ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಿಲ್‌ ವಿಚಾರಕ್ಕೆ ನಡೀತು ಬಿಗ್‌ ಫೈಟ್‌- ಇಲ್ಲಿದೆ ವೈರಲ್‌ ವಿಡಿಯೊ

ನೈಋತ್ಯ ಟರ್ಕಿಯ ಮಾರ್ಮರಿಸ್‌ನಲ್ಲಿರುವ ರೆಸ್ಟೋರೆಂಟ್ ಮತ್ತು ಬಾರ್‌ನಲ್ಲಿ ಬಿಲ್ ವಿಚಾರಕ್ಕೆ ಬ್ರಿಟಿಷ್ ಪ್ರವಾಸಿಗರು ಮತ್ತು ಅಲ್ಲಿನ ಬೌನ್ಸರ್‌ಗಳ ನಡುವೆ ಜಗಳ ನಡೆದಿದ್ದು, ಪ್ರವಾಸಿಗರ ಗುಂಪನ್ನು ಬೌನ್ಸರ್‌ಗಳು ಕ್ರೂರವಾಗಿ ಥಳಿಸಿದ್ದಾರೆ. ಈ ಘಟನೆಯ ವಿಡಿಯೊ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಲ್‌ ವಿಚಾರಕ್ಕೆ ನಡೀತು ಬಿಗ್‌ ಫೈಟ್‌- ಇಲ್ಲಿದೆ ವೈರಲ್‌ ವಿಡಿಯೊ

Profile pavithra Jul 17, 2025 2:52 PM

ನೈಋತ್ಯ ಟರ್ಕಿಯ ಮಾರ್ಮರಿಸ್‌ನಲ್ಲಿರುವ ರೆಸ್ಟೋರೆಂಟ್ ಮತ್ತು ಬಾರ್‌ನಲ್ಲಿ ಬಿಲ್ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಬ್ರಿಟಿಷ್ ಪ್ರವಾಸಿಗರ ಗುಂಪನ್ನು ಅಲ್ಲಿನ ಪುರುಷ ಬೌನ್ಸರ್‌ಗಳು ಕ್ರೂರವಾಗಿ ಥಳಿಸಿ, ಅವರನ್ನು ಕಾಲಿನಿಂದ ತುಳಿದಿದ್ದಾರೆ.ಈ ಘಟನೆಯ ವಿಡಿಯೊ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿವೆ.ವೈರಲ್ ಆದ ವಿಡಿಯೊದಲ್ಲಿ ಮ್ಯಾಡ್ ಬಾಯ್ಸ್ ರೆಸ್ಟೋರೆಂಟ್‍ನಲ್ಲಿ ಸುಮಾರು ಐದು ಪುರುಷ ಬೌನ್ಸರ್‌ಗಳು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿ ಪ್ರವಾಸಿಗರ ಗುಂಪನ್ನು ಹೊಡೆದು ಕಾಲಿನಿಂದ ಒದೆಯುತ್ತಿರುವುದು ರೆಕಾರ್ಡ್ ಆಗಿದೆ.

ವಿಡಿಯೊದಲ್ಲಿ ಅವರ ನಡುವೆ ವಾಗ್ವಾದ ಶುರುವಾಗುತ್ತದೆ. ನಂತರ ಗುಂಪಿನಲ್ಲಿದ್ದ ಪುರುಷ ಪ್ರವಾಸಿಗನ ಮೇಲೆ ಬೌನ್ಸರ್‌ಗಳು ಹಲ್ಲೆ ಮಾಡಿದ್ದು, ಆಗ ಇಬ್ಬರು ಮಹಿಳಾ ಪ್ರವಾಸಿಗರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆಗ ನಡೆದ ಜಗಳದಲ್ಲಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದ ಮಹಿಳೆಯರನ್ನು ತುಳಿದು ನೆಲಕ್ಕೆ ಬೀಳುವಂತೆ ಮಾಡಲಾಗಿದೆ. ಆಗ ಬಿದ್ದ ಮಹಿಳೆಯರನ್ನು ಬೌನ್ಸರ್‌ಗಳು ಪದೇ ಪದೇ ಕಾಲಿನಿಂದ ಒದೆದಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



5,000 TL (£92) ಬಿಲ್ ವಿಚಾರಕ್ಕೆ ಈ ಜಗಳ ನಡೆದಿದೆ ಎಂದು ವರದಿಯಾಗಿದೆ. ಪ್ರವಾಸಿಗರು ಹಣ ಪಾವತಿಸಲು ನಿರಾಕರಿಸಿದರು. ಇದು ಜಗಳಕ್ಕೆ ಕಾರಣವಾಯಿತು ಮತ್ತು ಜಗಳದ ವೇಳೆ ಮೊದಲು ಪ್ರವಾಸಿಗರೇ ದಾಳಿ ಮಾಡಿದ್ದಾರೆ ಎಂದು ರೆಸ್ಟೋರೆಂಟ್ ಆಡಳಿತ ಮಂಡಳಿ ಹೇಳಿಕೊಂಡಿದೆ.

ಈ ಘಟನೆಯ ನಂತರ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದ್ದರೂ, ಎರಡೂ ಕಡೆಯವರು ದೂರು ದಾಖಲಿಸದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು. ಆದರೆ ಈ ಗ್ರಾಫಿಕ್ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗಲು ಶುರುವಾದ ನಂತರ ಈ ಘಟನೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಪರಿಸ್ಥಿತಿ ಬದಲಾಗಿ ನಂತರ ಇದು ಅಧಿಕೃತ ತನಿಖೆಗೆ ನಾಂದಿ ಹಾಡಿತು. ಪರಿಣಾಮವಾಗಿ, ಐದು ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಯಿತು. ಪುರಸಭೆಯ ಅಧಿಕಾರಿಗಳು ನಂತರ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ರೆಸ್ಟೋರೆಂಟ್ ಅನ್ನು ಅನಿರ್ದಿಷ್ಟಾವಧಿಗೆ ಸೀಲ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಆಕಾಶದಲ್ಲಿ ಮದುವೆಯಾದ ಜೋಡಿ; ಏನಿದು ವೈರಲ್‌ ವಿಡಿಯೊ?

ಈ ಹಿಂದೆ ಗ್ರೇಟರ್ ನೋಯ್ಡಾದ ಸೊಸೈಟಿಯೊಂದರ ನಿವಾಸಿಗಳ ನಡುವೆ ಲಿಫ್ಟ್ ಒಳಗೆ ಜಗಳ ನಡೆದಿದ್ದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿ ಕೂಡಲೇ ಅದರ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡಿ ವೈರಲ್ ಆಗಿದೆ. ಹಿಂಸಾತ್ಮಕ ಜಗಳದಲ್ಲಿ ಒಂದು ಡಜನ್‌ಗೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ಘಟನೆ ಇಟಾ II ಸೆಕ್ಟರ್‌ನಲ್ಲಿರುವ ಮಿಗ್ಸನ್ ವಿನ್ ಸೊಸೈಟಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮದ್ಯ ಸೇವಿಸಿದ ನಂತರ ಸೊಸೈಟಿಯ ಎರಡು ಗುಂಪುಗಳ ನಡುವೆ ಜಗಳ ಭುಗಿಲೆದ್ದಿದೆ ಎಂದು ವರದಿಯಾಗಿದೆ.