ದೆಹಲಿಯ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಪ್ರಾರ್ಥನೆ: ನೆಟ್ಟಿಗರಿಂದ ಆಕ್ರೋಶ
Viral Video: ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಪ್ರಾರ್ಥನೆ ಹೇಳಿಸುತ್ತಿರುವ ಘಟನೆಯೊಂದು ದೆಹಲಿಯ ಶಾಲೆಯೊಂದರಲ್ಲಿ ನಡೆದಿದೆ. ಖಾಸಗಿ ಶಾಲೆಯೊಂದರಲ್ಲಿ ತರಗತಿಯ ಒಳಗೆ ಮಕ್ಕಳು ಇಸ್ಲಾಮಿಕ್ ಧರ್ಮದ ಶ್ಲೋಕಗಳನ್ನು ಪಠಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದು ಭಾರತದ ಶೈಕ್ಷಣಿಕ ವ್ಯವಸ್ಥೆಯ ಉಲ್ಲಂಘನೆ ಮಾಡಿದಂತೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ದೆಹಲಿ ಶಾಲೆಯಲ್ಲಿ ಇಸ್ಲಾಮಿಕ್ ಪಾರ್ಥನೆ -
ನವದೆಹಲಿ, ಜ. 14: ಶಾಲೆಯಲ್ಲಿ ತರಗತಿ- ಪಾಠ ಆರಂಭ ಮಾಡುವ ಮೊದಲು ನಾಡಗೀತೆ, ದೇಶ ಭಕ್ತಿಗೀತೆ ಹಾಡಿಸುವ ನಿಯಮ ಇದೆ. ಆದರೆ ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಪ್ರಾರ್ಥನೆ ಹೇಳಿಸುತ್ತಿರುವ ಘಟನೆಯೊಂದು ದೆಹಲಿಯ ಶಾಲೆಯೊಂದರಲ್ಲಿ ನಡೆದಿದೆ. ಖಾಸಗಿ ಶಾಲೆಯೊಂದರಲ್ಲಿ ತರಗತಿಯ ಒಳಗೆ ಮಕ್ಕಳು ಇಸ್ಲಾಮಿಕ್ ಧರ್ಮದ ಶ್ಲೋಕಗಳನ್ನು ಪಠಿ ಸುತ್ತಿರುವ ದೃಶ್ಯ (Viral Video) ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದು ಭಾರತದ ಶೈಕ್ಷಣಿಕ ವ್ಯವಸ್ಥೆಯ ಉಲ್ಲಂಘನೆ ಮಾಡಿದಂತೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ
ಸದ್ಯ ಶಾಲಾ ಆಡಳಿತ ಮಂಡಳಿಯ ನಿರ್ಧಾರಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮವಸ್ತ್ರದಲ್ಲಿರುವ ಮಕ್ಕಳ ಗುಂಪು ಇಸ್ಲಾಮಿಕ್ ಪದ್ಯಗಳನ್ನು ಪಠಿಸುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಈ ಘಟನೆಯೂ ಸಾಮಾನ್ಯ ತರಗತಿ ಅವಧಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಮಕ್ಕಳು ಗುಂಪಾಗಿ ಕುಳಿತು ಧಾರ್ಮಿಕ ಸಾಲುಗಳನ್ನು ಹೇಳುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇದು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ತತ್ವಗಳ ಉಲ್ಲಂಘನೆ ಮಾಡಿದಂತೆ. ಹಾಗಾಗಿ ಈ ದೃಶ್ಯ ನಿಜವೆಂದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ವಿಡಿಯೊ ನೋಡಿ:
ಸಾಮಾನ್ಯ ಶಾಲೆಗಳಲ್ಲಿ ಇಂತಹ ಬೋಧನೆ ಮಾಡುವುದು ಸಂವಿಧಾನದ ವಿಧಿ 28ರ ಅಡಿಯಲ್ಲಿ ನಿಯಮಬಾಹಿರ ಎಂದು ಹಲವರು ದೂರಿದ್ದಾರೆ. ಈ ಘಟನೆಯ ಕುರಿತು ಶಾಲೆ ಅಥವಾ ಶಿಕ್ಷಣ ಅಧಿಕಾರಿಗಳಿಂದ ಇಲ್ಲಿಯವರೆಗೆ ಯಾವುದೇ ಔಪಚಾರಿಕ ಹೇಳಿಕೆ ಹೊರಬಂದಿಲ್ಲ. ಈ ಚಟುವಟಿಕೆಗಳು ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿದೆಯೇ? ಅದರ ಸಂದರ್ಭದಿಂದ ತೆಗೆದ ಕ್ಲಿಪ್ ಆಗಿದೆಯೇ ಎಂಬುದರ ಬಗ್ಗೆ ವಿಮರ್ಶಾತ್ಮಕ ಪರಿಶೀಲನೆ ನಡೆಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.
ಇಂಡಿಗೋ ವಿಮಾನ ಎಡವಟ್ಟು: ಕೈಯಲ್ಲಿ ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!
ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಶಾಲಾ ಆಡಳಿತದ ನಿರ್ಲಕ್ಷ್ಯ, ಸಂವಿಧಾನದ ಉಲ್ಲಂಘನೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಈ ಬಗ್ಗೆ ಶಾಲಾ ಮಂಡಳಿಯ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ.