ನಾನು ಇನ್ನೂ ಬದುಕಿದ್ದೇನೆ: ಸಾವಿನ ವದಂತಿಗೆ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ
ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ತಯಾರಿಸಿರುವ ತಮ್ಮ ಸಾವಿನ ವಿಡಿಯೊ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು, ಮಾರ್ಚ್ 12ರಂದು ದೂರದರ್ಶನದಲ್ಲಿ ಪ್ರಸಾರವಾದ ತಮ್ಮ ಭಾಷಣವನ್ನು ಎಐ ಬಳಸಿ ಸೃಷ್ಟಿಸಲಾಗಿದೆ ಎಂದು ಹೇಳಿದರು.
ಸಂಗ್ರಹ ಚಿತ್ರ -
ಇಸ್ರೇಲ್: ನಾನು ಜೀವಂತವಾಗಿದ್ದೇನೆ ಎಂದು ಸಾವಿನ ವದಂತಿಗಳ ನಡುವೆ ಇಸ್ರೇಲ್ ಪ್ರಧಾನಿ (Israeli Prime Minister) ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ಮಾರ್ಚ್ 12ರಂದು ದೂರದರ್ಶನದಲ್ಲಿ ಪ್ರಸಾರವಾದ ತಮ್ಮ ಭಾಷಣವನ್ನು ಕೃತಕ ಬುದ್ಧಿಮತ್ತೆಯನ್ನು (Artificial Intelligence) ಬಳಸಿ ಸೃಷ್ಟಿಸಲಾಗಿದೆ ಎಂದು ಹೇಳಿರುವ ಅವರು, ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮತ್ತೊಮ್ಮೆ ತಮ್ಮ ಸಾವಿನ ವದಂತಿಗಳನ್ನು ತಳ್ಳಿಹಾಕಿದರು. ಹಲವಾರು ವಿದೇಶಿ ಪತ್ರಿಕೆಗಳಲ್ಲಿ ತಮ್ಮ ಸಾವಿನ ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದಿರುವ ಅವರು, ನಾನು ಜೀವಂತವಾಗಿದ್ದೇನೆ. ಇದಕ್ಕೆ ನೀವೆಲ್ಲರೂ ಸಾಕ್ಷಿಗಳು ಎಂದು ಹೇಳಿದರು.
ಫೆಬ್ರವರಿ 28ರಂದು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸೇನಾ ಪಡೆಯು ನಡೆಸಿದ ದಾಳಿಯ ಬಳಿಕ ತಮ್ಮ ಎರಡನೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ರೋರಿಂಗ್ ಲಯನ್ ಬಗ್ಗೆ ಸ್ಪಷ್ಟಿಕರಣ ನೀಡಲು ನಾನು ಬಯಸುತ್ತೇನೆ ಎಂದ ತಿಳಿಸಿದರು.
Physical Abuse: 58 ಮಹಿಳೆಯರಿಗೆ 3 ವರ್ಷ ಅತ್ಯಾಚಾರ, ರಹಸ್ಯ ಕ್ಯಾಮೆರಾ ಇಟ್ಟು ಬ್ಲ್ಯಾಕ್‌ಮೇಲ್: ಜ್ಯೋತಿಷಿಯ ಸೆರೆ
ಮಾರ್ಚ್ 12ರಂದು ದೂರದರ್ಶನದಲ್ಲಿ ಪ್ರಸಾರವಾಗಿರುವ ತಮ್ಮ ಭಾಷಣವನ್ನು ಕೃತಕ ಬುದ್ದಿ ಮತ್ತೆಯನ್ನು ತಯಾರಿಸಿ ರಚಿಸಲಾಗಿದೆ ಎಂದ ಅವರು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ವದಂತಿಗಳು ಹುಟ್ಟಿಕೊಂಡವು. ಈ ವಿಡಿಯೊದಲ್ಲಿ ತಮ್ಮ ಒಂದು ಕೈಯಲ್ಲಿ ಆರು ಬೆರಳುಗಳಿರುವುದನ್ನು ತೋರಿಸಲಾಗಿದೆ ಎಂದು ಹೇಳಿದರು.
