ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ: ರಿಕ್ಷಾವನ್ನು ರೈಲಿಗೆ ತಳ್ಳಿ ಪರಾರಿಯಾಗಲು ಯತ್ನಿಸಿದ ಚಾಲಕ!

Viral Video: ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯ ಜ್ಞಾನ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಹೊರ ರಾಜ್ಯದ ಚಾಲಕನೋರ್ವ ರಿಕ್ಷಾವನ್ನು ರೈಲಿಗೆ ತಳ್ಳಿ ಪರಾರಿಯಾಗಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆರ್‌ಟಿಒ ಫ್ಲೈಯಿಂಗ್ ಸ್ಕ್ವಾಡ್‌ಗಳು ಇತ್ತೀಚೆಗೆ ಮುಂಬೈನಾದ್ಯಂತ 1,430 ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಪರಿಶೀಲಿಸಿದೆ.

ಮರಾಠಿ ಭಾಷೆ ಕಡ್ಡಾಯಕ್ಕೆ ಬೇಸೆತ್ತು ಆಟೋವನ್ನು ರೈಲಿಗೆ ತಳ್ಳಿದ ಚಾಲಕ

ಮುಂಬೈಯಲ್ಲಿ ಆಟೋವನ್ನು ರೈಲಿಗೆ ತಳ್ಳಿದ ಚಾಲಕ -

Profile
Pushpa Kumari Aug 22, 2026 7:51 PM

ಮುಂಬೈ, ಆ. 22: ಆಟೋ ಚಾಲಕನೊಬ್ಬ ತನ್ನ ರಿಕ್ಷಾವನ್ನು ರೈಲಿನ ಲಗೇಜ್ ಬೋಗಿಗೆ ತಳ್ಳುತ್ತಿರುವ ದೃಶ್ಯವೊಂದು (Viral News) ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯ ಜ್ಞಾನ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಚಾಲಕ ರಿಕ್ಷಾವನ್ನು ರೈಲಿಗೆ ತಳ್ಳಿ ಪರಾರಿಯಾಗಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆರ್‌ಟಿಒ ಫ್ಲೈಯಿಂಗ್ ಸ್ಕ್ವಾಡ್‌ಗಳು ಇತ್ತೀಚೆಗೆ ಮುಂಬೈನಾದ್ಯಂತ 1,430 ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಪರಿಶೀಲಿಸಿದೆ.

ಮಹಾರಾಷ್ಟ್ರದಲ್ಲಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮರಾಠಿಯನ್ನು ಕಡ್ಡಾಯವಾಗಿ ಕಲಿಯಬೇಕೆಂದು ಆದೇಶ ಹೊರಡಿಸಿದೆ. ಇದನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ತನ್ನ ಮೊದಲ ಅಭಿಯಾನವನ್ನು ಪ್ರಾರಂಭಿಸಿದೆ. ಆರ್‌ಟಿಒ ಅಧಿಕಾರಿಗಳು ಚಾಲಕರ ಬಳಿ ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ನಡುವೆ ಆಟೋ ಚಾಲಕನೊಬ್ನ ತನ್ನ ರಿಕ್ಷಾವನ್ನು ರೈಲಿನ ಲಗೇಜ್ ಬೋಗಿಗೆ ತಳ್ಳುತ್ತಿರುವ ವಿಡಿಯೊ ಹೊರ ಬಿದ್ದಿದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಪವನ್ ಪೋಸ್ಟ್ ಮಾಡಿದ್ದಾರೆ. ʼʼಸಹೋದರರೇ, ಆರ್‌ಟಿಒ ನಿಯಮದ ನಂತರ, ಮರಾಠಿ ಕಲಿಯಲು ಇಷ್ಟಪಡದವರನ್ನು ನೋಡಿ. ಅವರು ತಮ್ಮ ಆಟೋವನ್ನು ರೈಲಿಗೆ ಬಲವಂತವಾಗಿ ತುಂಬಿ ತಮ್ಮ ಹಳ್ಳಿಗಳಿಗೆ ಓಡುತ್ತಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.

ವಿಡಿಯೊ ನೋಡಿ:

ಬಾಂದ್ರಾ, ಗೋರೆಗಾಂವ್, ಕುರ್ಲಾ, ದಾದರ್, ಬೋರಿವಲಿ, ವಡಾಲಾ ಮತ್ತು ಅಂಧೇರಿ ಸೇರಿ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ 1,400ಕ್ಕೂ ಹೆಚ್ಚು ಚಾಲಕರನ್ನು ತಪಾಸಣೆ ನಡೆಸಲಾಗಿದೆ. ಈಗಾಗಲೇ ಮರಾಠಿ ಮಾತನಾಡಲು ಬರದ 422 ಚಾಲಕರಿಗೆ ನೋಟಿಸ್ ಕೂಡ ನೀಡಲಾಗಿದೆ. ಈ ನೋಟಿಸ್‌ಗಳು ತಕ್ಷಣ ಚಾಲಕರನ್ನು ರದ್ದುಗೊಳಿಸುವುದು ಅಥವಾ ಅಮಾನತು ಗೊಳಿಸುವುದಿಲ್ಲ. ಚಾಲಕರಿಗೆ ಮರಾಠಿ ಕಲಿಯಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.

ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ

ಆದರೆ ನೀಡಿದ ಸಮಯದ ಒಳಗೆ ಭಾಷಾ ಜ್ಞಾನ ಸಾಬೀತು ಪಡಿಸದಿದ್ದರೆ 3 ತಿಂಗಳವರೆಗೆ ಬ್ಯಾಡ್ಜ್ ಅಮಾನತುಗೊಳಿಸುವ ಅಥವಾ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಲಾಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಎಲ್ಲರೂ ಮರಾಠಿ ಕಲಿಯಿರಿ, ಇಲ್ಲದಿದ್ದರೆ ನಿಮ್ಮ ಹಣೆಬರಹವೂ ಇದೇ ಆಗಿರುತ್ತದೆ ಎಂದು ಬರೆದಿದ್ದಾರೆ.