ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Swiggy Boy: ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ ಮೇಲೆ ಡೆಡ್ಲಿ ಅಟ್ಯಾಕ್‌

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಇಂತಹದೇ ಘಟನೆ ನಡೆದಿದ್ದು, ಬೆಂಗಳೂರಿನ ಮೋದಿ ಆಸ್ಪತ್ರೆ ಜಂಕ್ಷನ್ ಸಮೀಪ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಒಬ್ಬನ ಮೇಲೆ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ. ಈ ಘಟನೆಯು ಬೆಂಗಳೂರಿನ ರಸ್ತೆ ಸುರಕ್ಷತೆ ಮತ್ತು ಡೆಲಿವರಿ ಏಜೆಂಟ್‌ಗಳ ರಕ್ಷಣೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಸ್ವಿಗ್ಗಿ ಡೆಲಿವರಿ ಬಾಯ್‌ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೊ ಇದೆ

Profile Sushmitha Jain Jul 16, 2025 3:21 PM

ತಾವು ಹಸಿದಿದ್ದರೂ ನಮ್ಮ ಹಸಿವು ನೀಗಿಸಲು ಆಹಾರದೊಂದಿಗೆ (Food)ಬೇಗನೆ ಬರುವ ಡೆಲಿವರಿ ಬಾಯ್​ಗಳ (Delivery Boy) ಬಗ್ಗೆ ಸ್ವಲ್ಪ ಕಾಳಜಿ ತೋರಿಸುವುದು ಅಗತ್ಯ. ಮಹಾನಗರಗಳ ಟ್ರಾಫಿಕ್​ನಲ್ಲಿ, ಬಿಸಿಲು ಮಳೆ ಎನ್ನದೆ ನಾವು ಹೇಳಿದ ಲೊಕೇಷನ್​ಗೆ ಆಹಾರ ತಲುಪಿಸುತ್ತಾರೆ. ಆದರೆ ಬಹಳಷ್ಟು ಸಲ ಅವರನ್ನು ಕೀಳಾಗಿ ನೋಡಲಾಗುತ್ತದೆ. ಗೌರವಯುತವಾಗಿ ನಡೆಸಿಕೊಳ್ಳದ ಬಹಳಷ್ಟು ಘಟನೆಗಳು ವರದಿಯಾಗುತ್ತಲೇ ಇರುತ್ತವೆ.

ಇದೀಗ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಇಂತಹದೇ ಘಟನೆ ನಡೆದಿದ್ದು, ಬೆಂಗಳೂರಿನ (Bengaluru) ಮೋದಿ ಆಸ್ಪತ್ರೆ ಜಂಕ್ಷನ್ (Modi Hospital Junction) ಸಮೀಪ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ (Swiggy Delivery Executive) ಒಬ್ಬನ ಮೇಲೆ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ. ಹಲ್ಲೆ ನಡೆಸಿದ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡೆಲಿವರಿ ಏಜೆಂಟ್ ಸಿಗ್ನಲ್‌ನಲ್ಲಿ ನಿಂತಿದ್ದಾಗ, ಹಿಂದಿನ ಕಾರಿನಿಂದ ಹಾರ್ನ್ ಮಾಡಿ, ಮುಂದೆ ಹೋಗುವಂತೆ ಒತ್ತಾಯಿಸಲಾಗಿತ್ತು. ಏಜೆಂಟ್ ಟ್ರಾಫಿಕ್ ಇನೂ ಬಿಟ್ಟಿಲ್ಲ ರೆಡ್ ಸಿಗ್ನಲ್ ಇರುವುದಾಗಿ ತಿಳಿಸಿದ್ದು, ಸಂಚಾರಿ ನಿಯಮ ಉಲ್ಲಂಘಿಸುವುದು ಸರಿಯಲ್ಲ ಎಂದು ವಿವರಿಸಿದ್ದಾನೆ. ಇದರಿಂದ ಕಾರು ಚಾಲಯಿಸುತ್ತಿದ್ದ ವ್ಯಕ್ತಿ ಹಾಗೂ ಇನ್ನಿಬ್ಬರು ಕೋಪಗೊಂಡಿದ್ದು, ಇವರಿಬ್ಬರ ಮಧ್ಯೆ ಜಗಳ ಶುರುವಾಗಿದೆ. ಮುಂದೆ ಇದೇ ವಾದ-ವಿವಾದಗಳು ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಡೆಲಿವರಿ ಏಜೆಂಟ್ ಮೇಲೆ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ.



ಈ ಸುದ್ದಿಯನ್ನು ಓದಿ: Marathoner Fauja Singh: ಶತಾಯುಷಿ ಫೌಜಾ ಸಿಂಗ್‌ಗೆ ಕಾರಿನಿಂದ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣನಾಗಿದ್ದ NRI ಅರೆಸ್ಟ್‌!

ಹೌದು ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಏಜೆಂಟ್‌ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರಿಂದ ಆತ ರಕ್ತಸಿಕ್ತನಾಗಿ ರಸ್ತೆಯಲ್ಲಿ ಬಿದ್ದಿದ್ದಾನೆ. ಆ ದುಷ್ಕರ್ಮಿಗಳು ನಂತರ ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡ ಏಜೆಂಟ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ತನಿಖೆ ಆರಂಭಿಸಿ, ಪ್ರಕರಣ ದಾಖಲಿಸುವುದಾಗಿ ದೃಢಪಡಿಸಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗಳು ಮದ್ಯಪಾನ ಮಾಡಿದ್ದರು ಎಂದು ಏಜೆಂಟ್ ಶಂಕಿಸಿದ್ದಾನೆ.

ಬೆಂಗಳೂರಿನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಡೆಲಿವರಿ ಏಜೆಂಟ್‌ಗಳ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು, ಸರಣಿಯಾಗಿ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ತಿಂಗಳು, ಇದೇ ಪ್ರದೇಶದಲ್ಲಿ ಜೆಪ್ಟೋ ಡೆಲಿವರಿ ಏಜೆಂಟ್ ಒಬ್ಬ ಗ್ರಾಹಕನೊಂದಿಗಿನ ಹಿಂಸಾತ್ಮಕವಾಗಿ ವರ್ತಿಸಿದ್ದ ಘಟನೆ ನಡೆದಿತ್ತು.

ಫೆಬ್ರವರಿಯಲ್ಲಿ, ಸ್ವಿಗ್ಗಿ ಜೆನೀ ಏಜೆಂಟ್ ಒಬ್ಬ 24 ವರ್ಷದ ವ್ಯಕ್ತಿ ಲೈಂಗಿಕ ಟೀಕೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು, ಈ ಘಟನೆಯು ಬೆಂಗಳೂರಿನ ರಸ್ತೆ ಸುರಕ್ಷತೆ ಮತ್ತು ಡೆಲಿವರಿ ಏಜೆಂಟ್‌ಗಳ ರಕ್ಷಣೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ, ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.