Viral Video: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್ ಟ್ರೀಟ್‌ಮೆಂಟ್; ವೈರಲ್ ಆಗ್ತಿದೆ ವಿಡಿಯೋ
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವಾರ್ಡ್‌ನಲ್ಲಿ ರೋಗಿಗಳಿಗಾಗಿ ಇರುವ ಬೆಡ್‌ಗಳ ಮೇಲೆಯೇ ನಾಯಿಗಳು ಮಲಗಿರುವ ದೃಶ್ಯಗಳಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ನಡುವೆ ಈ ದುಸ್ಥಿತಿ ಕಂಡುಬಂದಿದ್ದು, ಆಸ್ಪತ್ರೆಯ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯ ಕಂಡು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಬೀದಿ ನಾಯಿಗಳು -
ಲಖನೌ: ಉತ್ತರ ಪ್ರದೇಶ (Uttar Pradesh)ದ ಗೊಂಡಾ(Gonda) ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಬೆಡ್‌ಗಳ ಮೇಲೆ ನಾಯಿಗಳು(dogs) ಮಲಗಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದೆ. ವಾರ್ಡ್‌ನೊಳಗಿನ ಬೆಡ್ ಮೇಲೆ ಮೂರು ನಾಯಿಗಳು, ಮತ್ತೊಂದು ನಾಯಿ ರೋಗಿಯ ಕಾಲಿನ ಬಳಿಯೇ ಮಲಗಿರುವುದು ಹಾಗೂ ಅದೇ ವಾರ್ಡ್‌ನಲ್ಲಿ ಇನ್ನೂ ಹಲವಾರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ವೀಡಿಯೊವನ್ನು ಯಾರು ರೆಕಾರ್ಡ್ ಮಾಡಿದ್ದಾರೆ ಎಂಬುದು ತಿಳಿದಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಇದು ವ್ಯಾಪಕವಾಗಿ ಹರಿದಾಡಿದ್ದು, ಆಸ್ಪತ್ರೆಯಲ್ಲಿನ ಸ್ವಚ್ಛತೆ ಮತ್ತು ರೋಗಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ವೀಡಿಯೊ ಆಸ್ಪತ್ರೆಯ ಆರ್ಥೋ ವಾರ್ಡ್‌ನದ್ದಾಗಿದೆ ಎಂದು ವರದಿಯಾಗಿದೆ. ಈ ಆಸ್ಪತ್ರೆಯು ಗೊಂಡಾ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದೆ ಎನ್ನಲಾಗಿದ್ದು, ಕಳೆದ ವಾರವೂ ಇದೇ ಆಸ್ಪತ್ರೆಯ ಒಂದು ವಾರ್ಡ್‌ನಲ್ಲಿ ಇಲಿಗಳು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ये यूपी के गोंडा का मेडिकल कॉलेज है.
— INC TV (@INC_Television) January 19, 2026
• कुछ दिनों पहले यहां मरीजों के वॉर्ड में चूहे घूम रहे थे
• अब यहां मरीजों के वॉर्ड में कुत्ते आराम फरमा रहे हैं
क्या BJP के नेता-मंत्री इस अस्पताल में अपना या अपने परिवार का इलाज कराएंगे? pic.twitter.com/LoKA9dtsmR
ಮಾಧ್ಯಮ ವರದಿಗಳ ಪ್ರಕಾರ, ಆಸ್ಪತ್ರೆಯ ಹಾಸಿಗೆಯ ಮೇಲೆ ನಾಯಿಗಳು ಮಲಗಿರುವ ಈ ವೀಡಿಯೊ ಹಾಗೂ ಆಕ್ಸಿಜನ್ ಪೈಪ್‌ಗಳ ಮೇಲೆ ಇಲಿಗಳು ಓಡಾಡುತ್ತಿರುವ ದೃಶ್ಯಗಳು ವೈರಲ್ ಆದ ಸಮಯದ್ದೇ ಎಂದು ತಿಳಿದುಬಂದಿದೆ. ಈ ಎರಡೂ ವೀಡಿಯೊಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ. ಆದರೆ, ಈ ದೃಶ್ಯಗಳು ಆಸ್ಪತ್ರೆಯ ಸಿಬ್ಬಂದಿಯ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಅಸಡ್ಡೆ ಮನೋಭಾವವನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೂ ಮುನ್ನ, ಆಸ್ಪತ್ರೆಯೊಳಗೆ ಇಲಿಗಳು ಓಡಾಡುತ್ತಿರುವ ವೀಡಿಯೊ ವೈರಲ್ ಆದ ಬಳಿಕ, ಉತ್ತರ ಪ್ರದೇಶ ವೈದ್ಯಕೀಯ ಶಿಕ್ಷಣ ಇಲಾಖೆಯ ತಂಡವು ಭಾನುವಾರ (ಜನವರಿ 18) ಗೊಂಡಾ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿತ್ತು.
Viral Video: ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್; ವೈರಲ್ ಆಗ್ತಿರೋ ವಿಡಿಯೋ ನೋಡಿ
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಸೂಚನೆಯಂತೆ ತಂಡ ಸ್ಥಳಕ್ಕೆ ಆಗಮಿಸಿ, ಮೆಡಿಕಲ್ ಕಾಲೇಜಿನ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತೆ, ರೋಗಿಗಳಿಗೆ ಲಭ್ಯವಿರುವ ಸೌಲಭ್ಯಗಳು ಹಾಗೂ ಒಟ್ಟಾರೆ ವ್ಯವಸ್ಥೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿತು ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಮೆಡಿಕಲ್ ಕಾಲೇಜಿನ ಸ್ಥಿತಿಗತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ತಂಡದ ನೇತೃತ್ವ ವಹಿಸಿದ್ದ ವೈದ್ಯಕೀಯ ಆರೈಕೆ ನಿರ್ದೇಶಕಿ ಡಾ. ಸಂದೀಪಾ ಶ್ರೀವಾಸ್ತವ ಅವರು, ಈ ಸಂಪೂರ್ಣ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿದೆ ಎಂದು ತಿಳಿಸಿದ್ದಾರೆ.