ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

19 ಭಾಷೆಗಳಲ್ಲಿ ಮಾತನಾಡಿ ಪ್ರಯಾಣಿಕರನ್ನು ಅಚ್ಚರಿಗೊಳಿಸಿದ ರೈಲು ವ್ಯಾಪಾರಿ: ವಿಡಿಯೊ ನೋಡಿ

Viral Video: ನಮ್ಮಲ್ಲಿ ಕ್ರಿಯಾತ್ಮಕ ಕಲೆ ಇದ್ದರೆ ಎಲ್ಲೂ ಹೋಗಿಯೂ ಬದುಕಬಹುದು ಅನ್ನುವುದನ್ನು ಇಲ್ಲೊಬ್ಬ ವ್ಯಾಪಾರಿ ತೋರಿಸಿಕೊಟ್ಟಿದ್ದಾರೆ. ರೈಲಿನಲ್ಲಿ ಅಗತ್ಯ ವಸ್ತುವನ್ನು ಮಾರಾಟ ಮಾಡುವ ವ್ಯಾಪಾರಿ ಸುಮಾರು 19 ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದಾರೆ. ಇವರ ಭಾಷೆಯ ಜ್ಞಾನ ತಿಳಿದು ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ರಾಜಸ್ಥಾನ ಮೂಲದ ವ್ಯಾಪಾರಿ ಗಮನ ಸೆಳೆದಿದ್ದಾರೆ.

ರೈಲಿನಲ್ಲಿ 19 ಭಾಷೆ ನಿರರ್ಗಳವಾಗಿ ಮಾತನಾಡಿದ ವ್ಯಾಪಾರಿ: ಪ್ರಯಾಣಿಕರು ಫಿದಾ

ರೈಲಿನಲ್ಲಿ 19 ಭಾಷೆಗಳಲ್ಲಿ ಮಾತನಾಡಿ ಪ್ರಯಾಣಿಕರನ್ನು ಅಚ್ಚರಿಗೊಳಿಸಿದ ವ್ಯಾಪಾರಿ -

Profile
Pushpa Kumari Aug 22, 2026 8:44 PM

ನವದೆಹಲಿ, ಆ. 22: ಜೀವನದಲ್ಲಿ ಯಶಸ್ಸು ಗಳಿಸಲು ಕೇವಲ ಶಿಕ್ಷಣ ಮಾತ್ರ ಮುಖ್ಯವಲ್ಲ, ನಮ್ಮಲ್ಲಿರುವ ಕೌಶಲ್ಯ ಕೂಡ ಪ್ರಮುಖವಾಗುತ್ತದೆ. ನಮ್ಮಲ್ಲಿ ಕ್ರಿಯಾತ್ಮಕ ಕಲೆ ಇದ್ದರೆ ಎಲ್ಲೂ ಹೋಗಿಯೂ ಬದುಕಬಹುದು ಎನ್ನುವುದನ್ನು ಇಲ್ಲೊಬ್ಬ ವ್ಯಾಪಾರಿ ತೋರಿಸಿಕೊಟ್ಟಿದ್ದಾರೆ. ರೈಲು ಪ್ರಯಾಣವೊಂದರಲ್ಲಿ ಅಗತ್ಯ ವಸ್ತುವನ್ನು ಮಾರಾಟ ಮಾಡುವ ವ್ಯಾಪಾರಿ ಸುಮಾರು 19 ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದಾರೆ. ಇವರ ಭಾಷೆಯ ಜ್ಞಾನ ತಿಳಿದು ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ. ಆ ವ್ಯಕ್ತಿ ತಮ್ಮ ಊರು ರಾಜಸ್ಥಾನದವನೆಂದು ಬಹಿರಂಗಪಡಿಸಿದ್ದು, ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರ ಗಮನವನ್ನು (Viral News) ಸೆಳೆದಿದ್ದಾರೆ.

ವ್ಯಾಪಾರಿ ರೈಲಿನಲ್ಲಿ ಟೂತ್ ಬ್ರಷ್‌, ಟೂತ್‌ಪೇಸ್ಟ್ ಮತ್ತು ಸೋಪ್‌ ಮಾರಾಟ ಮಾಡಲು ರೈಲಿನಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಆರಂಭದಲ್ಲಿ ಮಾರಾಟ ಸಾಮಾನ್ಯ ಎಂಬಂತೆ ಕಂಡುಬಂದಿದೆ. ಬಳಿಕ ಅದ್ಭುತ ಭಾಷಾ ಜ್ಞಾನ ಬಹಿರಂಗಗೊಂಡಿದೆ.

