ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಚಾಲಕನ ಜೊತೆ ರಾಜನಂತೆ ಕುಳಿತ ಬೀದಿನಾಯಿ; ವಿಡಿಯೊ ನೋಡಿ

Viral Video: ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ಪ್ರಯಾಣ ಮಾಡುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಿಯೂ ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯ ನೋಡಿದ ಅನೇಕರು ಇವರಿಬ್ಬರ ಪ್ರೆಂಡ್ ಶೀಪ್ ಗೆ ಲೈಕ್ ಕಾಮೆಂಟ್ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ...

ಸೈಕಲ್ ರಿಕ್ಷಾ ಚಾಲಕ ಹಾಗೂ ಬೀದಿನಾಯಿಯ ಭಾಂದವ್ಯಕ್ಕೆ ನೆಟ್ಟಿಗರು ಫಿದಾ!

ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಚಾಲಕನ ಜೊತೆ ರಾಜನಂತೆ ಕುಳಿತ ಬೀದಿನಾಯಿ -

Profile
Pushpa Kumari Jul 17, 2026 8:39 PM

ನೋಯ್ಡಾ,ಜು.17: ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುವ ಕೆಲವೊಂದು ದೃಶ್ಯಗಳು ಜನರ ಹೃದಯ ಗೆಲ್ಲುತ್ತವೆ‌. ಇದಕ್ಕೆ ಸಾಕ್ಷಿ ಎಂಬಂತೆ ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ಪ್ರಯಾಣ ಮಾಡುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಿಯೂ ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯ ನೋಡಿದ ಅನೇಕರು ಇವರಿಬ್ಬರ ಫ್ರೆಂಡ್‌ಶಿಪ್‌ಗೆ ಲೈಕ್ ಕಾಮೆಂಟ್ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ದಿನ ನಿತ್ಯ ಶ್ರಮ ವಹಿಸಿ ದುಡಿಯುವ ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಮುದ್ದಾದ ಬೀದಿ ನಾಯಿಯೊಂದಿಗೆ ಸವಾರಿ ಮಾಡುತ್ತಾನೆ. ಆತನ ಜೊತೆ ​ಮುಂಭಾಗದ ಸೀಟಿನಲ್ಲಿ ಆರಾಮವಾಗಿ ಕುಳಿತ ನಾಯಿ ಸುತ್ತಮುತ್ತ ನೋಡುತ್ತಾ ಎಂಜಾಯ್ ಮಾಡುತ್ತಿದೆ. ವೀಕ್ಷಕರು ಆ ವ್ಯಕ್ತಿ ಮತ್ತು ಅವನ ನಾಯಿ ಸ್ನೇಹಿತನ ನಡುವಿನ ಸುಂದರವಾದ ಬಾಂಧವ್ಯವನ್ನು ಕೊಂಡಾಡುತ್ತಿದ್ದಾರೆ.

ವಿಡಿಯೋ ನೋಡಿ:

ನೋಯ್ಡಾ ಸೆಕ್ಟರ್ 59 ಮೆಟ್ರೋ ನಿಲ್ದಾಣದ ಬಳಿ ರೆಕಾರ್ಡ್ ಮಾಡಲಾದ ಕ್ಲಿಪ್ ಇದಾಗಿದೆ. ವೈರಲ್ ವೀಡಿಯೊದಲ್ಲಿ, ಸೈಕಲ್ ಬಿಡುವವನು ಪ್ರಯಾಣಿಕನನ್ನು ಸಾಗಿಸುತ್ತಿರುವಾಗ ನಾಯಿ ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಟ್ರಾಫಿಕ್ ನಡುವೆಯೂ ಯಾವುದೇ ಭಯವಿಲ್ಲದೆ, ರಸ್ತೆಯಲ್ಲಿ ಸಾಗುವ ವಾಹನಗಳನ್ನು ನೋಡುತ್ತಾ ಕುಳಿತಿದೆ.

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

ಈ ವೀಡಿಯೊವನ್ನು ಕಂಟೆಂಟ್ ಕ್ರಿಯೇಟರ್‌ ಶಿವಾಂಕ್ ಚೌಧರಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ಇವರನ್ನು ದಿನಾ ಸೆಕ್ಟರ್ 59 ಮೆಟ್ರೋ ನಿಲ್ದಾಣದ ಬಳಿ ನೋಡುತ್ತೇವೆ, ಇವರಿಬ್ಬರ ಭಾಂದವ್ಯ ಅದ್ಭುತವಾಗಿದೆ" ಎಂದು ಬರೆದಿದ್ದಾರೆ., ನೆಟ್ಟಿಗರು ಕೂಡ ಈ ವಿಡಿಯೊಗೆ ಮೆಚ್ಚುಗೆ ನೀಡಿದ್ದು ನೀವೇನಾದರೂ ನೋಯ್ಡಾ ಸೆಕ್ಟರ್ 59 ರ ಮೆಟ್ರೋ ನಿಲ್ದಾಣಕ್ಕೆ ಹೋದರೆ, ದಯವಿಟ್ಟು ರಾಪಿಡೋ ಅಥವಾ ಆಟೋ ಬುಕ್ ಬದಲು ಇವರ ಜೊತೆ ಪ್ರಯಾಣ ಬೆಳೆಸಿ,ಇವರ ಜೀವನೋಪಾ ಯಕ್ಕೆ ಮತ್ತು ಆತನ ನಾಯಿಯ ಪೋಷಣೆಗೆ ದೊಡ್ಡ ಸಹಾಯವಾಗುತ್ತದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಹೃದಯಸ್ಪರ್ಶಿ ಜೋಡಿಗೆ ನಾವು ಬೆಂಬಲಿಸುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಶ್ರಮಜೀವಿ ಎಂದು ಸಾಬೀತುಪಡಿಸಿದ ವ್ಯಕ್ತಿ. ನಿಜಕ್ಕೂ ಇವರನ್ನು ಬೆಂಬಲಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.