ಎತ್ತಿನ ಬಂಡಿ ಏರಿ ಭಾರತೀಯ ಗ್ರಾಮೀಣ ವೈಭವ, ಸಂಸ್ಕೃತಿ ಕಣ್ತುಂಬಿಕೊಂಡ ವಿದೇಶಿ ಪ್ರವಾಸಿಗರು
ಗ್ರಾಮೀಣ ಜೀವನ ಶೈಲಿಗೆ ಮನಸೋತ ವಿದೇಶಿ ಪ್ರವಾಸಿಗರು ಹಳ್ಳಿಯ ಜೀವನವನ್ನು ಅನುಭವಿಸಲು ಸಾಂಪ್ರದಾಯಿಕ ಎತ್ತಿನ ಬಂಡಿ ಏರಿದ ಘಟನೆಯೊಂದು ನಡೆದಿದೆ. ಈ ಅಪ ರೂಪದ ದೃಶ್ಯ ಮಧ್ಯ ಪ್ರದೇಶದ ವಿಶ್ವವಿಖ್ಯಾತ ಪ್ರವಾಸಿ ತಾಣ ಖಜುರಾಹೊದಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಎತ್ತಿನ ಬಂಡಿ ಏರಿ ಸಂಸ್ಕೃತಿ ಸವಿದ ವಿದೇಶಿ ಪ್ರವಾಸಿಗರು -
ಭೋಪಾಲ್, ಡಿ. 21: ಭಾರತೀಯ ಸಂಪ್ರದಾಯ, ಸಂಸ್ಕೃತಿ, ಆಚರಣೆ ವಿಭಿನ್ನ, ಅನನ್ಯ. ಇತ್ತೀಚೆಗೆ ವಿದೇಶಿಗರು ಭಾರತಕ್ಕೆ ಭೇಟಿ ನೀಡುವ ಸಂಖ್ಯೆ ಹೆಚ್ಚಾಗುತ್ತಿದ್ದು ಇಲ್ಲಿನ ಆಚರಣೆಗೆ ಅವರೂ ಮನ ಸೋತಿದ್ದಾರೆ. ಇಲ್ಲಿನ ಗ್ರಾಮೀಣ ಜೀವನಶೈಲಿಗೆ ಮಾರು ಹೋದ ವಿದೇಶಿ ಪ್ರವಾಸಿಗರು ಹಳ್ಳಿಯ ಜೀವನವನ್ನು ಅನುಭವಿಸಲು ಸಾಂಪ್ರದಾಯಿಕ ಎತ್ತಿನ ಬಂಡಿಯನ್ನು ಏರಿದ್ದದಾರೆ. ಈ ಅಪರೂಪದ ದೃಶ್ಯ ಮಧ್ಯ ಪ್ರದೇಶದ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಖಜುರಾಹೊದಲ್ಲಿ ನಡೆದಿದೆ. ಸದ್ಯ ಪ್ರವಾಸಿಗರು ಎತ್ತಿನ ಬಂಡಿಯಲ್ಲಿ ಪ್ರಯಾಣಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.
ಖಜುರಾಹೊದಲ್ಲಿ ಬುಂದೇಲ್‌ಖಂಡ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದಕ್ಕಾಗಿ ಅವರು ಐಷಾರಾಮಿ ಸಂಚಾರ ವಾಹನಗಳನ್ನು ಬಿಟ್ಟು ಸಾಂಪ್ರದಾಯಿಕ ಎತ್ತಿನ ಬಂಡಿಯನ್ನು ಬಳಸಿಕೊಂಡಿದ್ದಾರೆ. ಇವರು ಸ್ವಿಟ್ಜರ್ಲೆಂಡ್‌ನಿಂದ ಬಂದವರು ಎನ್ನಲಾಗಿದೆ. ಆ ಪೈಕಿ ಮಿಚೆಲ್ ಮೊರೆಲ್, ರಮೋನಾ ಸೇರಿದಂತೆ ನಾಲ್ವರು ಪ್ರವಾಸಿಗರಿದ್ದರು.
ವಿಡಿಯೊ ನೋಡಿ:
Foreign Tourists Ride Bullock Cart In Khajuraho To Experience Village Life#MadhyaPradesh #MPNews #FreePressMP pic.twitter.com/52ujMNrkhW
— Free Press Madhya Pradesh (@FreePressMP) December 20, 2025
ಈ ವಿದೇಶಿ ಪ್ರವಾಸಿಗರು ಬುಂದೇಲ್‌ಖಂಡದ ಗ್ರಾಮೀಣ ಸಂಸ್ಕೃತಿ, ಅಲ್ಲಿನ ಜನರ ಆತಿಥ್ಯ ಅನು ಭವಿಸಲು ಎತ್ತಿನ ಬಂಡಿ ಪ್ರಯಾಣವನ್ನು ಆರಿಸಿಕೊಂಡಿದ್ದಾರೆ. ಎತ್ತಿನ ಬಂಡಿಯಲ್ಲಿ ಕುಳಿತು ಅವರು ಅತ್ಯಂತ ಖುಷಿಯಿಂದ ಪ್ರಯಾಣ ಬೆಳೆಸಿದ್ದಾರೆ. ಇವರ ಈ ನಡೆಯು ಭಾರತೀಯ ಪರಂಪರೆಯ ಮೇಲಿರುವ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ಪ್ರವಾಸಿ ಪ್ರಯಾಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಭಾರತದ ಗ್ರಾಮೀಣ ಅನುಭವವನ್ನು ಅವರು ಮನಸಾರೆ ಮೆಚ್ಚಿಕೊಂಡಿದ್ದಾರೆ.
ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?
ವಿದೇಶಿ ಪ್ರಯಾಣಿಕರು ಭಾರತದ ಗ್ರಾಮೀಣ ಸಂಪ್ರದಾಯ ಸರಳ ಜೀವನಶೈಲಿ, ಬುಂದೇಲ್‌ಖಂಡ್ ಜನರ ಭಾಷೆ, ಪದ್ಧತಿಯನ್ನು ಆಸಕ್ತಿಯಿಂದ ಕೇಳಿಸಿಕೊಂಡಿದ್ದಾರೆ. ಈ ಅನುಭವದ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಂತಹ ದೃಶ್ಯಗಳು ಭಾರತೀಯ ಸಂಸ್ಕೃತಿಯನ್ನು ಮತ್ತಷ್ಟು ಬೆಳೆಸುತ್ತವೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಭಾರತೀಯ ಗ್ರಾಮೀಣ ಪ್ರವಾ ಸೋದ್ಯಮವನ್ನು ಸುಧಾರಿಸಲು ನಮಗೆ ಇನ್ನಷ್ಟು ಪ್ರೇರಣೆ ಎಂದು ಹೇಳಿದ್ದಾರೆ.