ಪ್ರವಾಹದಲ್ಲಿ ಕಂಡ ದೈತ್ಯಾಕಾರದ ಹೆಬ್ಬಾವು ನೋಡಿ ಬೆಚ್ಚಿ ಬಿದ್ದ ಪ್ರವಾಸಿಗರು! ವಿಡಿಯೋ ನೋಡಿ
Viral Video: ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಇಂಡೋನೇಷ್ಯಾದ ಬಾಲಿಯಲ್ಲಿ ಸುಮಾರು 6 ಅಡಿಗೂ ಹೆಚ್ಚು ಉದ್ದದ ಬೃಹತ್ ಹೆಬ್ಬಾವೊಂದು ಕಂಡುಬಂದಿದೆ. ಕಳೆದ ದಿನಗಳಿಂದ ಬಾಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ರಸ್ತೆಯಲ್ಲಿ ನೀರಿನ ನಡುವೆ ಹೆಬ್ಬಾವೊಂದು ಸರಾಗವಾಗಿ ಈಜುತ್ತಿದ್ದ ವಿಡಿಯೊ ವೈರಲ್ ಆಗಿದೆ.
ಬಾಲಿಯ ಪ್ರವಾಹದಲ್ಲಿ ಕಂಡು ಬಂದ ದೈತ್ಯ ಹೆಬ್ಬಾವು -
ಬಾಲಿ,ಫೆ.27: ಹಾವು ಅನ್ನುವ ಶಬ್ದ ಕೇಳಿದ ಕೂಡಲೇ ಹೆದರಿ ನಡುಗುವವರಿದ್ದಾರೆ. ಅದರಲ್ಲೂ ಹಾವುಗಳು ತಂಪಾದ ಸ್ಥಳಗಳನ್ನು ಹುಡುಕಾಡುತ್ತ ಮನೆಸುತ್ತಮುತ್ತಲಿನ ಪೊದೆಗಳ ನಡುವೆ, ಹಳೆಯ ಮರಗಳ ಬಿಲದ ನಡುವೆ ವಾಸಿಸುತ್ತವೆ. ಇದೀಗ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಇಂಡೋನೇಷ್ಯಾದ ಬಾಲಿಯಲ್ಲಿ ಸುಮಾರು 6 ಅಡಿಗೂ ಹೆಚ್ಚು ಉದ್ದದ ಬೃಹತ್ ಹೆಬ್ಬಾವೊಂದು ಕಂಡುಬಂದಿದೆ. ಕಳೆದ ದಿನಗಳಿಂದ ಬಾಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ರಸ್ತೆಯಲ್ಲಿ ನೀರಿನ ನಡುವೆ ಹೆಬ್ಬಾವೊಂದು ಸರಾಗವಾಗಿ ಈಜುತ್ತಿದ್ದ ವಿಡಿಯೊ ವೈರಲ್ (Viral Video) ಆಗಿದೆ.
ಹಲವಾರು ದಿನಗಳಿಂದ ಬಾಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವಾರು ಪ್ರದೇಶಗಳು ನೀರಿನಿಂದ ಆವೃತವಾಗಿದೆ. ಈ ಪ್ರವಾಹದ ನಡುವೆ ಸುಮಾರು 6 ಅಡಿಗೂ ಅಧಿಕ ಉದ್ದದ ಬೃಹತ್ ಹೆಬ್ಬಾವೊಂದು ರಸ್ತೆಯಲ್ಲಿ ಕಂಡು ಬಂದಿದ್ದು ಇದನ್ನು ಗಮನಿಸಿದ ಜನರು ಭಯಭೀತರಾಗಿದ್ದಾರೆ.
ವಿಡಿಯೋ ನೋಡಿ:
After three straight days of relentless torrential rain in Bali, streets in popular spots like Kuta and Legian have turned into knee-deep rivers.And now massive pythons 6 feet long are casually swimming through them.
— Paul🥷 (@l4pablo) February 25, 2026
You won’t find me anywhere near Bali anytime soon 🐍🌧️ pic.twitter.com/apO1X2awpp
ಕಂದು ಬಣ್ಣದ ಹೆಬ್ಬಾವು ಬಹುತೇಕ ಇಡೀ ಬೀದಿಯನ್ನು ಆವರಿಸಿರುವ ಕೆಸರುಮಯ ನೀರಿನ ಮೂಲಕ ಶಾಂತವಾಗಿ ಚಲಿಸುತ್ತಿರುವುದನ್ನು ಕಾಣಬಹುದು. ಹಾವನ್ನು ಕಂಡ ಪ್ರವಾಸಿಗರು ಭಯಪಟ್ಟು ಕಿರುಚುತ್ತಾ ಒಬ್ಬರಿಗೊಬ್ಬರು ಎಚ್ಚರಿಕೆ ನೀಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
Viral News: ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಈ ಪ್ರವಾಹದ ನೀರಲ್ಲೇ ದೈತ್ಯಾಕಾರದ ಹೆಬ್ಬಾವೊಂದು ಅತ್ಯಂತ ಸರಾಗವಾಗಿ ಈಜಿಕೊಂಡು ಹೋಗುತ್ತಿದೆ. ಈ ದೃಶ್ಯಗಳು ಆನ್ ಲೈನ್‌ನಲ್ಲಿ ಹರಡುತ್ತಿದ್ದಂತೆ, ಅನೇಕ ಬಳಕೆದಾರರು ಆಘಾತ ವ್ಯಕ್ತ ಪಡಿಸಿದ್ದಾರೆ. ಒಬ್ಬ ಬಳಕೆದಾರರು ನನ್ನ ಪ್ರಯಾಣದ ಪಟ್ಟಿಯಿಂದ ಬಾಲಿ ಕ್ಯಾನ್ಸಲ್ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಭಯಾನಕವಾಗಿದೆ.."ಹೆಬ್ಬಾವು ಖಂಡಿತವಾಗಿಯೂ 6 ಅಡಿಗಿಂತ ದೊಡ್ಡದು ಎಂದು ಬರೆದಿದ್ದಾರೆ.
ಬಾಲಿಯಲ್ಲಿ ಮೂರು ದಿನಗಳ ನಿರಂತರ ಮಳೆಯ ನಂತರ, ಕುಟಾ ಮತ್ತು ಲೆಜಿಯನ್‌ನಂತಹ ಜನಪ್ರಿಯ ಸ್ಥಳದ ಬೀದಿಗಳು ನೀರಿನಿಂದ ಆವೃತ್ತವಾಗಿವೆ. ಈಗ 6 ಅಡಿ ಉದ್ದದ ಬೃಹತ್ ಹೆಬ್ಬಾವು ಕೂಡ ಸುಲಭವಾಗಿ ಈಜುತ್ತಿದೆ..