ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗದ್ದೆಯಲ್ಲಿ ಕೃಷಿ ಮಾಡ್ತಾ ಮಾಡೆಲಿಂಗ್ ಲುಕ್ ಕೊಟ್ಟ ಜಾರ್ಖಂಡ್ ಯುವಕ: ಸ್ಟೈಲ್‌ ಬಾಲಿವುಡ್ ನಟ-ನಟಿಯರು ಫಿದಾ

Viral Video: ಜಾರ್ಖಂಡ್‌ನ 24 ವರ್ಷದ ನಿಶಾಂತ್ ಕೆರ್ಕೆಟ್ಟಾ ಎಂಬ ಯುವ ರೈತ ಟ್ರೆಂಡಿಂಗ್  ಫ್ಯಾಷನ್ ವಿಡಿಯೊ ಶೇರ್ ಮಾಡುತ್ತಿರುತ್ತಾರೆ. ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಯುವಕ, ಏಕಾಏಕಿ ಸೂಟ್ ಧರಿಸಿ ಹೀರೋ ಥರ ಕಾಣಿಸಿಕೊಂಡಿದ್ದಾರೆ.

ಯುವ ಕೃಷಿಕನ ಹ್ಯಾಂಡ್‌ಸಮ್ ಲುಕ್‌ಗೆ ಬಾಲಿವುಡ್ ನಟ-ನಟಿಯರು ಮೆಚ್ಚುಗೆ

ಗದ್ದೆಯಲ್ಲಿ ಕೃಷಿ ಮಾಡ್ತಾ ಮಾಡೆಲಿಂಗ್ ಲುಕ್ ಕೊಟ್ಟ ಜಾರ್ಖಂಡ್ ಯುವಕ ನಿಶಾಂತ್ ಕೆರ್ಕೆಟ್ಟಾ -

Profile
Pushpa Kumari Oct 8, 2026 9:09 PM

ರಾಂಚಿ, ಅ. 8: ಗದ್ದೆಯಲ್ಲಿ ಕೃಷಿ ಮಾಡುತ್ತಾ ಜೀವನ ಕಳೆಯುತ್ತಿದ್ದ ಯುವ ರೈತನೊಬ್ಬ ಏಕಾಏಕಿ ಸೂಟ್-ಬೂಟ್ ಧರಿಸಿ ಮಾಡೆಲ್‌ನಂತೆ ಕಾಣಿಸಿಕೊಂಡು ಭಾರಿ ಸುದ್ದಿಯಾಗಿದ್ದಾರೆ (Viral News). ಕೇವಲ ರೈತನಾಗಿ ಮಾತ್ರವಲ್ಲದೆ  ಫ್ಯಾಷನ್ ಸೆನ್ಸ್‌ನಲ್ಲೂ ಆಸಕ್ತಿ ಹೊಂದಿದ ಜಾರ್ಖಂಡ್ ಯುವಕನ ವಿಡಿಯೊಗೆ ಬಾಲಿವುಡ್ ನಟ ನಟಿಯರು ಫಿದಾ ಆಗಿದ್ದಾರೆ. 24 ವರ್ಷದ ನಿಶಾಂತ್ ಕೆರ್ಕೆಟ್ಟಾ ಎಂಬ ಯುವ ರೈತ ಟ್ರೆಂಡಿಂಗ್ ಫ್ಯಾಷನ್ ವಿಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಬಾರಿ ​ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಯುವಕ, ಏಕಾಏಕಿ ಸೂಟ್-ಬೂಟ್ ಧರಿಸಿ ಹೀರೋ ಥರ ಕಾಣಿಸಿಕೊಂಡಿದ್ದಾರೆ.

ನಿಶಾಂತ್ ಹಂಚಿಕೊಂಡ ರೀಲ್ಸ್‌ ಒಂದರಲ್ಲಿ ಆರಂಭದಲ್ಲಿ ಬರಿಗಾಲಿನಲ್ಲಿ ಕೇವಲ ಶಾಟ್ಸ್ ಧರಿಸಿ ಗದ್ದೆಯಲ್ಲಿ ಬೀಜ ಚೆಲ್ಲುತ್ತಾ ಕೃಷಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ.

ವಿಡಿಯೊ ನೋಡಿ:

ಆದಾದ ಕೆಲವೇ ಸೆಕೆಂಡುಗಳಲ್ಲಿ ಸ್ಟೈಲಿಶ್ ಶರ್ಟ್ ಕೋಟ್ ಹಾಗೂ ಬ್ಲೇಜರ್ ಧರಿಸಿ ಮಾಡೆಲ್ ರೀತಿ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೊ 1.1 ಕೋಟಿಗೂ ವೀಕ್ಷಣೆ ಗಳಿಸಿದ್ದು ನೆಟ್ಟಿಗರು ಹ್ಯಾಂಡ್‌ಸಮ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಿಶಾಂತ್ ಅವರ ವಿಡಿಯೊಗಳು ಬಾಲಿವುಡ್ ಸೆಲೆಬ್ರಿಟಿಗಳ ಗಮನವನ್ನೂ ಸೆಳೆದಿವೆ. ಅಕ್ಟೋಬರ್ 5ರಂದು ಅವರು ಪೋಸ್ಟ್ ಮಾಡಿದ ಈ ರೀಲ್ಸ್‌ನಲ್ಲಿ, ಭೂಮಿ ಪೆಡ್ನೇಕರ್ "ಕ್ಯಾ ಬಾತ್ ಹೈ" ಎಂದು ಕಾಮೆಂಟ್ ಮಾಡಿದ್ದಾರೆ. ಶಿಬಾನಿ ದಂಡೇಕರ್ ʼʼನೈಸ್ ಲುಕ್ʼʼ ಎಂದು ಬರೆದುಕೊಂಡಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!

ಸೋಶಿಯಲ್ ಮೀಡಿಯಾದಲ್ಲಿ ಇವರ ಪ್ಯಾಷನ್ ಕಂಡು ಬಳಕೆದಾರರು "ಔರ ಫಾರ್ಮರ್" ಎಂದು ಬಣ್ಣಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಕೃಷಿ ಕೆಲಸ ಇವರ ಪಾರ್ಟ್ ಟೈಮ್ ಜಾಬ್ʼʼ ಎಂದು ಹೇಳಿದ್ದಾರೆ. ಕೆರ್ಕೆಟ್ಟಾ ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯ ಅಘರ್ಮಾ ಗ್ರಾಮದವರು. ತಂದೆಗೆ ಅನಾರೋಗ್ಯದ ಸಮಸ್ಯೆ ಬಂದಾಗ ನಿಶಾಂತ್ ಕೃಷಿ ಮತ್ತು ಕುಟುಂಬದ ಜವಾಬ್ದಾರಿ ಹೊರಲು ಗ್ರಾಮಕ್ಕೆ ಮರಳಿದ್ದಾರೆ.