60 ಕಿ.ಮೀ. ಓಲಾ ಪ್ರಯಾಣಕ್ಕೆ 5,662 ರುಪಾಯಿ ವಸೂಲಿ ಮಾಡಿದ ಚಾಲಕ: ದುಬಾರಿ ಬಿಲ್ ನೋಡಿ ಬೆಚ್ಚಿಬಿದ್ದ ಗ್ರಾಹಕರು
Viral News: ಓಲಾ ಟ್ಯಾಕ್ಸಿ ಚಾಲಕನೊಬ್ಬ 60 ಕಿಲೋ ಮೀಟರ್ ಪ್ರಯಾಣಕ್ಕೆ 5,662 ರುಪಾಯಿ ಬಿಲ್ ನೀಡಿರುವ ಘಟನೆ ನಡೆದಿದೆ. ಪ್ರಯಾಣಿಕರ ಗುಂಪೊಂದು ಬುಕಿಂಗ್ ಮಾಡುವಾಗ ತೋರಿಸಲಾದ ದರ 1,285 ರುಪಾಯಿ ಆಗಿತ್ತು. ಅದಾಗ್ಯೂ, ಅಂತಿಮ ಮೊತ್ತವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಅನುಭವ ಹಂಚಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ, ಆ. 29: ಇತ್ತೀಚೆಗೆ ಕ್ಯಾಬ್ ಚಾಲಕರು ದುಬಾರಿ ಹಣ ವಸೂಲಿ ಮಾಡುವ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಓಲಾ ಟ್ಯಾಕ್ಸಿ ಚಾಲಕನೊಬ್ಬ 60 ಕಿಲೋ ಮೀಟರ್ ಪ್ರಯಾಣಕ್ಕೆ 5,662 ರುಪಾಯಿ ಬಿಲ್ ನೀಡಿರುವ ಘಟನೆ ಸದ್ಯ ವೈರಲ್ ಆಗಿದೆ. ಗ್ರಾಹಕರ ಗುಂಪೊಂದರ ಪ್ರಕಾರ, ಬುಕಿಂಗ್ ಮಾಡುವಾಗ ತೋರಿಸಲಾದ ದರ 1,285 ರುಪಾಯಿ ಆಗಿತ್ತು. ಆದಾಗ್ಯೂ, ಅಂತಿಮ ಮೊತ್ತವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಅನುಭವ (Viral News) ಹಂಚಿಕೊಂಡಿದ್ದಾರೆ.
ಪ್ರಯಾಣಿಕರು ಕ್ಯಾಬ್ ಅನ್ನು ಬೆಳಗ್ಗೆ 10 ಗಂಟೆಗೆ 60 ಕಿ.ಮೀ. ದೂರಕ್ಕೆ ಬುಕ್ ಮಾಡಿದ್ದರು. ದೆಹಲಿಯ ಮಹಿಪಾಲಪುರದ ಹೊಟೇಲ್ ಒಂದರಲ್ಲಿನ ಕಾರ್ಯಕ್ರಮ ಮುಗಿಸಿ ನೇರವಾಗಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ನಿರ್ಧರಿಸಿದ್ದರು. ಟ್ಯಾಕ್ಸಿ ಬುಕಿಂಗ್ ಸಮಯದಲ್ಲಿ ಆರಂಭಿಕ ದರ 1,285 ರುಪಾಯಿ ಎಂದಿತ್ತು. ಅಪರಾಹ್ನ 3:45ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿದಾಗ, ಚಾಲಕ 5,662 ರುಪಾಯಿ ಪಾವತಿಸುವಂತೆ ಕೇಳಿದ್ದಾನೆ. ಬುಕಿಂಗ್ ದರಕ್ಕಿಂತ 4 ಪಟ್ಟು ಹೆಚ್ಚು ಬಿಲ್ ನೋಡಿ ಪ್ರಯಾಣಿಕರು ಆಘಾತಗೊಂಡಿದ್ದಾರೆ.
4 ಪಟ್ಟು ಹೆಚ್ಚು ಬಿಲ್ ಮಾಡಿದ ಓಲಾ ಚಾಲಕ:
ಪ್ರಯಾಣಿಕರ ಪ್ರಕಾರ ಅವರು ಹೊಟೋಲ್ ಒಂದರಲ್ಲಿ ಕಾರ್ಯಕ್ರಮ ವೀಕ್ಷಿಸುತ್ತ ಇದ್ದಾಗ ಚಾಲಕ ಬಿಲ್‌ನಲ್ಲಿ ಹೆಚ್ಚುವರಿಯಾಗಿ 240.5 ಕಿಲೋ ಮೀಟರ್ ಅಂತ ಸೇರಿಸಿದ್ದಾನೆ ಅಥವಾ ಪ್ರಯಾಣಿಕರಿಲ್ಲದ ಸಮಯದಲ್ಲಿ ಚಾಲಕ ವಾಹನವನ್ನು ಬೇರೆಡೆ ಚಲಾಯಿಸಿರುವ ಸಾಧ್ಯತೆ ಇದೆ ಎಂದು ದೂರಿದ್ದಾರೆ. ಈ ಘಟನೆ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರು ನಿಜವಾಗಿಯೂ ಎಲ್ಲಿಗೆ ಪ್ರಯಾಣಿಸಿದ್ದಾರೆ ಎಂಬುದರ ಕುರಿತು ಪುರಾವೆಗಳನ್ನು ಸಂಗ್ರಹಿಸಲು ನೆಟ್ಟಿಗರು ಸಲಹೆ ನೀಡಿದ್ದಾರೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ
ಪ್ರಯಾಣಿಕರು ಓಲಾ ಸಹಾಯ ವಿಭಾಗಗನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೆಲವರು ಓಲಾ ಸಂಸ್ಥೆಯನ್ನು ಟ್ಯಾಗ್ ಮಾಡಿ ದೂರು ನೀಡಲು ಸಲಹೆ ನೀಡಿದ್ದಾರೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳು ಕೆಲ ವೇಳೆ ದುಬಾರಿ ದರ ವಿಧಿಸುತ್ತಿದ್ದು, ಅದರಲ್ಲೂ ಪೀಕ್ ಅವಧಿಯಲ್ಲಿ ಟ್ಯಾಕ್ಸಿ ದರ ದುಪ್ಪಟ್ಟಾಗುತ್ತಿದೆ.