ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೊದಲ ಬಾರಿಗೆ ನವಜಾತ ಶಿಶುವನ್ನು ತನ್ನ ಕೈಗಳಲ್ಲಿ ಹಿಡಿದ ತಂದೆಯ ರಿಯಾಕ್ಷನ್‌ ಹೇಗಿತ್ತು? ವೈರಲ್‌ ಆದ ವಿಡಿಯೋ ನೋಡಿ

Viral Video: ತಂದೆಯೂ ತನ್ನ ಕೈಗಳಲ್ಲಿ ಮೊದಲ ಬಾರಿಗೆ ಅಪ್ಪಿಕೊಳ್ಳುವ ದೃಶ್ಯವೊಂದು ಭಾರೀ ವೈರಲ್ ಆಗಿದೆ. ತಂದೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದಿಡಲು ತಯಾರಿ ನಡೆಸುತ್ತಿರುವುದು, ಉತ್ಸಾಹದ ಹೊರತಾಗಿಯೂ, ಅವರ ಆತಂಕ ವಿಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಮೊದಲ ಬಾರಿಗೆ ಮಗುವನ್ನು ಬರಮಾಡಿಕೊಂಡ ತಂದೆ: ಹೃದಯಸ್ಪರ್ಶಿ ವಿಡಿಯೊ!

ಮೊದಲ ಬಾರಿಗೆ ಮಗುವನ್ನು ಬರಮಾಡಿಕೊಂಡ ತಂದೆ -

Profile
Pushpa Kumari Mar 9, 2026 12:05 PM

ನವದೆಹಲಿ,ಮಾ.9: ಮೊದಲ ಮಗುವನ್ನು ಬರ ಮಾಡಿಕೊಳ್ಳುವ ಖುಷಿ ಎಲ್ಲ ತಂದೆ- ತಾಯಿಯಲ್ಲಿ ಆವಿಸ್ಮರಣೀಯವಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ತಂದೆಯೂ ತನ್ನ ಕೈಗಳಲ್ಲಿ ಮೊದಲ ಬಾರಿಗೆ ಅಪ್ಪಿಕೊಳ್ಳುವ ದೃಶ್ಯವೊಂದು ಭಾರೀ ವೈರಲ್ (Viral Video) ಆಗಿದೆ.ತಂದೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದಿಡಲು ತಯಾರಿ ನಡೆಸುತ್ತಿರುವುದು,ಉತ್ಸಾಹದ ಹೊರತಾಗಿಯೂ, ಅವರ ಆತಂಕ ವಿಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಪೋಷಕರಾಗುವುದು ಜೀವನದ ಅತ್ಯಂತ ಮರೆಯಲಾಗದ ಅನುಭವಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಅನೇಕರಿಗೆ, ಅವರು ತಮ್ಮ ಮಗುವನ್ನು ಮೊದಲ ಬಾರಿಗೆ ಹಿಡಿದಿರುವ ಕ್ಷಣವು ಮರೆಯಲಾಗದ್ದು.. ಇದೀಗ ಮೊದಲ ಮಗುವನ್ನು ಬರ ಮಾಡಿಕೊಂಡ ತಂದೆಯೂ ನವಜಾತ ಶಿಶುವನ್ನು ಹೇಗೆ ಹಿಡಿದಿಡಬೇಕೆಂದು ಖಚಿತವಿಲ್ಲದ ಅವರು ಆತಂಕ ಮತ್ತು ಅತಿಯಾದ ಸಂತೋಷದಿಂದ ಕೈಗಳು ನಡುಗುತ್ತಿರುವ ದೃಶ್ಯ ಕಂಡು ಬಂದಿದೆ. ಒಂದು ಕಡೆ ಮಗುವನ್ನು ಹಿಡಿಯಬೇಕು ಎನ್ನುವ ಬಯಕೆ ಇನ್ನೊಂದು ಕಡೆ ಮಗುವನ್ನು ಹಿಡಿಯಲು ಆತಂಕ ಈ ಎರಡೂ ಭಾವನೆಗಳು ಎದ್ದು ಕಾಣುತ್ತದೆ.

ವಿಡಿಯೋ ನೋಡಿ:



ವೈರಲ್ ಆದ ವಿಡಿಯೊದಲ್ಲಿ ತಂದೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದಿಡಲು ತಯಾರಿ ನಡೆಸುತ್ತಿರುವುದನ್ನು ಕಾಣಬಹುದು. ಅವರ ಉತ್ಸಾಹದ ಹೊರತಾಗಿಯೂ, ಅವರ ಆತಂಕ ಸ್ಪಷ್ಟವಾಗಿ ಗೋಚರಿಸುತ್ತದೆ. ನವಜಾತ ಶಿಶುವನ್ನು ಹೇಗೆ ಹಿಡಿದಿಡಬೇಕೆಂದು ಖಚಿತವಿಲ್ಲದ ಅವರ ಕೈಗಳು ನಡುಗುತ್ತಿವೆ.

Viral Video: ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ಹೈರಾಣ

ಈ ಸಂದರ್ಭದಲ್ಲಿ ಅವರ ಪಕ್ಕದಲ್ಲಿ ಇದ್ದ ವೈದ್ಯರು ಅವರಿಗೆ ಮಾರ್ಗದರ್ಶನ ನೀಡುತ್ತಾರೆ. ಮಗುವನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವುದು ಹೇಗೆ ಎಂದು ಅವರು ತೋರಿಸಿ ಕೊಡುತ್ತಾರೆ‌. ಮಗುವಿನ ತಲೆ ಮತ್ತು ಬೆನ್ನನ್ನು ಹೇಗೆ ಹಿಡಿಯಬೇಕು ಎಂದು ತೋರಿಸಿಕೊಟ್ಟು, ಆ ತಂದೆಗೆ ಬೆಂಬಲ ಸೂಚಿಸಿದ್ದಾರೆ.

ಈ ವೀಡಿಯೊವನ್ನು drsuganyad3vi ಎಂಬ ವೈದ್ಯರು ಹಂಚಿಕೊಂಡಿದ್ದಾರೆ. ಇದು ಈಗಾಗಲೇ 127 ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು ಜೊತೆಗೆ 6.8 ಮಿಲಿಯನ್ ಲೈಕ್‌ಗಳು ಮತ್ತು 32,000 ಕ್ಕೂ ಹೆಚ್ಚು ಕಾಮೆಂಟ್‌ಗಳು ಪಡೆದುಕೊಂಡಿದೆ. ಒಬ್ಬ ಬಳಕೆದಾರರು, ಈ ದೃಶ್ಯ ನನ್ನನ್ನು ಅಳುವಂತೆ ಮಾಡುತ್ತದೆ... ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ತಂದೆ ಮತ್ತು ಮಗುವಿನ ನಡುವಿನ ಬಂಧ ಅದ್ಭುತ ಎಂದು ಬರೆದಿದ್ದಾರೆ.