ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಲ್ ಕಟ್ಟೋರು ಯಾರು?: ರೆಸ್ಟೋರೆಂಟ್‌ ನಲ್ಲಿ ಯುವಕರ ಕಿತ್ತಾಟದಿಂದ ಗ್ಲಾಸ್ - ಪ್ಲೇಟ್‌ಗಳೆಲ್ಲ ಪುಡಿ ಪುಡಿ! ವಿಡಿಯೋ ನೋಡಿ

Viral Video: ಪಾರ್ಟಿ ಎಲ್ಲ ಮುಗಿಸಿ ಬಿಲ್ ಬಂದಾಗ ತಾನೇ ಬಿಲ್ ಕೊಡ್ತೀನಿ ಅಂತ ಪ್ರೀತಿಯಿಂದ ಜಗಳ ಮಾಡಿ ಹೊರಟು ಹೋಗಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಬಿಲ್ ಪಾವತಿ ಮಾಡುವ ವಿಚಾರವೇ ತಾರಕಕ್ಕೆ ಹೋಗಿರುವ ಘಟನೆ ನಡೆದಿದೆ. ಪುರುಷರ ಗುಂಪೊಂದು ಆಕ್ರಮಣಕಾರಿ ಯಾಗಿ ಗುದ್ದುವುದು, ತಳ್ಳುವುದು ಮತ್ತು ಪರಸ್ಪರ ಹೊಡೆದಾಡಿ ಕೊಳ್ಳುತ್ತಿರುವ ವಿಡಿಯೊಯೊಂದು ವೈರಲ್ ಆಗಿದೆ...

ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಯುವಕರ ಕಿತ್ತಾಟ: ವಿಡಿಯೊ ವೈರಲ್

ಬಿಲ್ ಪಾವತಿ ಮಾಡುವ ವಿಚಾರದಲ್ಲಿ ಯುವಕರ ಕಿತ್ತಾಟ -

Profile
Pushpa Kumari May 28, 2026 6:28 PM

ಹೊಸ ದೆಹಲಿ,ಮೇ 28: ಸಾಮಾನ್ಯವಾಗಿ ಸ್ನೇಹಿತರೆಲ್ಲ‌ ಸಮಯ ಕಳೆಯಲು ರೆಸ್ಟೋರೆಂಟ್, ಹೋಟೆಲ್ ಅಂತ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಪಾರ್ಟಿ ಎಲ್ಲ ಮುಗಿಸಿ ಬಿಲ್ ಬಂದಾಗ ತಾನೇ ಬಿಲ್ ಕೊಡ್ತೀನಿ ಅಂತ ಪ್ರೀತಿಯಿಂದ ಜಗಳ ಮಾಡಿ ಹೊರಟು ಹೋಗಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಬಿಲ್ ಪಾವತಿ ಮಾಡುವ ವಿಚಾರವೇ ತಾರಕಕ್ಕೆ ಹೋಗಿರುವ ಘಟನೆ ನಡೆದಿದೆ. ಪುರುಷರ ಗುಂಪೊಂದು ಆಕ್ರಮಣಕಾರಿಯಾಗಿ ಗುದ್ದುವುದು, ತಳ್ಳುವುದು ಮತ್ತು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ.

ಬಿಲ್ ಪಾವತಿ ಮಾಡುವ ಸಣ್ಣ ವಿಚಾರವು ರಣರಂಗವಾಗಿ ಮಾರ್ಪಟ್ಟಿದೆ. ಈ ದೃಶ್ಯ ನೋಡಿ ರೆಸ್ಟೋರೆಂಟ್‌ ಸಿಬ್ಬಂದಿಗಳೇ ಅಚ್ಚರಿಗೆ ಒಳಗಾಗಿದ್ದಾರೆ. ಊಟ ಎಲ್ಲ ಮುಗಿಸಿದ ಯುವಕರ ಗುಂಪು ಬಿಲ್ ಬರುತ್ತಿದ್ದಂತೆ ಪಾವತಿಸುವವರು ಯಾರು ಎಂದು ತಮ್ಮ ತಮ್ಮೊಡನೆ ಮಾತನಾಡಿ ಕೊಳ್ಳುತ್ತಿದ್ದಾರೆ. ಆದರೇ ಅದೇ ಕ್ಷಣದಲ್ಲಿ ಇದು ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದೆ.

ವಿಡಿಯೋ ನೋಡಿ:



ರೆಸ್ಟೋರೆಂಟ್‌ನ ಒಳಗಡೆ ಪುರುಷರ ಗುಂಪು ಅತ್ಯಂತ ಕ್ರೂರವಾಗಿ ಹೊಡೆದಾಡಿಕೊಳ್ಳುವುದನ್ನು ನೀವು ಗಮನಿಸರಬಹುದು‌. ಒಬ್ಬರಿಗೊಬ್ಬರು ಗುದ್ದಾಡುತ್ತಾ, ಟೇಬಲ್‌ಗಳ ಮೇಲಕ್ಕೆ ತಳ್ಳಿ ಗುದ್ದಾಟ ನಡೆಸಿದ್ದಾರೆ. ಗಲಾಟೆಯ ತೀವ್ರತೆಗೆ ರೆಸ್ಟೋರೆಂಟ್‌ ನಲ್ಲಿದ್ದ ಗಾಜಿನ ಲೋಟಗಳು, ಪ್ಲೇಟುಗಳು ಪುಡಿಯಾಗಿ ಬಿದ್ದಿವೆ.

Viral Video: ಏರ್‌ಪೋರ್ಟ್‌ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್‌; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ

ವಾಗ್ವಾದದ ಸಮಯದಲ್ಲಿ ಗಾಜಿನ ವಸ್ತುಗಳು ಕೋಣೆಯಾದ್ಯಂತ ಹಾರಿಹೋಗಿದ್ದು ಪೀಠೋ ಪಕರಣಗಳು ತುಂಡಾಗಿ ಬಿದ್ದಿವೆ. ಇತರ ಗ್ರಾಹಕರು ಈ ಭೀಕರ ದೃಶ್ಯವನ್ನು ಕಂಡು ಭಯ ಪಟ್ಟಿದ್ದಾರೆ ಹೋಟೆಲ್ ಸಿಬ್ಬಂದಿ ಮತ್ತು ಕೆಲವು ಪ್ರತ್ಯಕ್ಷದರ್ಶಿಗಳು ಜಗಳ ಬಿಡಿಸಲು ಯತ್ನಿಸಿದರಾದರೂ ಯುವಕರು ಜಗಳ ನಿಲ್ಲಿಸಲಿಲ್ಲ.

ಈ ವೀಡಿಯೊ ಆನ್‌ಲೈನ್‌ನಲ್ಲಿ ಹರಡುತ್ತಿದ್ದಂತೆ ಯುವಕರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ. ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಜಗಳ,ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಬಿಲ್ ಪಾವತಿ ಮಾಡಲು ಸಾಧ್ಯ ಇಲ್ಲದಿದ್ದರೆ ಯಾಕೆ ತಿನ್ನಲು ಹೋಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಸರಿಯಾಗಿ ಶೇರ್ ಮಾಡಿ ಬಿಲ್ ಪಾವತಿ ಮಾಡ ಬಹುದಿತ್ತು..ಇದಕ್ಕೆ ಇಷ್ಟೆಲ್ಲ ಜಗಳ ಬೇಕಿತ್ತಾ? ಎಂದು ಬರೆದುಕೊಂಡಿದ್ದಾರೆ.