ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಬಾಡಿಗೆಗೆ ಗೆಳೆಯನನ್ನು ಪಡೆಯಿರಿ...ʼʼ: ಆಮಿಷಕ್ಕೆ ಬಲಿಯಾಗದಂತೆ, ಹೊಸ ಸ್ಕ್ಯಾಮ್ ಬಗ್ಗೆ ಎಚ್ಚರಿಸಿದ ಹೈದರಾಬಾದ್ ಪೊಲೀಸರು

ಬಾಡಿಗೆಗೆ ಗೆಳೆಯ ದೊರೆಯುತ್ತಾನೆ ಎನ್ನುವ ಪೋಸ್ಟರ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇದನ್ನು ನಂಬಿ ಮೋಸ ಹೋಗದಿರಿ ಎಂದು ವಿಶೇಷವಾಗಿ ಮಹಿಳೆಯರಿಗೆ ಹೈದರಾಬಾದ್ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. ವಂಚಕರು ಹಣ ಮತ್ತು ವಯಕ್ತಿಕ ಮಾಹಿತಿಗಳನ್ನು ಕದಿಯಲು ಮಾಡಿರುವ ವಂಚನೆಯ ಜಾಲ ಇದಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

'ಗೆಳೆಯ ಬಾಡಿಗೆಗೆ' ವಂಚನೆ ಬಗ್ಗೆ ಎಚ್ಚರಿಕೆ

ಸಂಗ್ರಹ ಚಿತ್ರ -

ಹೈದರಾಬಾದ್: ಒಂದು ಗಂಟೆ, ಮೂರು ನಾಲ್ಕು ಗಂಟೆ, ಅರ್ಧ ದಿನ, ಒಂದು ದಿನ, ಕಾಫಿ, ಮದುವೆ, ಪಾರ್ಟಿ.. ಹೀಗೆ ಎಲ್ಲೆಂದರಲ್ಲಿ ಒಬ್ಬರೇ ಹೋಗುವುದು ಬೇಸರವೇ? ಹಾಗಿದ್ದರೆ ಬಾಡಿಗೆ ಗೆಳೆಯನನ್ನು ಕರೆದುಕೊಂಡು ಹೋಗಿ ಎನ್ನುವ ಪೋಸ್ಟರ್ (Online scam) ಗಳು ಸಾಮಾಜಿಕ ಮಾಧ್ಯಮಗಳಲ್ಲಿ (Viral post) ಹರಿದಾಡುತ್ತಿದ್ದು, ಇದನ್ನು ನಂಬಿ ಮೋಸ ಹೋಗಬೇಡಿ ಎಂದು ಹೈದರಾಬಾದ್ ಪೊಲೀಸರು (hyderabad police) ಎಚ್ಚರಿಕೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ವಂಚಕರು "Rent A Boyfriend" ಪೋಸ್ಟರ್ ಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಮಹಿಳೆಯರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಸೂಚಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ "ರೆಂಟ್ ಬಾಯ್‌ಫ್ರೆಂಡ್ - ನಿಮ್ಮ ವೈಯಕ್ತಿಕ ಒಡನಾಡಿ" ಎಂಬ ಶೀರ್ಷಿಕೆಯಡಿಯಲ್ಲಿ ಜಾಹೀರಾತುಗಳು ಪ್ರಸಾರವಾಗುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆ ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

ಕಾವೇರಿ ನೀರು ಹಂಚಿಕೆ ವಿವಾದ; ರಾಜ್ಯಕ್ಕೆ ಭಾರಿ ಹಿನ್ನಡೆ: ತಮಿಳುನಾಡು ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ

ಈ ಕುರಿತು ಸಾಮಾಜಿಕ ಮಾಧ್ಯಮಗಳ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ "ಬಾಯ್‌ಫ್ರೆಂಡ್ಸ್ ಫಾರ್ ರೆಂಟ್ " ಹಗರಣದ ಬಗ್ಗೆ ಎಚ್ಚರಿಕೆ ವಹಿಸಿ. ಸೈಬರ್ ವಂಚಕರು ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಮಾಡಿರುವ ತಂತ್ರ ಇದಾಗಿದೆ. ಇದರ ಬಗ್ಗೆ ಆಸಕ್ತರಾಗಬೇಡಿ ಎಂದು ತಿಳಿಸಿದ್ದಾರೆ.

