ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಬರ್ ಚಾಲಕ ಹಾಗೂ ಪ್ರಯಾಣಿಕರ ನಡುವೆ ಜಗಳ: ಮಹಿಳೆಗೆ ಬಿಸಿ ಕಾಫಿ ಎರಚಿದ ಡ್ರೈವರ್!

Viral Video: ರೈಡ್ ಕ್ಯಾನ್ಸಲ್ ಮಾಡುವ ವಿಚಾರವಾಗಿ ಉಬರ್ ಚಾಲಕ ಹಾಗೂ ಪ್ರಯಾಣಿಕರ ನಡುವೆ ಭೀಕರ ಜಗಳವೊಂದು ನಡೆದಿದೆ. ಚಾಲಕ ಇಬ್ಬರು ಮಹಿಳಾ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಣೆ ಮಾಡಿದ್ದು ಸವಾರಿಯನ್ನು ತಾವೇ ರದ್ದುಗೊಳಿಸುವಂತೆ ಕೇಳಿದ್ದಾನೆ. ಈ ಸಂದರ್ಭದಲ್ಲಿ ಅವರ ನಡುವೆ ವಿವಾದ ಪ್ರಾರಂಭವಾಗಿದ್ದು ತಾರರಕ್ಕೆ ಹೋಗಿದೆ...

ರೈಡ್ ಕ್ಯಾನ್ಸಲ್ ವಿವಾದ: ಮಹಿಳೆಯ ಮೇಲೆ ಬಿಸಿ ಕಾಫಿ ಎರಚಿದ ಚಾಲಕ!

ಮಹಿಳೆಯ ಮೇಲೆ ಬಿಸಿ ಕಾಫಿ ಎರಚಿದ ಚಾಲಕ -

Profile
Pushpa Kumari Jun 21, 2026 3:37 PM

ಮೆಲ್ಬೋರ್ನ್,ಜೂ.21: ಪ್ರಯಾಣಿಕರು ಹಾಗೂ ಕ್ಯಾಬ್ ಚಾಲಕರ ನಡುವಿನ ವಿವಾದದ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತವೆ. ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ, ನಿಗದಿತ ಸ್ಥಳಕ್ಕೆ ಕರೆದೊಯ್ಯದೆ ಇರುವುದು ಹೀಗೆ ಅನೇಕ ದೂರುಗಳು ಕೇಳಿ ಬಂದಿವೆ. ಇದೀಗ ರೈಡ್ ಕ್ಯಾನ್ಸಲ್ ಮಾಡುವ ವಿಚಾರವಾಗಿ ಉಬರ್ ಚಾಲಕ ಹಾಗೂ ಪ್ರಯಾಣಿಕರ ನಡುವೆ ಭೀಕರ ಜಗಳವೊಂದು ನಡೆದಿದೆ. ಚಾಲಕ ಇಬ್ಬರು ಮಹಿಳಾ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಣೆ ಮಾಡಿದ್ದು ಸವಾರಿಯನ್ನು ತಾವೇ ರದ್ದುಗೊಳಿಸುವಂತೆ ಕೇಳಿದ್ದಾನೆ. ಈ ಸಂದರ್ಭದಲ್ಲಿ ಅವರ ನಡುವೆ ವಿವಾದ ಪ್ರಾರಂಭವಾಗಿದ್ದು ತಾರರಕ್ಕೆ ಹೋಗಿದೆ.

