ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಮುಕಾಬ್ಲಾ' ಹಾಡಿಗೆ ಶಿಕ್ಷಕಿಯ ಮಸ್ತ್ ಡ್ಯಾನ್ಸ್ : ಪ್ರಭುದೇವ ಸ್ಟೆಪ್ ಮೀರಿಸುವಂತಿದೆ ಎಂದ ನೆಟ್ಟಿಗರು!

Viral Video; ಒಡಿಶಾ ಮೂಲದ ಶಿಕ್ಷಕಿ ಮೋತಿ ಬೆಹೆರಾ ಅವರು ಐಕಾನಿಕ್ ಹಾಡಿನ ಮುಕಾಬ್ಲಾ ವೆಂಟ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸರ್ ಪ್ರಭುದೇವ ಅವರ ಸಿಗ್ನೇಚರ್ ಸಾಂಗ್ ಗೆ ಸ್ಟೆಪ್ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಈ ಶಿಕ್ಷಕಿ ಮಾತ್ರ ಜಬರ್ದಸ್ ಡ್ಯಾನ್ಸ್ ಮಾಡಿ ನೋಡುಗರನ್ನು ಮೂಕ ವಿಸ್ಮಿತರಾಗಿ ಮಾಡಿದ್ದಾರೆ.

ಒಡಿಶಾದ ಶಿಕ್ಷಕಿಯ ಭರ್ಜರಿ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ: ವಿಡಿಯೊ ನೋಡಿ

ಒಡಿಶಾದ ಶಿಕ್ಷಕಿಯ 'ಮುಕಾಬ್ಲಾ' ಹಾಡಿಗೆ ಮಸ್ತ್ ಡ್ಯಾನ್ಸ್ -

Profile
Pushpa Kumari Jul 6, 2026 2:54 PM

ಒಡಿಶಾ,ಜು.6: ಸೋಷಿಯಲ್ ಮೀಡಿಯಾದಲ್ಲಿ ಹಲವು ಟ್ರೆಂಡಿಂಗ್ ಡ್ಯಾನ್ಸ್ ವಿಡಿಯೊ ವೈರಲ್ (Viral News) ಆಗುತ್ತವೆ. ಯಾವುದೇ ಸಿನಿಮಾ ಹಾಡು ಹಿಟ್ ಆದರೆ ಸಾಕು ಅದಕ್ಕೆ ಸ್ಟೆಪ್ ಹಾಕಲು ತುದಿ ಕಾಲಲ್ಲಿ ನಿಂತಿರುತ್ತಾರೆ. ಇದೀಗ ಶಿಕ್ಷಕಿಯೊಬ್ಬರು ಐಕಾನಿಕ್ ಹಾಡು 'ಮುಕಾಬ್ಲಾ' ಕ್ಕೆ ಭರ್ಜರಿಯಾಗಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಅವರ ನೃತ್ಯ ಕೌಶಲ್ಯವು ಲಕ್ಷಾಂತರ ಜನರನ್ನು ಆಕರ್ಷಿಸಿದ್ದೂ ಇದು ಪ್ರಭುದೇವ ಅವರನ್ನು ಮೀರಿಸಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಒಡಿಶಾ ಮೂಲದ ಶಿಕ್ಷಕಿ ಮೋತಿ ಬೆಹೆರಾ ಅವರು ಐಕಾನಿಕ್ ಹಾಡಿನ ಮುಕಾಬ್ಲಾ ವೆಂಟ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸರ್ ಪ್ರಭುದೇವ ಅವರ ಸಿಗ್ನೇಚರ್ ಸಾಂಗ್ ಗೆ ಸ್ಟೆಪ್ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಈ ಶಿಕ್ಷಕಿ ಮಾತ್ರ ಜಬರ್ದಸ್ ಡ್ಯಾನ್ಸ್ ಮಾಡಿ ನೋಡುಗರನ್ನು ಮೂಕವಿಸ್ಮಿತರಾಗಿ ಮಾಡಿದ್ದಾರೆ. ಅವರ ರೀಲ್ ಈಗಾಗಲೇ 1.9 ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು ಸಾವಿರಾರು ಬಳಕೆದಾರರು ಅವರ ಅಭಿನಯ, ಎಕ್ಸ್‌ಪ್ರೆಶನ್, ಎನರ್ಜಿ ನೋಡಿ ಮಸ್ತ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ:

ಸರಳವಾದ ಕುರ್ತಿ ಮತ್ತು ಜೀನ್ಸ್ ಧರಿಸಿ ಈ ನೃತ್ಯ ಮಾಡಿದ್ದಾರೆ. ತಾವು ಧರಿಸುವ ವೇಷಭೂಷಣಗಳು ಅಥವಾ ಅದ್ದೂರಿ ಸೆಟ್‌ಗಳಿಗಿಂತ ಪ್ರತಿಭೆಯೇ ಮುಖ್ಯವಾಗುತ್ತದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ. ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಪ್ರಕಾರ, ಅವರು ಒಬ್ಬ ಶಿಕ್ಷಕಿ ಮತ್ತು ತಾಯಿ ಯಾಗಿದ್ದು ಪ್ರತಿಭೆಗೆ ಯಾವುದೇ ವಯಸ್ಸು ಅಥವಾ ಯಾರ ಹಂಗಿಲ್ಲ ಎಂಬುದನ್ನು ಸಾರಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ್ಗೆ ಡ್ಯಾನ್ಸ್ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Viral Video: ಬೆಂಗಳೂರಿನ ಕಟ್ಟಡದ ​ಬಾಲ್ಕನಿಯಲ್ಲಿ ಓಪನ್ ಟಾಯ್ಲೆಟ್; ಮನೆಯ ಮಾಲಕ ಪ್ರಕೃತಿ ಪ್ರೇಮಿಯಾಗಿರಬೇಕೆಂದು ಕಾಲೆಳೆದ ನೆಟ್ಟಿಗರು

ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು "ಅವರು ತುಂಬಾ ಸುಲಭವಾಗಿ ಮತ್ತು ಆತ್ಮವಿಶ್ವಾಸದಿಂದ ನೃತ್ಯ ಮಾಡಿದ್ದಾರೆ ಅದ್ಭುತ" ಎಂದು ಬರೆದಿದ್ದಾರೆ. ಮತ್ತೊಬ್ಬರು ಕಲೆಗೆ ಯಾವುದೇ ಹಣ, ಶ್ರೀಮಂತಿಕೆ ಬೇಕಾಗಿಲ್ಲ ಅವಕಾಶ ಇದ್ದರೆ ಸಾಕು ಎಂದು ಮಹಿಳೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.