಮಾರಂಭಕ್ಕಾಗಿ ನೆರೆದಿದ್ದ ಸಂಬಂಧಿಕರು ಮತ್ತು ಅತಿಥಿಗಳು ಸೇರಿದ್ದಾರೆ. ಘಟನೆಯ ಸಮಯದಲ್ಲಿ ಮಹಿಳೆಯರು ಹಾಗೂ ಕುಟುಂಬ ಸದಸ್ಯರು ಮತ್ತು ಐದು ವರ್ಷದ ಮಗುವಿಗೆ ಸುಟ್ಟ ಗಾಯಗಳಾಗಿವೆ.

ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್‌

ಆದರೆ ಈ ದೊಡ್ಡ ದುರಂತ ಸಂಭವಿಸಿದರೂ ಆಶ್ಚರ್ಯ ಘಟನೆ ಎಂದರೆ ವರ ಮತ್ತು ಆತನ ಕುಟುಂಬಸ್ಥರು ಮದುವೆಯನ್ನು ಮುಂದೂಡಿಲ್ಲ. ಈ ಸಂಕಷ್ಟದ ಸಮಯದಲ್ಲಿ ವಧುವಿನ ಕೈ ಹಿಡಿದು ಧೈರ್ಯ ತುಂಬಲು ವರ ನಿರ್ಧರಿಸಿದ್ದು ಆಸ್ಪತ್ರೆಯ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಮತ್ತು ಸಂಬಂಧಿಕರು ಒಟ್ಟಾಗಿ ವೈದ್ಯಕೀಯ ಆವರಣದೊಳಗೆ ಒಂದು ಸಣ್ಣ ಮಂಟಪವನ್ನು ಸಿದ್ಧಪಡಿಸಿದರು. ಆಸ್ಪತ್ರೆ ಉಪಕರಣಗಳು ಮತ್ತು ಪ್ರೀತಿಪಾತ್ರರ ಪ್ರಾರ್ಥನೆಗಳ ನಡುವೆಯೂ ವರನು ವಿವಾಹ ವಿಧಿಗಳನ್ನು ನೆರವೇರಿಸಿದ್ದಾನೆ. ಈ ದುರಂತದ ಹೊರತಾಗಿಯೂ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಭಾವನಾತ್ಮಕ ಕ್ಷಣಕ್ಕೆ ನೆರೆದವರು ಸಾಕ್ಷಿಯಾದರು.