ಹೈದರಾಬಾದ್ ನಗರದ ಪೊಲೀಸ್ ಆಯುಕ್ತರಾದ ಐಪಿಎಸ್ ವಿಸಿ ಸಜ್ಜನರ್ ಅವರು ಈ ಹಿಂದೆ ನಕಲಿ ರಿಯಾಯಿತಿಗಳೊಂದಿಗೆ ಸ್ನೇಹಿತನನ್ನು ನೀಡುತ್ತೇವೆ ಎನ್ನುವ ಭರವಸೆ ನೀಡುವ ಪೋಸ್ಟರ್‌ಗಳು ಸೈಬರ್ ವಂಚನೆಯದ್ದು ಎಂದು ತಿಳಿಸಿದ್ದರು.



ವಂಚಕರು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂತಹ ಪೋಸ್ಟ್ ಗಳನ್ನೂ ಹಂಚಿಕೊಂಡು ಕಾಫಿ ಡೇಟ್, ಮೂವಿ, ಶಾಪಿಂಗ್ ಸೇರಿದಂತೆ ವಿವಿಧ ಸೇವಾ ಪ್ಯಾಕೇಜ್‌ಗಳ ಜೊತೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾದ ಅಥವಾ ಇಂಟರ್ನೆಟ್ ಪ್ರೊಫೈಲ್‌ಗಳಿಂದ ಕದ್ದ ಆಕರ್ಷಕ ಪುರುಷರ ಫೋಟೋಗಳನ್ನು ಪ್ರಸಾರ ಮಾಡುತ್ತಿದ್ದಾರೆ.

ಇದನ್ನು ನೋಡಿ ಯಾರಾದರೂ ಸ್ಪಂದಿಸಿದರೆ ಮುಂಗಡ ಪಾವತಿಗಳನ್ನು ಕೇಳುತ್ತಾರೆ. ಬಳಿಕ ಕ್ಯೂಆರ್ ಕೋಡ್‌ಗಳು ಮತ್ತು ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ನೋಂದಣಿ ಶುಲ್ಕಗಳು, ಸುರಕ್ಷತಾ ಠೇವಣಿಗಳು ಅಥವಾ ಮುಂಗಡ ಬುಕಿಂಗ್ ವೆಚ್ಚಗಳಿಗೆ ಹಣವನ್ನು ಕೇಳುತ್ತಾರೆ. ಹಣ ವರ್ಗಾವಣೆ ಮಾಡಿದ ತಕ್ಷಣ ವಂಚಕರು ಎಲ್ಲಾ ಸಂವಹನವನ್ನು ನಿರ್ಬಂಧಿಸುತ್ತಾರೆ.

ಈ ಬಗ್ಗೆ ಹೆಣ್ಣು ಮಕ್ಕಳು ಮತ್ತು ಅವರ ಪೋಷಕರು ಎಚ್ಚರಿಕೆಯಿಂದ ಇರಬೇಕು. ಮಕ್ಕಳು ಸಾಮಾಜಿಕ ಮಾಧ್ಯಮದಲ್ಲಿ ಯಾವ ರೀತಿಯ ಪೋಸ್ಟ್‌ಗಳನ್ನು ನೋಡುತ್ತಾರೆ? ಯಾರೊಂದಿಗೆ ಮಾತನಾಡುತ್ತಿದ್ದೀರೆ? ಹೊರಗೆ ಹೋದಾಗ ಯಾರನ್ನು ಭೇಟಿಯಾಗುತ್ತೀರಿ? ಈ ಎಲ್ಲಾ ವಿಷಯಗಳ ಬಗ್ಗೆ ಪೋಷಕರು ನಿರಂತರವಾಗಿ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪರಿಚಯವಾದ ವ್ಯಕ್ತಿಗಳೊಂದಿಗೆ ಸಂಪರ್ಕ ವಿವರಗಳು, ಫೋಟೋ ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು, ವೈಯಕ್ತಿಕವಾಗಿ ಭೇಟಿಯಾಗುವುದು ಸುರಕ್ಷತೆಯ ಅಪಾಯಗಳನ್ನು ತಂದೊಡ್ಡಬಹುದು ಎಂದು ಅವರು ತಿಳಿಸಿದ್ದಾರೆ.

ಬೆಳಗ್ಗಿನ ಉಪಾಹಾರ ಸೇವಿಸಿದ ನಂತರವೂ ಹಸಿವಾಗುತ್ತಿದೆಯೇ? ಕಾರಣವೇನು?

ಯಾವುದೇ ರೀತಿಯ ಅನುಮಾನಾಸ್ಪದ ವಿಷಯಗಳು ಕಂಡು ಬಂದರೆ ಅಥವಾ ವಂಚನೆಗೆ ಬಲಿಯಾದರೆ ತಕ್ಷಣ 1930 ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ಅಥವಾ ಅಧಿಕೃತ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ ನಲ್ಲಿ ದೂರು ದಾಖಲಿಸುವಂತೆ ಅವರು ತಿಳಿಸಿದ್ದಾರೆ.