ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೆಳತಿಗೆ ಚೋಲೆ ಭಟುರೆ ತರಲು ಹೋದ ವ್ಯಕ್ತಿಗೆ ಸಿಕ್ತು ಬಿಸಿ ಬಿಸಿ ಕಜ್ಜಾಯ! ಪತ್ನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ!

wife catches husband: ಅಜಯ್‌ನು ಎರಡು ಪ್ಲೇಟ್ ಚೋಲೆ ಭಟುರೆ ತರಲು ಹೊರಗೆ ಬಂದಿದ್ದ. ಈ ವೇಳೆ ಪತ್ನಿ ಕೈಯಲ್ಲಿ ಕಜ್ಜಾಯ ತಿಂದಿದ್ದಾನೆ. ಅಜಯ್ ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಡುತ್ತಿದ್ದ. ಕೆಲಸಕ್ಕೆ ಹೋಗುವ ಬದಲು ಆತ ತನ್ನ ಗೆಳತಿಯನ್ನು ಭೇಟಿಯಾಗುತ್ತಿದ್ದ ಎಂದು ಪತ್ನಿ ಕವಿತಾ ಹೇಳಿದ್ದಾರೆ.

ಪತ್ನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ

ಪತ್ನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ -

Priyanka P
Priyanka P Sep 30, 2026 7:12 PM

ಲಖನೌ, ಸೆ.30: ತನ್ನ ಗೆಳತಿಗೆ ಚೋಲೆ ಭಟುರೆ ತಂದುಕೊಡಲು ಹೋದ ವ್ಯಕ್ತಿಯೊಬ್ಬ ಪೇಚಿಗೆ ಸಿಲುಕಿದ ಘಟನೆ ಉತ್ತರ ಪ್ರದೇಶದ (Uttar Pradesh) ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಗೆಳತಿಗೆ ಚೋಲೆ ಭಟುರೆ ತರಲು ಹೋದ ಆತ, ತನ್ನ ಪತ್ನಿ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಹಾಪುರದ ಯಾತ್ರಾ ಸ್ಥಳವಾದ ಬ್ರಿಜ್‌ಘಾಟ್‌ನಲ್ಲಿ ಈ ಹೈಡ್ರಾಮಾ ನಡೆದಿದೆ. ಅಜಯ್ ಎಂಬಾತ ತನ್ನ ಗೆಳತಿಯೊಂದಿಗೆ ಅತಿಥಿ ಗೃಹದಲ್ಲಿ ತಂಗಿದ್ದ. ಈ ಮಾಹಿತಿಯನ್ನು ಪಡೆದ ಆತನ ಪತ್ನಿ ಕವಿತಾ, ತನ್ನ ಕುಟುಂಬದೊಂದಿಗೆ ಆ ಸ್ಥಳಕ್ಕೆ ಆಗಮಿಸಿದ್ದಾರೆ (viral news).

ಅಜಯ್‌ ಎರಡು ಪ್ಲೇಟ್ ಚೋಲೆ ಭಟುರೆ ತರಲು ಹೊರಗೆ ಬಂದಿದ್ದ. ಈ ವೇಳೆ ಪತ್ನಿ ಕೈಯಲ್ಲಿ ಕಜ್ಜಾಯ ತಿಂದಿದ್ದಾನೆ. ಅಜಯ್ ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಡುತ್ತಿದ್ದ. ಕೆಲಸಕ್ಕೆ ಹೋಗುವ ಬದಲು ಆತ ತನ್ನ ಗೆಳತಿಯನ್ನು ಭೇಟಿಯಾಗುತ್ತಿದ್ದ ಎಂದು ಪತ್ನಿ ಕವಿತಾ ಹೇಳಿದ್ದಾರೆ. ಕೆಲ ಸಮಯದಿಂದ ಈ ಕಳ್ಳಾಟ ನಡೆಯುತ್ತಿತ್ತು, ಇದು ತನ್ನ ಗಮನಕ್ಕೆ ಬಂತು ಎಂದು ಅವರು ಹೇಳಿದ್ದಾರೆ.

ಅಜಯ್ ಬ್ರಿಜ್‌ಘಾಟ್‌ನಲ್ಲಿದ್ದಾರೆ ಎಂಬ ಸುದ್ದಿ ಕವಿತಾಗೆ ತಿಳಿದ ಕೂಡಲೇ ಆಕೆ ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಧಾವಿಸಿದರು. ಅತಿಥಿ ಗೃಹದ ಬಳಿ ಅಜಯ್ ತಂಗಿರುವುದನ್ನು ಅವರು ನೋಡಿದರು. ಚೋಲೆ ಭಟುರೆ ಆರ್ಡರ್ ಮಾಡಿದ್ದ ಅಜಯ್ ಹೆಂಡತಿ ಕೈಗೆ ಸಿಕ್ಕಿಹಾಕಿಕೊಂಡು ಬಿಸಿ-ಬಿಸಿ ಕಜ್ಜಾಯ ತಿನ್ನುವಂತಾಯಿತು. ಗಲಾಟೆ ಕೇಳಿ ಕೂಡಲೇ ಅಲ್ಲಿ ಜನಸಮೂಹ ನೆರೆದಿದೆ.

ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಇಸ್ರೇಲ್ ಯುವತಿ ವಿಡಿಯೋಗೆ ಅಸಭ್ಯ ಕಾಮೆಂಟ್: ನಾಲ್ವರನ್ನು ಬಂಧಿಸಿದ ಪೊಲೀಸರು!

ಕವಿತಾ ಮತ್ತು ಆಕೆಯ ಕುಟುಂಬ ಅಜಯ್‌ನನ್ನು ಸಾರ್ವಜನಿಕವಾಗಿ ಥಳಿಸಿದ್ದಾರೆ. ಆದರೆ ಅಜಯ್ ತನ್ನ ಪತ್ನಿಯ ಆರೋಪಗಳನ್ನು ನಿರಾಕರಿಸಿದರು. ತಾನು ಯಾವುದೇ ಮಹಿಳೆಯೊಂದಿಗೆ ಇರಲಿಲ್ಲ. ಮನೆಯಲ್ಲಿ ಮಾನಸಿಕ ಒತ್ತಡದಲ್ಲಿದ್ದ ಕಾರಣ ಬ್ರಿಜ್‌ಘಾಟ್‌ಗೆ ಬಂದಿದ್ದೇನೆ ಎಂದು ಅವರು ಹೇಳಿದರು. ನೀನು ಒಬ್ಬನೇ ಬಂದಿದ್ದರೆ. ಎರಡು ಪ್ಲೇಟ್ ಚೋಲೆ ಭಟುರೆ ಯಾರಿಗೆ ಆರ್ಡರ್ ಮಾಡಿದ್ದು ಎಂದು ಕವಿತಾ ಪ್ರಶ್ನಿಸಿದರು.

ಜಗಳ ಹೆಚ್ಚಾಗುತ್ತಾ ಹೋದಂತೆ ಕೊನೆಗೆ ಈ ವಿಷಯ ಪೊಲೀಸ್ ಠಾಣೆಗೆ ತಲುಪಿತು. ಪೊಲೀಸರ ಮಧ್ಯಪ್ರವೇಶದ ನಂತರ, ಎರಡೂ ಕಡೆಯವರು ವಿಷಯವನ್ನು ಪರಿಹರಿಸಲು ಒಪ್ಪಿಕೊಂಡರು. ಬಳಿಕ ವಿವಾದ ಇತ್ಯರ್ಥವಾಗಿ, ಅಜಯ್ ಮತ್ತು ಕವಿತಾ ಮನೆಗೆ ಮರಳಿದರು.