ನೇಪಾಳದಲ್ಲಿ ದಿಢೀರ್ ಪ್ರವಾಹ: ಹೆಲಿಕಾಪ್ಟರ್ ಮೂಲಕ ಯುವಕನ ಪ್ರಾಣ ಉಳಿಸಿದ ಯೋಧರು; ರೋಚಕ ಕಾರ್ಯಾಚರಣೆಯ ವಿಡಿಯೊ ಇಲ್ಲಿದೆ
Nepal Floods: ನೇಪಾಳದ ಭೋಟೆ ಕೋಶಿ ನದಿಯ ತೀರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 165ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹದ ಮಧ್ಯೆ ಸಿಲುಕಿಕೊಂಡ ಯುವಕನೊಬ್ಬನನ್ನು ಹೆಲಿಕಾಪ್ಟರ್ ಮೂಲಕ ಯೋಧರೊಬ್ಬರು ರಕ್ಷಿಸಿದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಯುವಕನನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದ ಯೋಧ -
ಕಠ್ಮಂಡು, ಆ. 27: ಟಿಬೆಟ್ ಗಡಿಯ ಸಮೀಪ ನೇಪಾಳದ ಭೋಟೆ ಕೋಶಿ ನದಿ ತೀರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 165ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡ ಯುವಕನೊಬ್ಬನನ್ನು ಹೆಲಿಕಾಪ್ಟರ್ ಮೂಲಕ ಯೋಧರೊಬ್ಬರು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ನೇಪಾಳದಲ್ಲಿ ನಡೆದ ದುರ್ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಪ್ರವಾಹದ ಅಬ್ಬರಕ್ಕೆ ಜನವಸತಿ ಪ್ರದೇಶಗಳು, ಜಲವಿದ್ಯುತ್ ಘಟಕಗಳು, ರಸ್ತೆಗಳು ಸಂಪೂರ್ಣ ಜಲ ಸಮಾಧಿಯಾಗಿವೆ. ಹಠಾತ್ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 165ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪೈಕಿ 300ಕ್ಕೂ ಹೆಚ್ಚು ಭಾರತೀಯರು ಸೇರಿದ್ದಾರೆ. ಈ ನಡುವೆ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡ ಯುವಕನೊಬ್ಬನನ್ನು ನೇಪಾಳ ಸೇನೆಯ ಯೋಧರು ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ವಿಡಿಯೊ ನೋಡಿ:
बाढी प्रभावितहरूको उद्धारमा #नेपालीसेना....
— Nepali Army (@NepaliArmyHQ) August 26, 2026
उच्च सतर्कता अपनाउँदै सुरक्षित रहन समेत अनुरोध !!!!
जहाँ संकट, त्यहाँ #नेपालीसेना#NepaliArmy#BhotekoshiFlood pic.twitter.com/CFmuLYQItr
ನೇಪಾಳ ಸೇನೆಯೂ ಬಿಡುಗಡೆ ಮಾಡಿದ ವಿಡಿಯೊದಲ್ಲಿ ವೇಗವಾಗಿ ಹರಿಯುವ ಪ್ರವಾಹದ ನಡುವೆ ಕಟ್ಟಡದ ಚಾವಣಿಯ ಮೇಲೆ ಸಿಲುಕಿರುವ ವ್ಯಕ್ತಿಯೋರ್ವರು ಕಂಡು ಬಂದಿದ್ದಾರೆ. ಆತ ತನ್ನ ಟಿ-ಶರ್ಟ್ ಬೀಸಿ ಅಪಾಯದಲ್ಲಿರುವ ಬಗ್ಗೆ ಸೇನಾ ಹೆಲಿಕಾಪ್ಟರ್‌ಗೆ ಸಂಕೇತ ನೀಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಯೋಧರು ಹೆಲಿಕಾಪ್ಟರ್‌ನಿಂದ ಕೆಳಗಿಳಿದು ಯುವಕನನ್ನು ರಕ್ಷಿಸಿದ್ದಾರೆ.
ಈ ಟ್ಯಾಕ್ಸಿಯಲ್ಲಿದೆ ಉಚಿತ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್ ಕೂಡ ಮಾಡಬಹುದು
ಹಠಾತ್ ಪ್ರವಾಹದಿಂದ ಸಂಪರ್ಕ ಕಡಿತಗೊಂಡ ಜನರು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ಹಾಗೂ ರಕ್ಷಣಾ ಸಿಬ್ಬಂದಿ ಜನರನ್ನು ಕಾಪಾಡಲು ಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಚಾವಣಿಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತಾ ಸ್ಥಳಗಳನ್ನು ತಲುಪಿಸಲು ನೇಪಾಳ ಸೇನೆಯು ವಿಮಾನ ಮತ್ತು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿದೆ.
ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದ್ದು, ರಸುವಾ ಪ್ರದೇಶದಲ್ಲಿ ಭಾರತೀಯರು ಸೇರಿ ನೂರಾರು ಪ್ರವಾಸಿಗರು ಮತ್ತು ಸ್ಥಳೀಯರು ನಾಪತ್ತೆಯಾಗಿದ್ದಾರೆ. ಸೇನೆಯು ಸಾರ್ವಜನಿಕರಿಗೆ ಜಾಗರೂಕತೆಯಿಂದ ಹಾಗೂ ಸುರಕ್ಷಿತವಾಗಿರಲು ಮನವಿಯನ್ನು ನೀಡಿದೆ.