ವಿಡಿಯೊ ನೋಡಿ:



ಅಕ್ಷಯ್ ಮೆಹ್ತಾ ಎಂಬವವರು ಈ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಒರ್ವ ಪ್ರಯಾಣಿಕನು ಮಾರಾಟಗಾರನು ಕೊಂಡೊಯ್ಯುತ್ತಿದ್ದ ಟೂತ್‌ಪೇಸ್ಟ್‌ ಬಗ್ಗೆ ಆಸಕ್ತಿ ತೋರಿಸಿ ಹಿನ್ನೆಲೆಯ ಬಗ್ಗೆ ಕೇಳಲು ಪ್ರಾರಂಭಿಸಿದರು. ಬಳಿಕ ವ್ಯಾಪಾರಿ ತಾವು ರಾಜಸ್ಥಾನದ ಮೂಲದವರೆಂದು ಬಹಿರಂಗಪಡಿಸಿದ್ದು 18ರಿಂದ 19 ಭಾಷೆಗಳಲ್ಲಿ ಸಂವಹನ ನಡೆಸಬಲ್ಲೆ ಎಂದು ಹೇಳಿದ್ದಾರೆ.‌ ನಂತರ ಅವರು ಬಹಳ ಸ್ಪಷ್ಟವಾಗಿ ಇಂಗ್ಲಿಷ್ ಮಾತನಾಡಿದ್ದು, ಪ್ರಯಾಣಿಕರೊಂದಿಗೆ ವಿಶ್ವಾಸದಿಂದ ಸಂವಹನ ನಡೆಸಿದ್ದಾರೆ.

ಅಷ್ಟೇ ಅಲ್ಲದೆ ಸಂವಾದದ ಸಮಯದಲ್ಲಿ, ಮಾರಾಟಗಾರ ತಮಗೆ ತಿಳಿದಿರುವ ಹಲವು ಪ್ರಾದೇಶಿಕ ಭಾಷೆಗಳ ಬಗ್ಗೆ ಮಾತನಾಡಿದ್ದಾರೆ. ಪ್ರಯಾಣಿಕರಿಗೆ ಅವರ ವಸ್ತುಗಳಿಗಿಂತ ಹೆಚ್ಚಾಗಿ, ಇಷ್ಟೊಂದು ಭಾಷೆಗಳನ್ನು ಅವರು ಹೇಗೆ ಕಲಿತರು ಎನ್ನುವ ಕುತೂಹಲ ಮೂಡಿದೆ. ತಾವು ಸ್ವಯಂ ಇಚ್ಛೆಯಿಂದ ವಿವಿಧ ಭಾಷೆಗಳನ್ನು ಕಲಿರುವುದಾಗಿ ತಿಳಿಸಿದ್ದಾರೆ. ನಂತರ ಕಲಿಕೆ ಮತ್ತು ಜನರೊಂದಿಗಿನ ಸಂಪರ್ಕದ ಮೂಲಕ ಈ ಭಾಷೆಗಳನ್ನು ಅರ್ಥೈಸಿಕೊಂಡಿರುವುದಾಗಿ ಹೇಳಿದ್ದಾರೆ.

ವಿಡಿಯೊ ಬಹಳಷ್ಟು ವೀಕ್ಷಕರನ್ನು ಆಕರ್ಷಿಸಿದೆ. ಜೀವನೋಪಾಯ ಮಾಡುವಾಗ ಕಲಿಯುವುದನ್ನು ಮುಂದುವರಿಸಿದ್ದಕ್ಕಾಗಿ ಮಾರಾಟಗಾರರನ್ನು ನೆಟ್ಟಿಗರು ಹೊಗಳಿದ್ದಾರೆ.‌ ಪರಿಶ್ರಮ ಮತ್ತು ಸ್ವ-ಶಿಕ್ಷಣದ ಉತ್ತಮ ಉದಾಹರಣೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.