ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೂಡಿಕೆಗಳ ಮೇಲೆ ಹೆಚ್ಚಿನ ಆದಾಯ; ನಕಲಿ ವಿಡಿಯೊ ಬಗ್ಗೆ ಸುಧಾಮೂರ್ತಿ ಬೇಸರ

ಹಣಕಾಸು ಹೂಡಿಕೆ ಯೋಜನೆಗಳನ್ನು ಪ್ರಚಾರ ಮಾಡುವ ತಮ್ಮ ನಕಲಿ ವಿಡಿಯೊ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭಾ ಸಂಸದೆ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಈ ಬಗ್ಗೆ ಜನರು ಎಚ್ಚರ ವಹಿಸುವಂತೆ ತಿಳಿಸಿದರು. ವಿಡಿಯೊ ಸಂದೇಶದಲ್ಲಿ ತಾವು ಎಂದಿಗೂ ಜನರಿಗೆ ಹೂಡಿಕೆ ಮಾಡಲು ಪ್ರೇರೇಪಿಸುವುದಿಲ್ಲ ಎಂದು ಹೇಳಿದ್ದಾರೆ.

ನಕಲಿ ವಿಡಿಯೊ ಬಗ್ಗೆ ಸುಧಾ ಮೂರ್ತಿ ಕಳವಳ

ಸುಧಾಮೂರ್ತಿ (ಸಂಗ್ರಹ ಚಿತ್ರ) -

ಬೆಂಗಳೂರು: ಹಣಕಾಸು ಹೂಡಿಕೆಗಳ (money investments) ಬಗ್ಗೆ ತಾವು ಎಂದಿಗೂ ವಿಡಿಯೊ (Fake video) ಸಂದೇಶ ಕಳುಹಿಸುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (deep fake video) ಆಗಿರುವ ತಮ್ಮ ವಿಡಿಯೊ ನಕಲಿ ಎಂದು ರಾಜ್ಯಸಭಾ ಸಂಸದೆ (Rajya Sabha MP) ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ (Infosys Foundation chairperson ) ಸುಧಾ ಮೂರ್ತಿ (Sudha Murty) ಹೇಳಿದ್ದಾರೆ. ತಾವು ಹಣವನ್ನು ಹೂಡಿಕೆ ಮಾಡುವ ಬಗ್ಗೆ ಮಾತನಾಡುವುದನ್ನು ತೋರಿಸುವ ವಿಡಿಯೊಗಳು ಸಂಪೂರ್ಣ ಸುಳ್ಳು. ಈ ಬಗ್ಗೆ ನಂಬಿರುವ ಅನೇಕರು ಹೂಡಿಕೆ ಮಾಡಿ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಮಾಹಿತಿ ನೀಡಿದ ಅವರು, ತಾವು ಎಂದಿಗೂ ವಿಡಿಯೊ ಸಂದೇಶ ಮಾಡಿ ಹೂಡಿಕೆಗೆ ಹೇಳುವುದಿಲ್ಲ. ಇಂತಹ ವಂಚನೆಯ ವಿಡಿಯೊಗಳಲ್ಲಿ ಹೇಳಿರುವ ಮಾಹಿತಿಗಳು ಸಂಪೂರ್ಣ ಸುಳ್ಳು. ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಲಾದ ಈ ವಿಡಿಯೊಗಳನ್ನು ತಮ್ಮ ಒಪ್ಪಿಗೆಯಿಲ್ಲದೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ ಎಂದ ಅವರು, ಯಾವುದೇ ರೀತಿಯಲ್ಲಿ ಹೂಡಿಕೆ ಮಾಡುವಾಗ ವಿಶ್ವಾಸಾರ್ಹ ಬ್ಯಾಂಕುಗಳು ಅಥವಾ ಅಧಿಕೃತ ಮೂಲಗಳಲ್ಲೇ ನಡೆಸುವಂತೆ ಅವರು ತಿಳಿಸಿದರು.

