ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೆತ್ತವರಿಗಾಗಿ 18 ವರ್ಷಗಳ ಅಮೆರಿಕ ಜೀವನ ತೊರೆದು ಬೆಂಗಳೂರಿಗೆ ಮರಳಿದ ಮೆಟಾ ಉದ್ಯೋಗಿ; ಭಾವನಾತ್ಮಕ ಪೋಸ್ಟ್ ವೈರಲ್

Viral News: ಅಮೆರಿಕದಲ್ಲಿ 18 ವರ್ಷಗಳ ಕಾಲ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ವೃತ್ತಿ ಜೀವನ ತೊರೆದು ಬೆಂಗಳೂರಿಗೆ ಆಗಮಿಸಿದ್ದಾರೆ. ಯಾವುದೇ ಒತ್ತಡದಿಂದ ಕೆಲಸ ತೊರೆದಿಲ್ಲ, ಬದಲಾಗಿ ವೈಯಕ್ತಿಕ ವಿಚಾರದಿಂದ ಅಮೆರಿಕ ತೊರೆದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಶೇರ್ ಮಾಡಿಕೊಂಡಿದ್ದಾರೆ.

18 ವರ್ಷಗಳ ನಂತರ ಅಮೆರಿಕ ತೊರೆದು ಭಾರತಕ್ಕೆ ಮರಳಿದ ಮೆಟಾ ಉದ್ಯೋಗಿ

ಎಐ ರಚಿತ ಚಿತ್ರ -

Profile
Pushpa Kumari Jul 14, 2026 9:35 PM

ನವದೆಹಲಿ, ಜು. 14: ಉದ್ಯೋಗ ಅನ್ನೋದು ಜೀವನದಲ್ಲಿ ಪ್ರತಿಯೊಬ್ಬರಿಗೂ ಅಗತ್ಯ. ಕೆಲವರು ತಮ್ಮ ಆಯ್ಕೆಯ ಕೆಲಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಇಲ್ಲಿನ ನಗರ ಜೀವನ ಶೈಲಿ, ಕಂಪನಿಯ ಪ್ಯಾಕೇಜ್, ವೈಯಕ್ತಿಕ ಯಶಸ್ಸು ಹೀಗೆ ನಾನಾ ಕಾರಣದಿಂದ ವಿದೇಶದಲ್ಲೇ ಉದ್ಯೋಗ ಮಾಡಲು ಬಯಸುವವರು ಅನೇಕರು ಇದ್ದಾರೆ. ಅದೇ ರೀತಿ ಅಮೆರಿಕದಲ್ಲಿ 18 ವರ್ಷಗಳ ಕಾಲ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ವೃತ್ತಿ ಜೀವನ ತೊರೆದು ಬೆಂಗಳೂರಿಗೆ ಆಗಮಿಸಿದ್ದಾರೆ. ಯಾವುದೇ ಒತ್ತಡದಿಂದ ಕೆಲಸ ತೊರೆದಿಲ್ಲ, ಬದಲಾಗಿ ವೈಯಕ್ತಿಕ ವಿಚಾರದಿಂದ ಅಮೆರಿಕ ತೊರೆದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಶೇರ್ (Viral News) ಮಾಡಿಕೊಂಡಿದ್ದಾರೆ.

