ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ವೇಳೆ ರಸ್ತೆಯಲ್ಲೇ ಕುಡಿದು ಗಲಾಟೆ: ವೈರಲ್‌ ಆಗ್ತಿದೆ ವಿಡಿಯೋ

Viral Video: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಅತ್ಯಂತ ಸಡಗರ ಮತ್ತು ದೇಶಪ್ರೇಮದಿಂದ ಈ ದಿನವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಾರ್ವಜನಿಕರು ಪರಸ್ವರ ಗಲಾಟೆ ಮಾಡಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಪಾಕಿಸ್ತಾನಿ ನಾಗರಿಕರು ರಸ್ತೆಗಳಲ್ಲಿ ಜಗಳವಾಡುತ್ತಾ, ಪರಸ್ಪರ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯ ಕಂಡು ಬಂದಿದೆ.

ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಡಿದು ರಂಪಾಟ ಮಾಡಿದ ಪಾಕಿಸ್ತಾನಿ ನಾಗರಿಕರು

ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಡಿದು ರಂಪಾಟ ಮಾಡಿದ ಪಾಕಿಸ್ತಾನಿ ನಾಗರಿಕರು -

Profile
Pushpa Kumari Aug 14, 2026 3:49 PM

ಪಾಕಿಸ್ತಾನ,ಆ.14: ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಜೋರಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಅತ್ಯಂತ ಸಡಗರ ಮತ್ತು ದೇಶಪ್ರೇಮದಿಂದ ಈ ದಿನವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಾರ್ವಜನಿಕರು ಪರಸ್ವರ ಗಲಾಟೆ ಮಾಡಿ ಕೊಂಡಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಪಾಕಿಸ್ತಾನಿ ನಾಗರಿಕರು ರಸ್ತೆಗಳಲ್ಲಿ ಜಗಳವಾಡುತ್ತಾ, ಪರಸ್ಪರ ಬಾಟಲಿಗಳನ್ನು ಎಸೆಯುತ್ತಿರುವ ದೃಶ್ಯ ಕಂಡು ಬಂದಿದೆ.

ಪಾಕಿಸ್ತಾನದ ಸ್ವಾತಂತ್ರ ದಿನಾಚರಣೆ ಸಮಯದಲ್ಲಿ ಜನನಿಬಿಡ ರಸ್ತೆಗಳಲ್ಲಿ ಪುರುಷರ ಗುಂಪು ಜಮಾಯಿಸಿದೆ. ಕೆಲವು ಪುರುಷರು ಬಾಟಲಿಗಳನ್ನು ಎಸೆಯುವುದು, ದೈಹಿಕವಾಗಿ ವಾಗ್ವಾದ ನಡೆಸಿ ಗದ್ದಲ ಸೃಷ್ಟಿಸಿದ್ದಾರೆ. ಈ ದೃಶ್ಯಾವಳಿಯೂ ನೆಟಿಜನ್‌ಗಳಿಂದ ಟೀಕೆಗೆ ಗುರಿಯಾಗಿದೆ. ಹಲವರು ಮಂದಿ ರಾಷ್ಟ್ರೀಯ ಆಚರಣೆಯ ದಿನದಂದು ಪ್ರದರ್ಶಿಸಲಾದ ನಾಗರಿಕ ಪ್ರಜ್ಞೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ..

ವಿಡಿಯೋ ನೋಡಿ:

ರಾಷ್ಟ್ರೀಯ ಆಚರಣೆಯ ದಿನದಂದು ಈ ರೀತಿ ವರ್ತನೆ ತೋರಿರುವ ಬಗ್ಗೆ ಹಲವಾರು ಮಂದಿ ಕಿಡಿಕಾರಿದ್ದಾರೆ.ರಸ್ತೆಗಳಲ್ಲಿ ಗುಂಪು ಗುಂಪಾಗಿ ಪುರುಷರು ಅವ್ಯವಸ್ಥೆ ಸೃಷ್ಟಿಸಿದ್ದಾರೆ. ಆದರೆ ಮಹಿಳೆಯರು ಈ ಸಂದರ್ಭದಲ್ಲಿ ಭಾಗಿಯಾಗದೆ ಇರುವುದಕ್ಕೆ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದಾರೆ

Viral Video: ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಹಕರು

ಒಬ್ಬ ಬಳಕೆದಾರರು ಬರೆದಿದ್ದಾರೆ "ಸ್ವಾತಂತ್ರ್ಯ ದಿನದಂದು ಒಬ್ಬ ಮಹಿಳೆಯೂ ಹೊರಗೆ ಆನಂದಿಸದಿರುವುದನ್ನು ನೋಡುವುದು ತುಂಬಾ ದುಃಖಕರವಾಗಿದೆ. ಪುರುಷರು ಮಾತ್ರ ಸ್ವಾತಂತ್ರ್ಯ ದಿನವನ್ನು ಆನಂದಿಸಬಹುದು, ಪುರುಷರು ಮಾತ್ರ ಹೊರಗೆ ಬರಬಹುದು ಆದರೆ ಮಹಿಳೆಯರಿಗೆ ಏಕೆ ಅಲ್ಲ? ಪುರುಷರಿಗೆ ಬೀದಿಗಳು ಮಹಿಳೆಯರಿಗೆ ಕೇವಲ ಬಾಲ್ಕನಿಗಳು." ಎಂದು ಟೀಕೆ ಮಾಡಿದ್ದಾರೆ.

ವೈರಲ್ ವಿಡಿಯೋಗಳಿಗೆ ಸ್ವತಃ ಪಾಕಿಸ್ತಾನಿ ನೆಟ್ಟಿಗರೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಸ್ವಾತಂತ್ರ್ಯದ ಹಬ್ಬ ಎನ್ನುವ ಬದಲು ಅಜ್ಞಾನದ ಹಬ್ಬ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಬಡತನ ಸಮಸ್ಯೆ ಅಲ್ಲ, ಅಜ್ಞಾನಿಗಳಂತೆ ವರ್ತಿಸುವುದು ಬಹುದೊಡ್ಡ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.