ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಡಮಾನ್ ಸೌಂದರ್ಯಕ್ಕೆ ಮನಸೋತ ಕೊರಿಯನ್ ಮಹಿಳೆ; ವಿಡಿಯೋದಲ್ಲಿ ಹೇಳಿದ್ದೇನು?

Viral News: ಕೊರಿಯಾದಿಂದ ಬಂದು ಭಾರತದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿ ಸುಂದರ ಅನುಭವವನ್ನು ಹಂಚಿಕೊಂಡಿ ದ್ದಾರೆ.ಅವರ ಪ್ರಕಾರ, ಅಂಡಮಾನ್ ದ್ವೀಪಗಳು ತಾವು ಭೇಟಿ ನೀಡಿದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಸ್ಫಟಿಕದಂತಹ ಸ್ವಚ್ಛ ನೀರು, ವೈವಿಧ್ಯಮಯ ಜಲ ದ್ವೀಪಗಳು ಅವರ ಮನಸ್ಸಿನಲ್ಲಿ ಮರೆಯಲಾಗದ ಅನುಭವ ಉಂಟು ಮಾಡಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ‌.

ಭಾರತದ 7 ನಗರ ಸುತ್ತಿದ ಕೊರಿಯನ್ ಮಹಿಳೆ: ಅಂಡಮಾನ್ ಸೌಂದರ್ಯಕ್ಕೆ ಫಿದಾ!

ಅಂಡಮಾನ್ ಸೌಂದರ್ಯಕ್ಕೆ ಮನಸೋತ ಕೊರಿಯನ್ ಮಹಿಳೆ -

Profile
Pushpa Kumari Oct 15, 2026 8:59 PM

ನವದೆಹಲಿ,ಅ.15: ಭಾರತದ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ ಅನೇಕ ವಿದೇಶಿಗರು ಇದ್ದಾರೆ. ಇದೀಗ ಕೊರಿಯಾದಿಂದ ಬಂದು ಭಾರತದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿ ಸುಂದರ ಅನುಭವವನ್ನು ಹಂಚಿ ಕೊಂಡಿ ದ್ದಾರೆ.ಅವರ ಪ್ರಕಾರ, ಅಂಡಮಾನ್ ದ್ವೀಪಗಳು ತಾವು ಭೇಟಿ ನೀಡಿದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಸ್ಫಟಿಕದಂತಹ ಸ್ವಚ್ಛ ನೀರು, ವೈವಿಧ್ಯಮಯ ಜಲ ದ್ವೀಪಗಳು ಅವರ ಮನಸ್ಸಿನಲ್ಲಿ ಮರೆಯಲಾಗದ ಅನುಭವ ಉಂಟು ಮಾಡಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ (Viral News) ಹೇಳಿಕೊಂಡಿದ್ದಾರೆ‌

ಭಾರತದ ಏಳು ನಗರಗಳಿಗೆ ಕೈಗೊಂಡ ತಮ್ಮ ಪ್ರವಾಸದ ಬಗ್ಗೆ ವಿವರಿಸಿದ್ದಾರೆ. ಪ್ರತಿಯೊಂದು ಸ್ಥಳವೂ ವಿಭಿನ್ನ ಅನುಭವವನ್ನು ನೀಡಿದ್ದು ಭಾರತದಲ್ಲಿನ ತಮ್ಮ ಪ್ರಯಾಣವನ್ನು ಸ್ಮರಣೀಯ‌ ವಾಗಿಸಿತು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವಿಡಿಯೋ ನೋಡಿ:

​ಯಂಗ್ ಆ್ಯ ಉಮ್ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ  ವೀಡಿಯೊವನ್ನು ಹಂಚಿಕೊಂಡಿದ್ದು, ಭಾರತದಲ್ಲಿ ಕಳೆದ ಎರಡು ವರ್ಷಗಳ ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ. ಚೆನ್ನೈ, ಬೆಂಗಳೂರು, ದೆಹಲಿ, ಮುಂಬೈ, ಕೇರಳ, ಕೊಯಮತ್ತೂರು ಮತ್ತು ಅಂಡಮಾನ್‌ಗೆ ಭೇಟಿ ನೀಡಿದ್ದರು. ಪ್ರತಿಯೊಂದು ಸ್ಥಳಕ್ಕೂ ಅದರದೇ ಆದ ವಿಶೇಷ ಆಕರ್ಷಣೆಯಿದೆ. ವಾತಾವರಣ, ಭಾಷೆ ಮತ್ತು ಆಹಾರ ಪದ್ಧತಿಗಳು ಬೇರೆ ಬೇರೆಯಾಗಿದ್ದರೂ ಆಕರ್ಷಕವಾಗಿದೆ. ಇಲ್ಲಿನ ಜನರು ತುಂಬಾ ಕೂಡ ದಯಾಮಯಿಗಳು ಎಂದು ಜಂಗ್ ಬರೆದಿದ್ದಾರೆ.

Viral Video: ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ

ಅದರಲ್ಲೂ ತಾವು ಭೇಟಿ ನೀಡಿದ ಸ್ಥಳಗಳ ಪೈಕಿ ಅಂಡಮಾನ್ ದ್ವೀಪಗಳು ಅತ್ಯಂತ ನೆಚ್ಚಿನ ಜಾಗ, ಇಲ್ಲಿ ಸಮಯ ಕಳೆದದ್ದೇ ಅನುಭವ ನೀಡಿದೆ ಎಂದು ಹೇಳಿದ್ದಾರೆ. ಆಫ್-ಸೀಸನ್‌ನಲ್ಲಿ ಅಂಡಮಾನ್‌ಗೆ ಭೇಟಿ ನೀಡಿದ್ದರೂ, ಅಲ್ಲಿನ ಸೌಂದರ್ಯ ನಿರೀಕ್ಷೆಗೂ ಮೀರಿತ್ತು. ಇಲ್ಲಿನ ಸ್ಕೂಬಾ ಡೈವಿಂಗ್ ಅನುಭವ ತಮ್ಮ ಜೀವನದ ಮರೆಯಲಾಗದ ಕ್ಷಣ ಎಂದು ಬಣ್ಣಿಸಿದ್ದಾರೆ.

"ಅಂಡಮಾನ್ ನನಗೆ ಅತ್ಯಂತ ಇಷ್ಟವಾದ ತಾಣಗಳಲ್ಲಿ ಒಂದಾಗಿದೆ. ಅಲ್ಲಿನ ನೈಸರ್ಗಿಕ ಸೌಂದರ್ಯ ನಿಜಕ್ಕೂ ಮರೆಯಲಾಗದಂತದ್ದು" ಎಂದು ಅವರು ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಭಾರತದಲ್ಲಿ ಇನ್ನೂ ನೋಡ ಬೇಕಾದದ್ದು ಬಹಳಷ್ಟಿದೆ. ನಮ್ಮ ದೇಶದ ಬಗ್ಗೆ ಇಷ್ಟು ಒಳ್ಳೆಯ ಮಾತುಗಳನ್ನು ಆಡಿದಕ್ಕಾಗಿ ಧನ್ಯವಾದಗಳು ಎಂದು ಹಲವಾರು ಮಂದಿ ಮೆಚ್ಚುಗೆ ನೀಡಿದ್ದಾರೆ.