ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಿಯಮಿತ ತಪಾಸಣೆಗಾಗಿ ಬೆಂಗಳೂರಿನಲ್ಲಿ ಮಹಿಳಾ ಬೈಕರ್‌ನನ್ನು ನಿಲ್ಲಿಸಿದ ಪೊಲೀಸ್; ಮುಂದೇನಾಯ್ತು, ಇಲ್ಲಿದೆ ವಿಡಿಯೊ

Police Stop Woman Biker: ಇನ್‌ಸ್ಟಾಗ್ರಾಮ್‌ನಲ್ಲಿ ರಿತು ಚತುರ್ವೇದಿ ಎಂಬುವವರು ಹಂಚಿಕೊಂಡಿರುವ ವಿಡಿಯೊದಲ್ಲಿ ಮಹಿಳಾ ಬೈಕರ್ ಒಬ್ಬರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾಗ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ನಿಲ್ಲಿಸುವಂತೆ ಹೇಳಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಭಾರಿ ವೈರಲ್ ಆಗಿದೆ.

ಮಹಿಳಾ ಬೈಕರ್‌ನನ್ನು ನಿಲ್ಲಿಸಿದ ಪೊಲೀಸ್; ಮುಂದೇನಾಯ್ತು

ಮೆಟಾ ಎಐನಿಂದ ಈ ಚಿತ್ರವನ್ನು ಬಳಸಿಕೊಳ್ಳಲಾಗಿದೆ. -

Priyanka P
Priyanka P Feb 15, 2026 2:19 PM

ಬೆಂಗಳೂರು, ಫೆ. 15: ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಟ್ರಾಫಿಕ್‌ಗೆ ಕುಖ್ಯಾತಿ. ಹೊಸ ಸಮೀಕ್ಷೆಯ ಪ್ರಕಾರ, ಭಾರತದ ಐಟಿ ಕೇಂದ್ರವು ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಮಹಿಳಾ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾಗ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು (Traffic police) ನಿಲ್ಲಿಸುವಂತೆ ಹೇಳಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (viral video) ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ರಿತು ಚತುರ್ವೇದಿ ಎಂಬುವವರು ಹಂಚಿಕೊಂಡಿರುವ ವಿಡಿಯೊದಲ್ಲಿ, ಮಹಿಳಾ ಬೈಕರ್ ಜನನಿಬಿಡ ರಸ್ತೆಯಲ್ಲಿ ಸವಾರಿ ಮಾಡುತ್ತಿರುವುದನ್ನು ತೋರಿಸಲಾಗಿದೆ. ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿದ್ದೇನೆ, ನಿಧಾನವಾಗಿ ಸವಾರಿ ಮಾಡುತ್ತಿದ್ದೇನೆ ಎಂದು ವಿಡಿಯೊದಲ್ಲಿ ಹೇಳದ್ದಾರೆ.

ವಿಡಿಯೊ ವೀಕ್ಷಿಸಿ:

ನಂತರ, ಒಬ್ಬ ಸಂಚಾರಿ ಪೊಲೀಸ್ ಅಧಿಕಾರಿ ಆಕೆಯನ್ನು ತಡೆದು ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸುವಂತೆ ಹೇಳಿದರು. ಪೊಲೀಸರು ನನಗೆ ನಿಲ್ಲಿಸಲು ಸಿಗ್ನಲ್ ನೀಡಿದರು ಎಂದು ಅವರು ಬರೆದಿದ್ದಾರೆ. ನಂತರ ಯುವತಿಗೆ ಹೆಲ್ಮೆಟ್ ತೆಗೆಯುವಂತೆ ಕೇಳಿದರು. ಈ ವೇಳೆ ಆಕೆಯ ಮುಖವನ್ನು ನೋಡಿದ ನಂತರ ಅಧಿಕಾರಿಯು, ಮಹಿಳೆಯಾ ಎಂದು ಹೇಳಿ, ಅಲ್ಲಿಂದ ಹೊರಡುವಂತೆ ಅನುಮತಿ ನೀಡಿದರು.

ಸತ್ತಿದ್ದಾನೆಂದು ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ; ಮರುದಿನವೇ ಜೀವಂತವಾಗಿ ಮರಳಿ ಬಂದ ವ್ಯಕ್ತಿ

ವಿಡಿಯೊದ ಕೊನೆಯಲ್ಲಿ, ಜನರು ಈ ರೀತಿಯ ಮಹಿಳಾ ರೈಡರ್‌ಗಳನ್ನು ಬೆಂಬಲಿಸಿದಾಗ, ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ, ಭಾರತದಲ್ಲಿ ಪುರುಷ ಸಂಚಾರ ಅಧಿಕಾರಿಯೊಬ್ಬರು ಸಂಚಾರ ಉಲ್ಲಂಘನೆ ಅಥವಾ ಮದ್ಯ ಪರೀಕ್ಷೆ ಸೇರಿದಂತೆ ನಿಯಮಿತ ತಪಾಸಣೆಗಾಗಿ ಮಹಿಳಾ ಸವಾರರನ್ನು ನಿಲ್ಲಿಸಬಹುದು. ಆದರೆ ಇಂತಹ ಸಮಯದಲ್ಲಿ ಮಹಿಳಾ ಪೊಲೀಸ್ ಇರಬೇಕಾದುದು ಅವಶ್ಯಕ ಎಂದು ಅವರು ಬರೆದಿದ್ದಾರೆ.

ಮಹಿಳಾ ಪೊಲೀಸರ ಅನುಪಸ್ಥಿತಿಯಲ್ಲಿ ಮಹಿಳಾ ವಾಹನ ಚಾಲಕರನ್ನು ತಪಾಸಣೆಗೆ ಒಳಪಡಿಸಲು ಪೊಲೀಸರಿಗೆ ಹೇಗೆ ಅವಕಾಶವಿಲ್ಲ ಎಂಬುದನ್ನು ವಿಡಿಯೊ ತೋರಿಸುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೊ 1.7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. 72,000ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಷಯದ ಬಗ್ಗೆ ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾನೂನಿನ ಪ್ರಕಾರ, ಸಂಜೆ 6 ಗಂಟೆಯ ನಂತರ ಪೊಲೀಸರು ಮಹಿಳಾ ಸವಾರರನ್ನು ನಿಲ್ಲಿಸುವಂತಿಲ್ಲ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ.

ಮಹಿಳಾ ಪೊಲೀಸ್ ಇಲ್ಲದೆ ನಿಮ್ಮನ್ನು ಎಳೆದುಕೊಂಡು ಹೋಗಲು ಅವರಿಗೆ ಕಾನೂನುಬದ್ಧವಾಗಿ ಅನುಮತಿ ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರು ಕುಡಿದು ವಾಹನ ಚಲಾಯಿಸುವುದಿಲ್ಲ ಎಂಬುದು ಆ ಪೊಲೀಸ್ ಅಧಿಕಾರಿಗೆ ಖಚಿತವಾಗಿತ್ತು ಎಂದು ಅವರು ಹೇಳಿದರು.