ಮಾರ್ಚ್ 15ರಂದು ಈ ವದಂತಿಯ ಕುರಿತು ನೆತನ್ಯಾಹು ಸ್ಪಷ್ಟಿಕರಣವನ್ನು ನೀಡಿ ಒಂದು ಸಣ್ಣ ವಿಡಿಯೊ ಪ್ರಕಟಿಸಿದರು. ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಅವರು ಹಂಚಿಕೊಂಡ ವಿಡಿಯೊದಲ್ಲಿ ಜೆರುಸಲೆಮ್‌ನ ಹೊರಗಿನ ಕೆಫೆಯಲ್ಲಿ ಹಬೆಯಾಡುವ ಕಪ್ ನೊಂದಿಗೆ ನಾನು ಕಾಫಿ ಕುಡಿಯಲು ಸತ್ತಿದ್ದೇನೆ ಎಂದು ವ್ಯಂಗ್ಯವಾಗಿ ಹೇಳಿದ್ದರು. ಬಳಿಕ ಕೆಮರಾದತ್ತ ಕೈ ಎತ್ತಿ, ನೀವು ನನ್ನ ಬೆರಳುಗಳ ಸಂಖ್ಯೆಯನ್ನು ಎಣಿಸಲು ಬಯಸುತ್ತೀರಾ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಅನೇಕ ಬಳಕೆದಾರರು ಪ್ರತಿಕ್ರಿಯಿಸಿ ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿ ತಯಾರಿಸಲಾಗಿದೆ ಎಂದು ಹೇಳಿದ್ದರು. ಅಮೆರಿಕದ ರಾಯಭಾರಿಯೊಂದಿಗಿನ ಈ ಕ್ಲಿಪ್‌ನಲ್ಲಿ ನೆತನ್ಯಾಹು ಸಾವಿನ ವದಂತಿಗಳನ್ನು ತಳ್ಳಿಹಾಕಿದ್ದರು. ಮಾರ್ಚ್ 17 ರಂದು ಮತ್ತೆ ಬೆಂಜಮಿನ್ ನೆತನ್ಯಾಹು ಅವರು ಸಾವಿನ ವದಂತಿಗಳನ್ನು ತಳ್ಳಿಹಾಕಲು ಮತ್ತೊಂದು ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.
ಅವರು ತಮ್ಮ ವೈಯಕ್ತಿಕ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೊದಲ್ಲಿ ಅವರು ಇಸ್ರೇಲ್‌ನ ಅಮೆರಿಕದ ರಾಯಭಾರಿ ಮೈಕ್ ಹಕಬೀ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಾಣಬಹುದಾಗಿದೆ. ಇದರಲ್ಲಿ ಹಕಬೀ ಅವರು ನೀವು ಚೆನ್ನಾಗಿದ್ದೀರಿ ಎಂದು ಇರಾನ್ ನಾಯಕ ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಬನ್ನಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇಳಿಕೊಂಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಹೇಳಿರುವುದನ್ನು ನೋಡಬಹುದು.
ಹೌದು, ಮೈಕ್. ನಾನು ಜೀವಂತವಾಗಿದ್ದೇನೆ ಎಂದು ವ್ಯಂಗ್ಯವಾಗಿ ಹೇಳಿದ ನೆತನ್ಯಾಹು, ನಾವು ಪ್ರತಿ ಕೈಯ ಐದು ಬೆರಳುಗಳಿಂದ ಕೈಕುಲುಕುತ್ತೇನೆ. ನಿಮಗೆ ತಿಳಿದಿದೆ. ಅನಂತರ ಅವರು ತಮ್ಮ ಜೇಬಿನಿಂದ ಒಂದು ಕಾರ್ಡ್ ತೆಗೆದುಕೊಂಡು, ನಾನು ಜೀವಂತವಾಗಿದ್ದೇನೆ, ಆದರೆ ನನ್ನ ಬಳಿ ಈ ಕಾರ್ಡ್ ಇದೆ ಎಂದಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರ ಸರ್ಕಾರವನ್ನು ಬೆಂಬಲಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ
ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ ಭಾನುವಾರ ನೆತನ್ಯಾಹು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೇ ನೆತನ್ಯಾಹು ಅವರು ಈ ವಿಡಿಯೊಗಳನ್ನು ಬಿಡುಗಡೆ ಮಾಡಿದರು.