ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಚಿತ ಬಸ್ ಉದ್ಘಾಟನೆ ವೇಳೆ ಕೇರಳಂ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ: ವಿಡಿಯೊ ವೈರಲ್

Viral Video: ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸುವ ‘ಪ್ರಿಯದರ್ಶಿನಿ’ ಯೋಜನೆಗೆ ಕೇರಳಂ ಸರ್ಕಾರ ಚಾಲನೆ ನೀಡಿದೆ. ಉದ್ಘಾಟನೆ ಸಮಾರಂಭದ ವೇಳೆ ಸಚಿವೆ ಬಿಂದು ಕೃಷ್ಣ ಅವರ ಮೇಲೆ ಬಿಸಿ ಬಿಸಿ ಪಾಯಸ ಚೆಲ್ಲಿದ ಘಟನೆ ನಡೆದಿದೆ. ಉದ್ಘಾಟನೆಯ ಸಂದರ್ಭದಲ್ಲಿ ಬಸ್‌ನೊಳಗೆ ವಿತರಿಸುತ್ತಿದ್ದ ಪಾಯಸವು ತಪ್ಪಿ ಆಕಸ್ಮಿಕವಾಗಿ ಅವರ ತಲೆಯ ಮೇಲೆ ಬಿದ್ದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಸ್‌ನೊಳಗೆ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ!

ಬಸ್‌ನೊಳಗೆ ಕೇರಳಂ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಪಾಯಸ -

Profile
Pushpa Kumari Jun 16, 2026 8:28 PM

ತಿರುವನಂತಪುರಂ, ಜೂ. 16: ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ‘ಪ್ರಿಯದರ್ಶಿನಿ’ ಯೋಜನೆಗೆ ಕೇರಳಂ ಸರ್ಕಾರ ಚಾಲನೆ ನೀಡಿದೆ. ಈ ಸಮಾರಂಭದ ಉದ್ಘಾಟನೆ ವೇಳೆ ಸಚಿವೆ ಬಿಂದು ಕೃಷ್ಣ ವಿಚಿತ್ರ ಸನ್ನಿವೇಶ ಎದುರಿಸಿದ್ದಾರೆ. ಹೌದು, ಕೇರಳಂನ ನೂತನ ಸರ್ಕಾರದ ಬಹುನಿರೀಕ್ಷಿತ ಯೋಜನೆಯಾದ ಇದರ ಉದ್ಘಾಟನೆಯ ಸಂದರ್ಭದಲ್ಲಿ ಬಸ್‌ನೊಳಗೆ ಪಾಯಸ ವಿತರಿಸಲಾಯಿತು. ಈ ವೇಳೆ ತಪ್ಪಿ ಬಿಸಿ ಬಿಸಿ ಪಾಯಸ ಆಕಸ್ಮಿಕವಾಗಿ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿದ್ದಿದೆ. ಸಚಿವೆ ಕೆಲವು ಕ್ಷಣ ಕೋಪಗೊಂಡರೂ ತಕ್ಷಣವೇ ಶಾಂತರಾಗಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

'ಪ್ರಿಯದರ್ಶಿನಿ' ಯೋಜನೆಯ ಉಚಿತ ಪ್ರಯಾಣದ ಭಾಗವಾಗಿ ಸಚಿವೆ ಕೊಲ್ಲಂನಲ್ಲಿ ಬಸ್ ಹತ್ತಿದ್ದರು. ಯೋಜನೆಯ ಆರಂಭದ ಭಾಗವಾಗಿ ಕೆಲವು ಉತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರು ಬಸ್‌ನಲ್ಲಿ ಪಾಯಸ ವಿತರಿಸುತ್ತಿದ್ದರು. ಇದೇ ವೇಳೆ ವಿತರಿಸುತ್ತಿದ್ದ ಬಿಸಿ ಪಾಯಸ ಆಕಸ್ಮಿಕವಾಗಿ ಡೇರಿ ಅಭಿವೃದ್ಧಿ ಸಚಿವೆ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿದ್ದಿದೆ.

ವಿಡಿಯೊ ನೋಡಿ:



​ಪಾಯಸ ತಲೆಗೆ ಬಿದ್ದ ತಕ್ಷಣ ಸಚಿವೆ ಸಿಡಿಮಿಡಿಗೊಂಡರಾದರೂ, ತಕ್ಷಣವೇ ಸಮಾಧಾನದಿಂದ ತಾವೇ ಪಾಯಸವನ್ನು ಒರೆಸಿ ಕೊಂಡರು. ಸುತ್ತಮುತ್ತಲಿನವರು ಸ್ವಚ್ಛಗೊಳಿಸಲು ಸಹಾಯ ಮಾಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು

ವೈರಲ್ ಆದ ವಿಡಿಯೊದಲ್ಲಿ ಬಸ್‌ನಲ್ಲಿ ಬಹಳಷ್ಟು ಮಹಿಳೆಯರಿರುವುದು ಗೊತ್ತಾಗುತ್ತಿದೆ. ಈ ಸಂದರ್ಭದಲ್ಲಿ ಜನರಿಗೆ ಹಂಚುತ್ತಿದ್ದ ಪಾಯಸವು ಕೈ ತಪ್ಪಿ ಸಚಿವೆಯ ತಲೆ ಹಾಗೂ ಮೈಗೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಬೆಂಬಲಿಗರು ಪಾಯಸ ಒರೆಸಿಕೊಳ್ಳಲು ಸಹಾಯ ಮಾಡುತ್ತಿರುವುದನ್ನೂ ಕಾಣಬಹುದು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದು 'ಇಂದಿರಾ ಗ್ಯಾರಂಟಿ'ಗಳಲ್ಲಿ 'ಪ್ರಿಯದರ್ಶಿನಿ' ಯೋಜನೆ ಕೂಡ ಒಂದು. ಈ ಯೋಜನೆಗೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿರುವನಂತಪುರದ ಕೆಎಸ್‌ಆರ್‌ಟಿಸಿ ಸಂಕೀರ್ಣದಲ್ಲಿ ಚಾಲನೆ ನೀಡಿದರು. ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್‌ಗಳಿಗೆ ಉಚಿತ ಪ್ರಯಾಣವನ್ನು ಖಾತ್ರಿಪಡಿಸಲು ಯೋಜನೆ ಜಾರಿ ಮಾಡಲಾಗಿದೆ.