ಮೋದಿ ತವರಿನಲ್ಲಿ ಉದ್ಘಾಟನೆಗೂ ಮುನ್ನವೇ ಕುಸಿದ 21 ಕೋಟಿ ರೂ. ಮೌಲ್ಯದ ನೀರಿನ ಟ್ಯಾಂಕ್; ತಪ್ಪಿದ ಭಾರಿ ದುರಂತ

ವೈರಲ್ ಮಾಡಿರುವ ವಿಡಿಯೊದಲ್ಲಿ ಹಣಕಾಸು ಯೋಜನೆಗಳು ಮತ್ತು ಹೂಡಿಕೆಗಳ ಬಗ್ಗೆ ಪ್ರಚಾರ ಮಾಡಲು ನನ್ನ ಚಿತ್ರ ಮತ್ತು ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಈ ನಕಲಿ ವಿಡಿಯೊಗಳ ಬಗ್ಗೆ ಎಚ್ಚರವಹಿಸಿ. ಇವನ್ನು ಒಪ್ಪಿಗೆ ಇಲ್ಲದೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.



ನನಗೆ ತಿಳಿದ ಅನೇಕರು ಈ ವಿಡಿಯೊ ನೋಡಿ ಹೂಡಿಕೆ ಮಾಡಿ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದ ಸುಧಾ ಮೂರ್ತಿ, ಅಸಾಧಾರಣವಾಗಿ ಹೆಚ್ಚಿನ ಆದಾಯ ಭರವಸೆ ನೀಡುವ ಈ ಯೋಜನೆಗಳ ಬಗ್ಗೆ ಇರುವ ವಿಡಿಯೊವನ್ನು ಡೀಪ್ ಫೇಕ್ ಮಾಡಲಾಗಿದೆ. ಇಂತಹ ವಿಡಿಯೊಗಳು ಹೆಚ್ಚಾಗಿ ಬಳಕೆದಾರರ ವೈಯಕ್ತಿಕ ಮತ್ತು ಸೂಕ್ಷ್ಮ ಡೇಟಾವನ್ನು ಕದಿಯಲು ವಿನ್ಯಾಸಗೊಳಿಸಿರುವ ನಕಲಿ ವೆಬ್‌ಸೈಟ್‌ಗಳಿಗೆ ಮರುನಿರ್ದೇಶಿಸುವ ಲಿಂಕ್‌ಗಳನ್ನು ಒಳಗೊಂಡಿರುತ್ತವೆ ಎಂದು ಅವರು ಹೇಳಿದರು.

ತಂದೆ–ಮಗಳಿಗೆ 1 ಲಕ್ಷ ರುಪಾಯಿ ಪರಿಹಾರ ನೀಡಲು ಏರ್ ಇಂಡಿಯಾಗೆ ಆದೇಶಿಸಿದ ಗ್ರಾಹಕ ನ್ಯಾಯಾಲಯ; ಏನಿದು ಪ್ರಕರಣ?

ಇಂತಹ ಮೋಸದ ವಿಡಿಯೊಗಳನ್ನು ಆಧರಿಸಿ ಯಾವುದೇ ಹಣಕಾಸಿನ ಹೂಡಿಕೆಗಳ ಬಗ್ಗೆ ನಿರ್ಧಾರ ಮಾಡಬೇಡಿ. ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ. ಇಂತಹ ಯಾವುದೇ ವಿಷಯ ಕಂಡು ಬಂದರು ವರದಿಮಾಡಿ. ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳ ಡೀಪ್‌ಫೇಕ್ ವಿಡಿಯೊಗಳು ಬಂದಿವೆ. ಇದೀಗ ಸುಧಾಮೂರ್ತಿ ಅವರ ಡೀಪ್‌ಫೇಕ್ ವಿಡಿಯೊ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಜನರನ್ನು ಆಕರ್ಷಿಸುತ್ತಿರುವುದನ್ನು ಕಾಣಬಹುದಾಗಿದೆ.