ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಿ : 3BHK ಫ್ಲ್ಯಾಟ್‌ಗೆ 1.1 ಲಕ್ಷ ಮೊತ್ತ!
Viral News: ಬೆಂಗಳೂರಿನಲ್ಲಿ ಬಾಡಿಗೆ ದರಗಳು ದುಪ್ಪಟ್ಟು ಆಗಿವೆ. ಇದೀಗ ಐಟಿ ಉದ್ಯೋಗಿಯೊಬ್ಬರು ಇಂದಿರಾನಗರ ಮತ್ತು ಡೊಮ್ಲೂರ್ ಬಳಿಯ ಪ್ರತಿಷ್ಠಿತ ಎಂಬಸಿ ಗಾಲ್ಫ್ ಲಿಂಕ್ಸ್ (EGL) ಬಿಸಿನೆಸ್ ಪಾರ್ಕ್ ಹತ್ತಿರ ಇರುವ 3BHK ಫ್ಲ್ಯಾಟ್ ಒಂದಕ್ಕೆ ಬರೋಬ್ಬರಿ 1.1 ಲಕ್ಷ ಮಾಸಿಕ ಬಾಡಿಗೆ ಪಾವತಿ ಮಾಡುತ್ತಿರುವ ವಿಚಾರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...
ಬೆಂಗಳೂರಿನ ಫ್ಲಾಟ್ ಗೆ 1.1 ಲಕ್ಷ ಬಾಡಿಗೆ -
ಬೆಂಗಳೂರು,ಮೇ 28: ನಗರ ಪ್ರದೇಶದಲ್ಲಿ ಇಂದು ಬದುಕು ಕಟ್ಟಿಕೊಳ್ಳುವುದು ಕನಸಿನ ಮಾತು.. ಯಾಕಂದ್ರೆ ಇಂದು ಬಾಡಿಗೆದರ, ಜೀವನ ವೆಚ್ಚಗಳು ದುಬಾರಿಯಾಗಿದ್ದು ಜನ ಸಾಮಾನ್ಯರು ಬದುಕುವುದು ಕಷ್ಟ ಎಂದೇ ಹೇಳಬಹುದು. ಅದರಲ್ಲೂ ಬೆಂಗಳೂರಿನಲ್ಲಿ ಬಾಡಿಗೆ ದರಗಳು ದುಪ್ಪಟ್ಟು ಆಗಿವೆ. ಇದೀಗ ಐಟಿ ಉದ್ಯೋಗಿಯೊಬ್ಬರು ಇಂದಿರಾನಗರ ಮತ್ತು ಡೊಮ್ಲೂರ್ ಬಳಿಯ ಪ್ರತಿಷ್ಠಿತ ಎಂಬಸಿ ಗಾಲ್ಫ್ ಲಿಂಕ್ಸ್ (EGL) ಬಿಸಿನೆಸ್ ಪಾರ್ಕ್ ಹತ್ತಿರ ಇರುವ 3BHK ಫ್ಲ್ಯಾಟ್ ಒಂದಕ್ಕೆ ಬರೋಬ್ಬರಿ 1.1 ಲಕ್ಷ ಮಾಸಿಕ ಬಾಡಿಗೆ ಪಾವತಿ ಮಾಡುತ್ತಿರುವ ವಿಚಾರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬಾಡಿಗೆ ದರವನ್ನು ದುಪ್ಪಟ್ಟು ಪ್ರಮಾಣದದಲ್ಲಿ ವಸೂಲಿ ಮಾಡು ತ್ತಿದ್ದಾರೆ. ಇದೀಗ ಐಟಿ ಉದ್ಯೋಗಿಯೊಬ್ಬರ ಸ್ಕ್ರೀನ್‌ಶಾಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.ಅಪಾರ್ಟ್ಮೆಂಟ್ ಸುಮಾರು 1,800 ಚದರ ಅಡಿಗಳಷ್ಟು ಅಳತೆ ಹೊಂದಿದ್ದು ಖಾಸಗಿ ಟೆರೇಸ್, ಬಾಲ್ಕನಿ, ಪೂಜಾ ಕೊಠಡಿ, ಮಾಡ್ಯುಲರ್ ಅಡುಗೆಮನೆ ಮತ್ತು ಲಿವಿಂಗ್ ರೂಮಿ ಇತ್ಯಾದಿ ವೈಶಿಷ್ಟ್ಯಗಳು ಸೇರಿವೆ.
3bhk on rent for 1.1L in Bangalore??? That's actually someone's monthly salary🙏 pic.twitter.com/yycK8Yeuzw
— Anshika Aggarwal (@kipupwidanshika) May 26, 2026
ಅಪಾರ್ಟ್‌ಮೆಂಟ್ ಹತ್ತಿರವು ಈಜುಕೊಳ, ಜಿಮ್, ಟೆನ್ನಿಸ್ ಕೋರ್ಟ್, ಸ್ಕ್ವಾಷ್ ಕೋರ್ಟ್, ಸ್ಕೇಟಿಂಗ್ ರಿಂಕ್, ಭೂದೃಶ್ಯ ಉದ್ಯಾನಗಳು ಮತ್ತು ಸಮುದಾಯ ಭವನದಂತಹ ಸೌಲಭ್ಯವಗಳನ್ನು ಸಹ ಒಳಗೊಂಡಿದೆ. ಆದರೆ ಇದರ ಮಾಸಿಕ ಬಾಡಿಗೆ ಮೊತ್ತ 1.1 ಲಕ್ಷ, ಮಾಸಿಕ ನಿರ್ವಹಣಾ ವೆಚ್ಚ 6,000, ಆಗಿದ್ದು ಮುಂಗಡ ಹಣ ಪಾವತಿ 4 ಲಕ್ಷವಾಗಿದೆ.
Viral Video: ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಬೆಂಗಳೂರಿನಲ್ಲಿ 3BHK ಮನೆಗೆ 1.1 ಲಕ್ಷ ರೂಪಾಯಿ ಬಾಡಿಗೆಯೇ? ಇದು ಒಬ್ಬ ವ್ಯಕ್ತಿಯ ಒಂದು ವರ್ಷದ ಸಂಬಳ!" ಎಂದು ಬಳಕೆದಾರರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಬ್ಬರು ಬೆಂಗಳೂರಿನಲ್ಲಿ ಬಾಡಿಗೆಗಳು ಅಸಂಬದ್ಧವಾಗಿವೆ. ಇದನ್ನು ಪಾವತಿಸುವ ಜನರಿಗೆ ಹುಚ್ಚು ಎಂದಿದ್ದಾರೆ. ಇನ್ನೊಬ್ಬರು ಮುಂಬೈನಲ್ಲಿ ಇಂತಹ ಸೌಲಭ್ಯವಿರುವ ಫ್ಲ್ಯಾಟ್‌ಗೆ ತಿಂಗಳಿಗೆ 4 ಲಕ್ಷ ರೂ. ಬಾಡಿಗೆ ಇರುತ್ತದೆ..ಇಲ್ಲಿ ಅದಕ್ಕೆ ಹೋಲಿಸಿದರೆ ಕಡಿಮೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.