ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಧ್ಯ ಪ್ರದೇಶದಲ್ಲಿ ಭೀಕರ ದುರಂತ: ನೀರಿನಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 11 ಸದಸ್ಯರು; 8 ಮೃತದೇಹ ಪತ್ತೆ

Family Swept Away: ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಚರಂಡಿ ದಾಟಲು ಪ್ರಯತ್ನಿಸುತ್ತಿದ್ದ ವೇಳೆ ವ್ಯಾನ್ ಕೊಚ್ಚಿ ಹೋಗಿದ್ದು, ಒಂದೇ ಕುಟುಂಬದ ಎಂಟು ಸದಸ್ಯರು ಮೃತಪಟ್ಟ ದುರ್ಘಟನೆ ಮಧ್ಯ ಪ್ರದೇಶದ ಪದಾನಾ ಪಟ್ಟಣದಲ್ಲಿ ಸಂಭವಿಸಿದೆ. ವಾಹನವು ಪದಾನ ಬೈಪಾಸ್ ತಲುಪುತ್ತಿದ್ದಂತೆ, ಚರಂಡಿ ನೀರು ರಸ್ತೆ ಮೇಲೆಯೇ ಹರಿದಿತ್ತು.

ನೀರಿನಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 11 ಸದಸ್ಯರು

ಸಾಂದರ್ಭಿಕ ಚಿತ್ರ -

Priyanka P
Priyanka P Aug 10, 2026 5:57 PM

ಭೋಪಾಲ್‌, ಆ. 10: ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಚರಂಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ವೇಳೆ ವ್ಯಾನ್ ಕೊಚ್ಚಿ ಹೋಗಿದ್ದು, ಒಂದೇ ಕುಟುಂಬದ ಎಂಟು ಸದಸ್ಯರು ಮೃತಪಟ್ಟ ದುರ್ಘಟನೆ ಮಧ್ಯಪ್ರದೇಶದ (Madhya Pradesh) ಪದಾನಾ ಪಟ್ಟಣದಲ್ಲಿ ಸಂಭವಿಸಿದೆ (Family Swept Away). ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಸಲುವಾಗಿ ಕುಟುಂಬವು ದೇವಾಸ್‌ನಿಂದ ಸಾರಂಗಪುರದ ಕಡ್ನವಾಡ ಗ್ರಾಮಕ್ಕೆ ಪ್ರಯಾಣಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಾನ್‌ ಪದಾನ ಬೈಪಾಸ್ ತಲುಪುತ್ತಿದ್ದಂತೆ, ಚರಂಡಿ ನೀರು ರಸ್ತೆ ಮೇಲೆಯೇ ಹರಿದಿತ್ತು. ಸ್ಥಳೀಯರು ಪದೇ ಪದೆ ಎಚ್ಚರಿಕೆ ನೀಡಿದ್ದರೂ, ಚಾಲಕ ದಾಟಲು ಮುಂದಾಗಿದ್ದಾನೆ. ಈ ವೇಳೆ ಪ್ರವಾಹದ ರಭಸಕ್ಕೆ ವ್ಯಾನ್ ಕೊಚ್ಚಿಕೊಂಡು ಹೋಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅರವಿಂದ್ ಸಿಂಗ್ ಹೇಳಿದರು.

ರಕ್ಷಣಾ ಕಾರ್ಯಕರ್ತರು ಮತ್ತು ನಿವಾಸಿಗಳು ಹಗ್ಗಗಳು ಮತ್ತು ಕ್ರೇನ್‌ಗಳನ್ನು ಬಳಸಿ ವ್ಯಾನ್ ಹೊರ ತೆಗೆಯಲು ಪ್ರಯತ್ನಿಸಿದರು. ಆದರೆ ಒಳಗೆ ಯಾರೂ ಪ್ರಯಾಣಿಕರು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ʼʼನೀರಿನ ಮಟ್ಟ ತುಂಬಾ ಹೆಚ್ಚಾಗಿದ್ದರಿಂದ ಚಾಲಕನಿಗೆ ರಸ್ತೆ ಮತ್ತು ಚರಂಡಿಯ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಮಹೇಂದ್ರ ಪರ್ಮಾರ್ʼʼ ಹೇಳಿದ್ದಾರೆ. ʼʼನೀರು ಕಡಿಮೆಯಾಗುವವರೆಗೆ ಕಾಯುವಂತೆ ನಾವು ಚಾಲಕನನ್ನು ಒತ್ತಾಯಿಸಿದ್ದೆವು. ಆದರೆ ಅವರು ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರುʼʼ ಎಂದು ಅವರು ತಿಳಿಸಿದ್ದಾರೆ.

ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಪುತ್ರ ಅಮೀನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಅಪಘಾತದ ಕಾರಣವನ್ನು ಕಂಡುಹಿಡಿಯಲು ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರೋಹಿತ್ ಬಾಮ್ಹೋರ್ ಹೇಳಿದ್ದಾರೆ. “ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಯಿಂದಾಗಿ ರಸ್ತೆ ಮುಳುಗಿ ಹೋಗಿತ್ತು. ಆದರೆ ಎಚ್ಚರಿಕೆಗಳ ಹೊರತಾಗಿಯೂ, ಚಾಲಕ ವಾಹನ ಚಲಾಯಿಸಿದ್ದರಿಂದ ದುರಂತ ಸಂಭವಿಸಿದೆ” ಎಂದು ಅವರು ವಿವರಿಸಿದ್ದಾರೆ.