ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲೋಕಲ್‌ ಟ್ರೇನ್‌ನಲ್ಲಿ ಜಡೆ ಜಗಳ; ಯುವತಿಯ ಜುಟ್ಟು ಹಿಡಿದು ಎಳೆದ ಮಹಿಳೆ!

Viral Video: ಮುಂಬೈನ ಲೋಕಲ್ ಟ್ರೈನ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ಯುವತಿಯೊಬ್ಬಳನ್ನು ಮತ್ತೊಬ್ಬ ಮಹಿಳೆ ಜುಟ್ಟು ಹಿಡಿದು ಎಳೆದಾಡಿರುವ ದೃಶ್ಯ ಕಂಡು ಬಂದಿದೆ. ಈ ಬಗ್ಗೆ ರೈಲ್ವೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ಮುಂಬೈ ಟ್ರೈನ್ ನಲ್ಲಿ ಯುವತಿಯ ಜುಟ್ಟು ಹಿಡಿದು ಎಳೆದಾಟ: ಇಲ್ಲಿದೆ ವಿಡಿಯೊ!

ಯುವತಿಯ ಜುಟ್ಟು ಹಿಡಿದು ಎಳೆದ ಮಹಿಳೆ -

Profile
Pushpa Kumari Feb 27, 2026 4:56 PM

ಮುಂಬೈ, ಫೆ.27: ಸಾರ್ವಜನಿಕ ಸಾರಿಗೆಯದ ಬಸ್, ರೈಲಿನಲ್ಲಿ‌ ಸಂಚರಿಸುವಾಗ ಪ್ರಯಾಣಿಕರ ಸಣ್ಣಪುಟ್ಟ ಜಗಳಗಳು ಆಗಾಗ ವೈರಲ್ (Viral Video) ಆಗುತ್ತವೆ. ಇದೀಗ ಮುಂಬೈನ ಲೋಕಲ್ ಟ್ರೈನ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ಯುವತಿಯೊಬ್ಬಳನ್ನು ಮತ್ತೊಬ್ಬ ಮಹಿಳೆ ಜುಟ್ಟು ಹಿಡಿದು ಎಳೆದಾಡಿರುವ ದೃಶ್ಯ ಕಂಡು ಬಂದಿದೆ. ಈ ಬಗ್ಗೆ ರೈಲ್ವೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ಈ ದೃಶ್ಯವು ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದ ಪ್ಲಾಟ್‌ ಫಾರ್ಮ್‌ನಲ್ಲಿ ನಡೆದಿದೆ. ಪ್ರಯಾಣಿಕರು ಕಿಕ್ಕಿರಿದ ಟ್ರೈನ್ ಗೆ ಹತ್ತುತ್ತಿದ್ದಂತೆ ಜನದಟ್ಟಣೆಯ ನಡುವೆಯೇ ಯುವತಿಯ ಕೂದಲನ್ನು ಹಿಡಿದು ಎಳೆದಿದ್ದಾಳೆ. ಇದರ ನಂತರ ಪ್ಲಾಟ್‌ ಫಾರ್ಮ್ ಮೇಲೆ ಯುವತಿ ಮತ್ತು ಮಹಿಳೆಯ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ ಎನ್ನಲಾಗಿದೆ.

ವಿಡಿಯೋ ನೋಡಿ:

ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಇಲ್ಲಿಯವರೆಗೆ ದಾಖಲಾಗಿಲ್ಲ. ರೈಲ್ವೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Viral News: ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯರ ಬೋಗಿಗೆ ಹತ್ತಲು ಭಾರೀ ನೂಕು ನುಗ್ಗಲು ಕಂಡು ಬಂದಿದೆ. ಈ ವೇಳೆ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದ ಯುವತಿಯೊಬ್ಬಳು ಟ್ರೈನ್ ಹತ್ತುತ್ತಿದ್ದಂತೆ ಬೋಗಿಯ ಹೊರಗೆ ಇದ್ದ ಮಹಿಳೆಯೊಬ್ಬಳು ಆಕೆಯ ಕೂದಲನ್ನು ಬಲವಂತವಾಗಿ ಹಿಡಿದು ಕೆಳಗೆ ಎಳೆದಿದ್ದಾಳೆ. ಇದಾದ ಕೆಲವೇ ಗಂಟೆಯಲ್ಲಿ ರೈಲು ಹೊರಡಲು ಸಿದ್ದ ಆದಾಗ ಆ ಯುವತಿ ಮತ್ತೆ ಹತ್ತಲು ಪ್ರಯತ್ನಿಸಿದ್ದಾಳೆ. ಆದರೆ ಈ ಬಾರಿಯೂ ಮಹಿಳೆ ಆಕೆಯ ಜುಟ್ಟು ಹಿಡಿದು ಎಳೆದಿದ್ದಾಳೆ.

ಇನ್‌ಸ್ಟಾಗ್ರಾಮ್ ನಲ್ಲಿ ವೀಡಿಯೊ ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕೂದಲನ್ನು ಎಳೆದ ಮಹಿಳೆಯ ವಿರುದ್ಧ "ಪೊಲೀಸ್ ದೂರು ದಾಖಲಿಸ ಬೇಕು" ಎಂದು ಸೂಚಿಸಿದ್ದಾರೆ. ಮತ್ತೊಬ್ಬರು ರೈಲಿನಿಂದ ಬೀಳಬಹುದಾಗಿದ್ದ ಮಹಿಳೆಯನ್ನು ಕೂದಲು ಎಳೆದು ರಕ್ಷಿಸಿದ್ದಾಳೆ ಎಂದು ಪರವಾಗಿ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಜನದಟ್ಟಣೆಯ ರೈಲುಗಳನ್ನು ಜನರು ಹತ್ತುವಾಗ ಬಿದ್ದು ಗಂಭೀರ ಗಾಯಗಳಾದ ಹಲವಾರು ಘಟನೆಗಳು ಕೂಡ ನಡೆದಿವೆ.