ಈಜುಕೊಳದಲ್ಲಿ ಪ್ರಜ್ಞೆ ತಪ್ಪಿ ತೇಲುತ್ತಿದ್ದ 6 ವರ್ಷದ ಮಗುವಿನ ಪ್ರಾಣ ಉಳಿಸಿದ ಅಧಿಕಾರಿ; ವಿಡಿಯೋ ವೈರಲ್
Viral Video: ಫ್ಲೋರಿಡಾದ ಈಜುಕೊಳದಲ್ಲಿ ಆರು ವರ್ಷದ ಮಗುವೊಂದು ಪ್ರಜ್ಞೆ ತಪ್ಪಿ ತೇಲುತ್ತಿದ್ದಂತೆ ICE ಅಧಿಕಾರಿ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿದ್ದಾರೆ. ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್ ಫೋರ್ಸ್‌ಮೆಂಟ್ (ICE) ಅಧಿಕಾರಿ ಪ್ರಾಣ ಉಳಿಸಿರುವ ಸಿಸಿಟಿವಿ ದೃಶ್ಯ ಭಾರೀ ವೈರಲ್ ಆಗಿದೆ. ನೀರಿನ ಮೇಲೆ ಮಗು ತೇಲುತ್ತಿರುವುದನ್ನ ಕಂಡ ಅವರು ಒಂದು ಕ್ಷಣವೂ ತಡಮಾಡದೆ ಧರಿಸಿದ್ದ ಬಟ್ಟೆಯಲ್ಲೇ ನೇರವಾಗಿ ನೀರಿಗೆ ಜಿಗಿದಿದ್ದಾರೆ..
ಸಂಗ್ರಹ ಚಿತ್ರ -
ಫ್ಲೋರಿಡಾ,ಜೂ.18: ಇತ್ತೀಚೆಗೆ ಈಜುಕೊಳದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಅನೇಕ ಘಟನೆಗಳು ವರದಿಯಾಗಿವೆ. ಇದೀಗ ಫ್ಲೋರಿಡಾದ ಈಜುಕೊಳದಲ್ಲಿ ಆರು ವರ್ಷದ ಮಗುವೊಂದು ಪ್ರಜ್ಞೆ ತಪ್ಪಿ ತೇಲುತ್ತಿದ್ದಂತೆ ICE ಅಧಿಕಾರಿ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿದ್ದಾರೆ. ಇಮಿ ಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿ ಪ್ರಾಣ ಉಳಿಸಿರುವ ಸಿಸಿಟಿವಿ ದೃಶ್ಯ ಭಾರೀ ವೈರಲ್ (Viral News) ಆಗಿದೆ. ನೀರಿನ ಮೇಲೆ ಮಗು ತೇಲುತ್ತಿರುವುದನ್ನ ಕಂಡ ಅವರು ಒಂದು ಕ್ಷಣವೂ ತಡಮಾಡದೆ ಧರಿಸಿದ್ದ ಬಟ್ಟೆಯಲ್ಲೇ ನೇರವಾಗಿ ನೀರಿಗೆ ಜಿಗಿದಿದ್ದಾರೆ.
ಮುಳುಗುತ್ತಿದ್ದ ಆರು ವರ್ಷದ ಮಗುವನ್ನು ರಕ್ಷಿಸುವ ಮೂಲಕ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಯ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಫ್ಲೋರಿಡಾದ ಈಜುಕೊಳದಲ್ಲಿ ಈ ಘಟನೆ ಕಂಡು ಬಂದಿದ್ದು ಮಗುವೊಂದು ನೀರಿನಲ್ಲಿ ಸಿಲುಕಿ ಒದ್ದಾಡುತ್ತಿತ್ತು. ಯಾವುದೇ ಚಲನೆ ಇಲ್ಲದೆ ಇರುವುದನ್ನು ಗಮನಿಸಿದ ಅಧಿಕಾರಿ ತಡಮಾಡದೇ ನೀರಿಗೆ ಇಳಿದಿದ್ದಾರೆ.
ವಿಡಿಯೋ ನೋಡಿ:
ICE officer Gregory Simmonds spots a six-year-old boy floating unconscious in a public pool in Pasco County, Florida on May 16 and jumps in without hesitation.
— TWT UNLEASHED (@TWT_UNLEASHED) June 17, 2026
He pulls the child from the water and performs CPR until the boy regains consciousness. Local authorities say the… pic.twitter.com/Z4uDmMRFNu
ಇವರು ಟ್ಯಾಂಪಾದಲ್ಲಿನ ICE ನ ಎನ್‌ಫೋರ್ಸ್‌ಮೆಂಟ್ ಅಂಡ್ ರಿಮೂವಲ್ ಆಪರೇಷನ್ಸ್ (ERO) ಕಚೇರಿಯಲ್ಲಿ ಅಧಿಕಾರಿಯಾಗಿದ್ದು ಇಲ್ಲಿ ಸಮಯ ಕಳೆಯಲೆಂದು ಈಜು ಕೊಳಕ್ಕೆ ಬಂದಿದ್ದರು. ಆದರೆ ಮಗು ಅಪಾಯಕಾರಿ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಒಂದು ಕ್ಷಣವೂ ತಡಮಾಡದೆ ಸಮಯ ಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ನೀರಿನಿಂದ ಹೊರಗೆ ತಂದು ಕೊಳದ ದಡದಲ್ಲಿ ಮಲಗಿಸಿದರು.
ತುರ್ತು ಸಂದರ್ಭಗಳಲ್ಲಿ ಮಗುವಿಗೆ CPR ಮತ್ತು ರಕ್ಷಣಾ ಪ್ರಯತ್ನಗಳನ್ನು ಆರಂಭಿಸಿದರು. ಮಗುವಿಗೆ ಪ್ರಜ್ಞೆ ಬರುವವರೆಗೂ ಅವರು ಈ ತುರ್ತು ಚಿಕಿತ್ಸೆಯನ್ನು ಮುಂದುವರಿಸಿದರು.. ಈ ಚಿಕಿತ್ಸೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಧಿಕಾರಿಯ ಈ ಧೈರ್ಯದ ಕೆಲಸಕ್ಕೆ ಸ್ಥಳೀಯ ಮತ್ತು ಫೆಡರಲ್ ಅಧಿಕಾರಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರ ರೊಬ್ಬರು ಮಗುವಿನ ಪ್ರಾಣ ಉಳಿಸಿರಿವುದು ನಿಜಕ್ಕೂ ಪ್ರಶಂಸನೀಯ.. ನಿಮಗೆ ಒಳಿತಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅಧಿಕಾರಿಯ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.