ಭಾರತೀಯರ ಡಿಎನ್‌ಎನಲ್ಲೇ ದೋಷವಿದೆ: ಹಿಮಾಚಲ ಪ್ರದೇಶದಲ್ಲಿ ಕಸದ ತ್ಯಾಜ್ಯ ಕಂಡು ಕಿಡಿಕಾರಿದ ನಟ ಸುಮೀತ್ ರಾಘವನ್
Viral Video: ನಾಗರಿಕ ಪ್ರಜ್ಞೆ ಇಲ್ಲ ಎನ್ನುವಂತಹ ದೂರು ದಿನ ನಿತ್ಯ ಕೇಳಿಬರುತ್ತಲೇ ಇದೆ. ಇದೀಗ ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ತಟ್ಟಪಾಣಿಯ ಬಿಸಿ ನೀರಿನ ಬುಗ್ಗೆಗಳ ನಡುವೆ ಪ್ರವಾಸಿಗರು ಎಲ್ಲೆಲ್ಲ ತ್ಯಾಜ್ಯ ಎಸೆದು ಹೋಗಿದ್ದಾರೆ. ಈ ಬಗ್ಗೆ ಖ್ಯಾತ ನಟ ಸುಮೀತ್ ರಾಘವನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಸದ ತ್ಯಾಜ್ಯ ಕಂಡು ಕಿಡಿಕಾರಿದ ನಟ ಸುಮೀತ್ ರಾಘವನ್ -
ಶಿಮ್ಲಾ, ಅ. 8: ಭಾರತೀಯರಿಗೆ ನಾಗರಿಕ ಪ್ರಜ್ಞೆ ಇಲ್ಲ ಎನ್ನುವಂತಹ ದೂರು ದಿನ ನಿತ್ಯ ಕೇಳಿ ಬರುತ್ತಲೇ ಇದೆ. ಅದರಲ್ಲೂ ಪರಿಸರ ರಕ್ಷಣೆ ಬಗ್ಗೆ ಕಾಳಜಿಯೇ ಇಲ್ಲವಂತಾಗಿದೆ. ಎಲ್ಲೆಂದರಲ್ಲಿ ಕಸ ಹಾಕುವುದು, ಸಾರ್ವಜನಿಕ ಸ್ಥಳದಲ್ಲೂ ಶಿಸ್ತು ಕಾಪಾಡದೇ ಇರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. ಇದೀಗ ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ತಟ್ಟ ಪಾಣಿಯ ಬಿಸಿ ನೀರಿನ ಬುಗ್ಗೆಗಳ ನಡುವೆ ಪ್ರವಾಸಿಗರು ಎಲ್ಲೆಲ್ಲ ತ್ಯಾಜ್ಯ ಎಸೆದು ಹೋಗಿದ್ದಾರೆ. ಈ ಬಗ್ಗೆ ಖ್ಯಾತ ನಟ ಸುಮೀತ್ ರಾಘವನ್ ತೀವ್ರ ಆಕ್ರೋಶ (Viral News) ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನರಿಗೆ ಬುದ್ಧಿ ಬರುವುದು ಯಾವಾಗ? ಪ್ರವಾಸಿ ಸ್ಥಳದಲ್ಲೂ ಬೇಕಾಬಿಟ್ಟಿಯಾಗಿ ವರ್ತಿಸುವ ಜನರಿದ್ದಾರೆ ಎಂದು ಕಿಡಿಕಾರಿದ್ದಾರೆ. ಹಸಿರಿನ ನಡುವೆ ಪ್ರವಾಸಿಗರು ಎಸೆದಿದ್ದ ಕಸದ ರಾಶಿಯನ್ನು ಕಂಡು ಅವರು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ಇಂಡಸ್ ಪ್ಯಾರಾಗ್ಲೈಡಿಂಗ್ ಸ್ಕೂಲ್‌ಗೆ ಸಂಬಂಧಿಸಿದ ತಂಡವೊಂದು ಅವರೊಂದಿಗೆ ಭಾಗಿಯಾಗಿತ್ತು. ಆದರೆ ಸುಂದರ ಭೂದೃಶ್ಯದ ನಡುವೆ ನಡೆಯಬೇಕಿದ್ದ ಸಾಹಸದ ಪ್ರವಾಸವು, ಆ ಪ್ರದೇಶದಲ್ಲಿನ ಕಸದ ಸಮಸ್ಯೆಯ ಬಗ್ಗೆ ಕಳವಳ ಉಂಟು ಮಾಡಿತು. ಸುಂದರ ಪ್ರಕೃತಿಯ ಕಡೆಗೆ ಕಣ್ಣು ಹಾಯಿಸಿದಾಗ ಅಲ್ಲಿ ಪ್ಲಾಸ್ಟಿಕ್ ಚೀಲಗಳು, ಆಹಾರದ ಪ್ಯಾಕೆಟ್‌ಗಳು ಮತ್ತು ಬಾಟಲಿಗಳು ಹರಿದುಬಿದ್ದಿರುವುದು ಕಂಡು ಬರುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
ವಿಡಿಯೊ ನೋಡಿ:
"ನಾವು ಇಲ್ಲಿಗೆ ಬರುವ ದಾರಿಯಲ್ಲೇ ಈ ಕಸವನ್ನು ಸಂಗ್ರಹಿಸುತ್ತಾ ಬಂದೆವು" ಎಂದು ತ್ಯಾಜ್ಯ ತುಂಬಿದ ಪಾಲಿಥೀನ್ ಚೀಲವನ್ನು ತೋರಿಸುತ್ತಾ "ಈಗ ನಮ್ಮ ಚೀಲ ತುಂಬಿದೆ, ಆದರೆ ಇಲ್ಲಿ ಇನ್ನೂ ಸಾಕಷ್ಟು ಕಸವಿದೆ. ಇಂತಹ ಸುಂದರವಾದ ಸ್ಥಳವನ್ನು ನಾವು ಹಾಳುಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ" ಎಂದಿದ್ದಾರೆ.
ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ?
ಬಿಸಿನೀರಿನ ಬುಗ್ಗೆಗಳತ್ತ ಸಾಗುತ್ತಿದ್ದಾಗ, ರಾಘವನ್ ತಮ್ಮ ಕ್ಯಾಮೆರಾವನ್ನು ದಾರಿಯತ್ತ ತಿರುಗಿಸಿ, ʼʼಹಸಿರು ಪರಿಸರದ ನಡುವೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲಗಳು, ಆಹಾರದ ಹೊದಿಕೆ, ಬಾಟಲಿಗಳು, ಕ್ಯಾನ್‌ಗಳು ಮತ್ತು ಇತರ ತ್ಯಾಜ್ಯಗಳನ್ನು ತೋರಿಸಿದರು. ಇದು ಎಷ್ಟು ಸುಂದರವಾದ ಸ್ಥಳ, ಆದರೆ ನಾವು ಏನು ಮಾಡಿದ್ದೇವೆ. ಎಂತಹ ಕೊಳಕನ್ನು ಸೃಷ್ಟಿಸಿದ್ದೇವೆ ನೋಡಿ. ಇದು ನಮ್ಮ ಭಾರತೀಯರ ಡಿಎನ್‌ಎಯಲ್ಲೇ ಇರುವ ದೋಷ. ಹಿಮಾಚಲ ಸರ್ಕಾರವು ಇಂತಹ ಪ್ರವಾಸಿಗರ ವಿರುದ್ಧ ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ.