ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನ ಕಲಕುವ ದೃಶ್ಯ; ಬಿಸಿಲಿನ ಬೇಗೆಗೆ ದಾಹ ತಾಳಲಾರದೆ ಸರ್ಕಾರಿ ಬಸ್‌ಗೆ ಮುತ್ತಿಗೆ ಹಾಕಿದ ಕೋತಿಗಳ ಹಿಂಡು

Viral Video: ಬಾಯಿ ಬಾರದ ಮುಖ ಪ್ರಾಣಿಗಳು ಈ ಬಿಸಿಲಿನಲ್ಲಿ ಅನುಭಸುತ್ತಿರುವ ತೊಂದರೆಗಳ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ವಾಶಿಮ್‌ನಿಂದ ಪುಸಾದ್‌ಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಮುಂದೆ ಹಠಾತ್ತನೆ ಕೋತಿಯೊಂದು ಬಂದು ನಿಂತಿದೆ. ಪ್ರಯಾಣಿಕರು ಆರಂಭದಲ್ಲಿ ಪ್ರಾಣಿ ಆಕಸ್ಮಿಕವಾಗಿ ರಸ್ತೆಗೆ ಬಂದಿದೆ ಎಂದುಕೊಂಡು ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಬಳಿಕ ನಿಜ ವಿಷಯ ತಿಳಿದು ಅಲ್ಲಿದ್ದವರ ಮನಸ್ಸು ಕರಗಿತು.

ನೀರಿಗಾಗಿ ಸರ್ಕಾರಿ ಬಸ್ ಮುತ್ತಿಗೆ ಹಾಕಿದ ಕೋತಿಗಳು: ವಿಡಿಯೊ ನೋಡಿ

ಮಹಾರಾಷ್ಟ್ರದಲ್ಲಿ ನೀರಿಗಾಗಿ ಸರ್ಕಾರಿ ಬಸ್ ಮುತ್ತಿಗೆ ಹಾಕಿದ ಕೋತಿಗಳ ಹಿಂಡು -

Profile
Pushpa Kumari May 22, 2026 8:24 PM

ಮುಂಬೈ, ಮೇ 22: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೆಕೆಯಿಂದ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಸಂಕಷ್ಟ ಅನುಭವಿಸುವಂತಾಗಿದೆ. ತೀವ್ರ ಬಿಸಿಲಿನಿಂದ ದಾಹಕ್ಕೆ ಒಳಗಾಗಿ ಪ್ರಾಣಿ-ಪಕ್ಷಿಗಳು ಪ್ರಾಣಾಪಾಯಕ್ಕೆ ಸಿಲುಕುತ್ತಿವೆ. ಈ ನಡುವೆ ತೀವ್ರ ಬಾಯಾರಿಕೆಯಿಂದ ಬಳಲುತ್ತಿದ್ದ ಕೋತಿಗಳ ಹಿಂಡೊಂದು ಸರ್ಕಾರಿ ಬಸ್ ಅನ್ನು ತಡೆದು ನಿಲ್ಲಿಸಿದ ಘಟನೆ ನಡೆ‌ದಿದೆ. ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್‌ ಅನ್ನು ಬಾಯಾರಿದ ಮಂಗಗಳ ಗುಂಪು ತಡೆದಿದೆ.‌ ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ವನ್ಯಜೀವಿ ಸಂಚಾರಕ್ಕೆ ಹೆಸರುವಾಸಿಯಾದ ಅರಣ್ಯ ಪ್ರದೇಶ ಪುಸಾದ್‌ನ ಖಂಡಾಲಾ ಘಾಟ್ ಬಳಿ ಮಧ್ಯಾಹ್ನದ ಈ ಘಟನೆ ನಡೆದಿದೆ. ಬಾಯಿ ಬಾರದ ಮುಖ ಪ್ರಾಣಿಗಳು ಈ ಬಿಸಿಲಿನಲ್ಲಿ ಅನುಭಸುತ್ತಿರುವ ತೊಂದರೆಗಳ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ವಾಶಿಮ್‌ನಿಂದ ಪುಸಾದ್‌ಗೆ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಮುಂದೆ ಹಠಾತ್ತನೆ ಕೋತಿಯೊಂದು ಬಂದು ನಿಂತಿದೆ. ಪ್ರಯಾಣಿಕರು ಆರಂಭದಲ್ಲಿ ಇದು ಆಕಸ್ಮಿಕವಾಗಿ ರಸ್ತೆಗೆ ಬಂದಿದೆ ಎಂದುಕೊಂಡಿದ್ದರು. ಹೀಗಾಗಿ ಅದನ್ನು ಓಡಿಸಲು ಪ್ರಯತ್ನಿಸಿದರು. ಆದಾಗ್ಯೂ, ಮಂಗ ಬಸ್ ಬಳಿಯೇ ನಿಂತಿತ್ತು. ಬಳಿಕ ವಿಚಾರಿಸಿದಾಗ ನೈಜ ಕಾರಣ ಗೊತ್ತಾಗಿದೆ.

ವಿಡಿಯೊ ನೋಡಿ:



ತೀವ್ರ ಬಿಸಿಲಿನಿಂದ ಕೋತಿ ಬಹಳಷ್ಟು ದಣಿದಿತ್ತು. ಇದನ್ನು ಕಂಡ ಪ್ರಯಾಣಿಕರು ತಕ್ಷಣವೇ ತಮ್ಮ ಬಳಿಯಿದ್ದ ಬಾಟಲಿಯಿಂದ ನೀರುನಿಸಿದರು. ಮಂಗವು ತಕ್ಷಣವೇ ಅದನ್ನು ಕುಡಿಯಲು ಪ್ರಾರಂಭಿಸಿತು. ಕೆಲವೇ ನಿಮಿಷಗಳಲ್ಲಿ ಕೋತಿಗಳ ಹಿಂಡೇ ಬಂದು ನಿಂತಿದೆ. ಕೋತಿಗಳು ಹತ್ತಿರದ ಕಾಡಿನಿಂದ ಹೊರಬಂದು ಬಸ್ಸಿನ ಸುತ್ತಲೂ ಜಮಾಯಿಸಿ, ಪ್ರಯಾಣಿಕರು ನೀಡಿದ ಬಾಟಲಿಗಳಿಂದ ನೀರು ಕುಡಿಯಲು ಮುಂದಾಗಿವೆ.

ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್

ಮೊದಲ ಕೋತಿ ನೀರು ಕುಡಿಯುತ್ತಿದ್ದಂತೆಯೇ ಮತ್ತಷ್ಟು ಕೋತಿಗಳು ಮುತ್ತಿಗರ ಹಾಕಿದವು. ಅನೇಕ ಜನರು ಈ ದೃಶ್ಯಗಳನ್ನು ʼಹೃದಯ ವಿದ್ರಾವಕʼ ಎಂದು ಬಣ್ಣಿಸಿದ್ದಾರೆ. ಬಿಸಿಲಿನ ತೀವ್ರತೆ ಪ್ರಾಣಿಗಳ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮಹಾರಾಷ್ಟ್ರದದಲ್ಲಿ ಉಷ್ಣಾಶ ಗಣನೀಯವಾಗಿ ಏರಿಕೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.