ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರತಿಯೊಬ್ಬ ಪೋಷಕರ ಕನಸು: ಮಗನಿಗೆ ಗೂಗಲ್‌ನಲ್ಲಿ ಕೆಲಸ ಸಿಕ್ಕ ವಿಚಾರ ಕೇಳಿ ಹೆತ್ತವರು ಭಾವುಕ! ಹೃದಯಸ್ಪರ್ಶಿ ವಿಡಿಯೊ ವೈರಲ್‌

Viral Video: ಪ್ರತಿಷ್ಠಿತ ಗೂಗಲ್‌ನಲ್ಲಿ ಕೆಲಸ ಸಿಕ್ಕ ಬಗ್ಗೆ ಯುವಕ ಪೋಷಕರ ಬಳಿ ಹೇಳಿಕೊಂಡಿದ್ದು, ಅವರು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಇದು ಪೋಷಕರ ಪ್ರಯತ್ನ, ಮಕ್ಕಳ ಮೇಲಿನ ನಂಬಿಕೆ, ಕಠಿಣ ಪರಿಶ್ರಮಕ್ಕೆ ಸಾಕ್ಷಿ ಎನಿಸಿಕೊಂಡಿದೆ.

ಮಗನಿಗೆ ಗೂಗಲ್ ಕಂಪನಿಯಲ್ಲಿ ಕೆಲಸ ಸಿಕ್ಕ ಖುಷಿಗೆ ಪೋಷಕರು ಭಾವುಕ

ಮಗನಿಗೆ ಗೂಗಲ್ ಕಂಪನಿಯಲ್ಲಿ ಕೆಲಸ ಸಿಕ್ಕ ಖುಷಿಗೆ ಭಾವುಕರಾದ ಪೋಷಕರು -

Profile
Pushpa Kumari May 22, 2026 7:16 PM

ನವದೆಹಲಿ, ಮೇ 22: ಕಷ್ಟಪಟ್ಟು ಓದಿಸಿದ ಪೋಷಕರಿಗೆ ತಮ್ಮ ಮಕ್ಕಳು ಉತ್ತಮ ಉದ್ಯೋಗ ಗಿಟ್ಟಿಸಿಕೊಂಡಾಗ ಆಗುವ ಸಂಭ್ರಮ, ಖುಷಿ ಅಷ್ಟಿಷ್ಟಲ್ಲ. ಪ್ರತಿ ಪೋಷಕರಿಗೂ ತಮ್ಮ ಮಕ್ಕಳು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಬೇಕು ಅನ್ನುವ ಆಸೆ, ಆಕಾಂಕ್ಷೆ ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಯುವಕನೊಬ್ಬ ಗೂಗಲ್ ಕಂಪನಿಯಲ್ಲಿ ಕೆಲಸ ಪಡೆದುಕೊಂಡಾಗ ಪೋಷಕರು ಭಾವುಕರಾದ ದೃಶ್ಯವೊಂದು ಭಾರಿ ವೈರಲ್ (Viral News) ಆಗುತ್ತಿದೆ. ನೆಟ್ಟಿಗರು ಈ ವಿಡಿಯೊವನ್ನು ಹೃದಯಸ್ಪರ್ಶಿ ದೃಶ್ಯ ಎಂದು ಕರೆದಿದ್ದಾರೆ.

ಸಿಕ್ಕ ಕೆಲಸದ ಬಗ್ಗೆ ಯುವಕ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದು, ಅವರು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಈ ಕ್ಲಿಪ್ ಪೋಷಕರ ಪ್ರಯತ್ನ, ಮಕ್ಕಳ ಮೇಲಿನ ನಂಬಿಕೆ, ಕಠಿಣ ಪರಿಶ್ರಮಕ್ಕೆ ಜಯ ಇದ್ದೇ ಇದೆ ಎನ್ನುವುದನ್ನು ಸಾರಿ ಹೇಳಿದೆ. ಮಗನು ತನಗೆ ಗೂಗಲ್ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಅಂದಾಗ ಪೋಷಕರ ಮುಖದಲ್ಲಿ ನಗು, ಅಳು, ಹೆಮ್ಮೆಯ ಭಾವನೆಗಳು ಎದ್ದು ತೋರಿವೆ. ಮಗನ ಸಾಧನೆ ಕಂಡು ಪೋಷಕರು ಆತನನ್ನು ಅಪ್ಪಿ ಕೊಂಡಾಡಿದ್ದಾರೆ.

ವಿಡಿಯೊ ನೋಡಿ:

ಈ ದೃಶ್ಯವು ಕುಟುಂಬದ ಸರಳತೆ ಮತ್ತು ಪ್ರಾಮಾಣಿಕತೆ ಪ್ರತಿಧ್ವನಿಸಿದೆ. ನೆಟ್ಟಿಗರು ಇದನ್ನು ಅತ್ಯಂತ ಸಂಭ್ರಮ ಕ್ಷಣ ಎಂದು ಬಣ್ಣಿಸಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ ಮಕ್ಕಳ ಯಶಸ್ಸನ್ನು ಎಲ್ಲ ಪೋಷಕರು ಬಯಸುತ್ತಾರೆ‌. ಮಕ್ಕಳಿಗೆ ಉದ್ಯೋಗ ಸಿಕ್ಕಾಗ ಇಡೀ ಕುಟುಂಬದ ಗೆಲುವು ಎಂಬಂತೆ ಸಂಭ್ರಮಿಸಲಾಗುತ್ತದೆ. ಈ ವಿಡಿಯೊ ಕೂಡ ಅದಕ್ಕೆ ಸಾಕ್ಷಿ ಎಂದು ಹಲವರು ಹೇಳಿದ್ದಾರೆ.

ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ಸೋಷಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ವಿಭಾಗಗಳನ್ನು ಭಾವನಾತ್ಮಕ ಪ್ರತಿಕ್ರಿಯೆಗಳಿಂದ ತುಂಬಿಸುತ್ತಿದ್ದಾರೆ. ನೆಟ್ಟಿಗರೊಬ್ಬರು "ಪ್ರತಿ ಮಧ್ಯಮ ವರ್ಗದ ಜನರು ಈ ಕ್ಷಣದ ಕನಸು ಕಾಣುತ್ತಾರೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಅವರ ಮುಖದಲ್ಲಿ ವರ್ಷಗಳ ಕಾಲದ ತ್ಯಾಗ ಮತ್ತು ಶ್ರಮ ಎದ್ದುಕಂಡಿದೆ. ಪ್ರತಿಯೊಂದು ಯಶಸ್ವಿ ಮಗುವಿನ ಹಿಂದೆ ಮೌನವಾಗಿ ಹೋರಾಡುವ ಪೋಷಕರು ಇದ್ದಾರೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.