ಆಸ್ಟ್ರೇಲಿಯಾದ ಮಹಿಳೆಯರಿಬ್ಬರು ಒಟ್ಟಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದಾರೆ. ಆದರೆ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಣೆ ಮಾಡಿದ್ದು ಬುಕಿಂಗ್ ರದ್ದು ಗೊಳಿಸುವಂತೆ ಕೇಳಿ ಕೊಂಡಿದ್ದಾನೆ. ಇದು ಮೊದಲು ಮಾತಿನ ಚಕಮಕಿಗೆ ಕಾರಣವಾಗಿದ್ದು ತದ ನಂತರ ತೀವ್ರ ಘರ್ಷಣೆ ಆಗಿ ಬದಲಾಯಿತು. ಆದಾಗ್ಯೂ ಇಬ್ಬರು ಮಹಿಳೆಯರು ತಕ್ಷಣ ವಾಹನದಿಂದ ಹೊರಬರಲು ನಿರಾಕರಿಸಿದ್ದು ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ವಾಹನದಿಂದ ಹೊರಬರದಿದ್ದರೆ ಚಾಲಕ ಅವರ ಮೇಲೆ ಬಿಸಿ ಕಾಫಿಯನ್ನು ಎಸೆಯುವುದಾಗಿ ಬೆದರಿಕೆ ಹಾಕಿದ್ದಾನೆ.

ವಿಡಿಯೋ ನೋಡಿ:



ವೈರಲ್ ಆದ ವಿಡಿಯೊದಲ್ಲಿ ನನ್ನ ಕಾರಿನಿಂದ ಇಳಿಯಿರಿ. ನಿಮಗೆ ಅರ್ಥವಾಗುತ್ತಿಲ್ಲವೇ? ನಾನು ನಿಮಗೆ ಮತ್ತೊಮ್ಮೆ ಹೇಳುತ್ತಿದ್ದೇನೆ, ಇಲ್ಲದಿದ್ದರೆ ನಾನು ನಿಮ್ಮ ಮೇಲೆ ಬಿಸಿ ಕಾಫಿ ಸುರಿಯುತ್ತೇನೆ ಎಂದು ಕ್ಲಿಪ್‌ನಲ್ಲಿ ಚಾಲಕ ಹೇಳಿದ್ದಾನೆ. ಇಬ್ಬರು ಮಹಿಳೆಯರು ಚಾಲಕನೊಂದಿಗೆ ಜಗಳವಾಡು ತ್ತಿರುವುದು ಕಂಡುಬಂದಿದೆ. ಆದರೆ, ತಾವು ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಹಣ ಕಳೆದು ಕೊಂಡಿದ್ದು ರೈಡ್ ಕ್ಯಾನ್ಸಲ್ ಮಾಡಲು ನಿರಾಕರಣೆ ಮಾಡಿದ್ದಾರೆ. ಮತ್ತು ಕಾರಿನಿಂದ ತಕ್ಷಣ ಇಳಿಯಲು ನಿರಾಕರಿಸಿದ್ದಾರೆ.

Viral News: ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?

ಆದಾಗ್ಯೂ ಮಹಿಳೆಯರು ವಾಗ್ವಾದ ಮುಂದುವರಿಸಿ ವಿಡಿಯೋ ಮಾಡಲು ಮುಂದಾದಾಗ, ಚಾಲಕ ತನ್ನ ಕೈಯಲ್ಲಿದ್ದ ಬಿಸಿ ಕಾಫಿಯನ್ನು ಮಹಿಳೆಯೊಬ್ಬರ ಮೇಲೆ ಎರಚಿದ್ದಾನೆ. ಬಿಸಿ ಕಾಫಿ ಬಿದ್ದ ಪರಿಣಾಮ ಮಹಿಳೆಗೆ ಗಾಯ ಉಂಟಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಮಹಿಳೆಯರು ಪ್ರಯಾಣವನ್ನು ರದ್ದುಗೊಳಿಸಿದ್ದರೆ ಇಷ್ಟೊಂದು ಉಲ್ಬಣಗೊಳಿಸುವ ಅಗತ್ಯ ವಿರಲಿಲ್ಲ ಎಂದಿದ್ದಾರೆ. ಮತ್ತೊಬ್ಬರು ಚಾಲಕನಿಗೆ ಎಷ್ಟೇ ಕೋಪ ಇದ್ದರೂ ಬಿಸಿ ಕಾಫಿ ಎರಚುವುದು ತಪ್ಪು ಎಂದು ಪ್ರತಿಕ್ರಿಯೆ ನೀಡಿದ್ದಾರೆ.