ಮೆಟಾ ಕಂಪನಿಯ ಎಂಜಿನಿಯರಿಂಗ್ ವಿಭಾಗದ ಹಿರಿಯ ನಾಯಕ ಬಾಲಾಜಿ ಗುರುರಾಜನ್ ಅಮೆರಿಕದಲ್ಲಿದ್ದ ಉದ್ಯೋಗವನ್ನು ತ್ಯಜಿಸಿ ಬೆಂಗಳೂರು ವಾಪಸ್‌ ಬಂದಿದ್ದಾರೆ. ಅವರ ಭಾವನಾತ್ಮಕ ಲಿಂಕ್ಡ್‌ಇನ್ ಪೋಸ್ಟ್ ಆನ್‌ಲೈನ್‌ನಲ್ಲಿ ಎಲ್ಲರ ಹೃದಯ ಗೆದ್ದಿದೆ. ಗುರುರಾಜನ್, ತಮ್ಮ ಮಕ್ಕಳು ಕುಟುಂಬದ ಜತೆ ಬೆರೆಯಲು ಹಾಗೂ ತಮ್ಮ ಪೋಷಕರೊಂದಿಗೆ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಒಂದು ತಿಂಗಳ ಹಿಂದೆ, ʼʼನನ್ನ ಕುಟುಂಬ ಮತ್ತು ನಾನು ಅಮೆರಿಕದಲ್ಲಿ 18 ವರ್ಷಗಳನ್ನು ಕಳೆದು ಈಗ ಬ್ಯಾಗದ ಪ್ಯಾಕ್ ಮಾಡಿ ಬೆಂಗಳೂರಿಗೆ ತೆರಳಿದೆವು. ವಯಸ್ಸಾದ ಪೋಷಕರು, ಬೆಳೆಯುತ್ತಿರುವ ಮಕ್ಕಳ ದೃಷ್ಟಿಯಿಂದ ಕುಟುಂಬಕ್ಕೆ  ಹತ್ತಿರವಾಗಲು ಬಯಸಿದ್ದೇವೆ‌ʼʼ ಎಂದು ಬರೆದಿದ್ದಾರೆ. ತಮ್ಮ ಪೋಸ್ಟ್ ಜತೆಗೆ ಅವರು ವಿಮಾನ ನಿಲ್ದಾಣದಲ್ಲಿ ತೆಗೆದಿರುವ ಫೋಟೊ ಹಂಚಿಕೊಂಡಿದ್ದಾರೆ. ಅವರ ಕುಟುಂಬವು ಪ್ರಯಾಣಕ್ಕೆ ಸಿದ್ಧವಾಗುತ್ತಿದ್ದಂತೆ ಸೂಟ್‌ಕೇಸ್ ಟ್ರಾಲಿಯನ್ನು ತೋರಿಸಲಾಗಿದೆ.

ನೆರೆಮನೆಯ ಯುವಕನಿಂದನೇ ಕಿರುಕುಳ; ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ

ವಯಸ್ಸಾಗುತ್ತಿರುವ ಪೋಷಕರ ಜತೆ ಸಮಯ ಕಳೆಯಲು ಮತ್ತು ತಮ್ಮ ಮಕ್ಕಳಿಗೆ ಭಾರತದ ಕುಟುಂಬದ ಒಡನಾಟ ಸಿಗುವಂತೆ ಮಾಡಲು ಅಮೆರಿಕದ ಜೀವನವನ್ನು ತೊರೆದು ತಾಯ್ನಾಡಿಗೆ ಮರಳಿದ್ದಾರೆ. ಇವರು ಮೆಟಾ ಮಾತ್ರವಲ್ಲದೆ, ಮೈಕ್ರೋಸಾಫ್ಟ್ ಮತ್ತು ಲಿಂಕ್ಡ್‌ಇನ್‌ನಂತಹ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು.

ಗುರುರಾಜನ್ ಭಾರತವು ದೇಶಗಳನ್ನು ಬದಲಾಯಿಸುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ ಎಂದು ಹೇಳಿದರು. ಮನೆ, ಮತ್ತು ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ದಿನನಿತ್ಯದ ಎಲ್ಲ ಕೆಲಸಗಳು ಇಲ್ಲಿ ಮಹತ್ವದಾಗಿದೆ ಎಂದರು. ಇವರ ಪೋಸ್ಟ್‌ಗೆ ಸಾವಿರಾರು ಜನ ಮೆಚ್ಚುಗೆ ಸೂಚಿಸಿದ್ದಾರೆ. ಅಮೆರಿಕದಲ್ಲಿದ್ದ ಅನೇಕ ಭಾರತೀಯ ಉದ್ಯೋಗಿಗಳು ತಮಗೂ ಇಂತಹದ್ದೇ ಪರಿಸ್ಥಿತಿ ಎದುರಾಗಿದ್ದನ್ನು ವಿವರಿಸಿದ್ದಾರೆ.