ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Riteish Deshmukh: ಸೆಲ್ಫಿ ತೆಗೆಸಿಕೊಳ್ಳಲು ಬಂದ ಯುವ ಅಭಿಮಾನಿ ಜತೆ ಒರಟಾಗಿ ವರ್ತಿಸಿದ ರಿತೇಶ್ ದೇಶ್‌ಮುಖ್; ನೆಟ್ಟಿಗರ ಆಕ್ರೋಶ

ʼವೇದ್ʼ,ʼ ಗ್ರ್ಯಾಂಡ್ ಮಸ್ತಿʼ, ʼಹೌಸ್‌ಫುಲ್ʼ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ರಿತೇಶ್ ದೇಶ್‌ಮುಖ್ ಅವರಿಗೂ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ಕೂಡ ಇವರನ್ನು ಪಬ್ಲಿಕ್ ಪ್ಲೇಸ್‌ನಲ್ಲಿ ಕಂಡಾಗ ಮುಗಿ ಬೀಳುತ್ತಿರುತ್ತಾರೆ. ಪತ್ನಿ ಜೆನಿಲಿಯಾ ಡಿ'ಸೋಜಾ ಅವರೊಂದಿಗೆ ಆಗಾಗ ಅನೇಕ ಇವೆಂಟ್‌ನಲ್ಲಿ ಭಾಗಿಯಾಗುವ ಅವರು ತಮ್ಮ ಅಭಿಮಾನಿಗಳ ಜತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಆದರೆ ಈ ಬಾರಿ ಸೆಲ್ಫಿ ಕೇಳಲು ಬಂದ ಅಭಿಮಾನಿ ಬಳಿ ಫುಲ್ ಗರಂ ಆಗಿದ್ದಾರೆ.

ಸೆಲ್ಫಿ ಕೇಳಲು ಬಂದ ಅಭಿಮಾನಿ ಜತೆ ನಟ ರಿತೇಶ್ ದೇಶ್‌ಮುಖ್ ಫುಲ್ ಗರಂ

Riteish Deshmukh

Profile Pushpa Kumari Jun 23, 2025 3:18 PM

ಮುಂಬೈ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅಭಿನಯದ ʼಸಿತಾರೆ ಜಮೀನ್ ಪರ್ʼ ಸಿನಿಮಾ ತೆರೆ ಕಂಡಿದ್ದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಕೂಡ ಪಡೆಯುತ್ತಿದೆ‌. ಈ ಚಿತ್ರವನ್ನು ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಟ ಸಲ್ಮಾನ್ ಖಾನ್, ಶಾರುಖ್ ಖಾನ್, ರಿತೇಶ್ ದೇಶ್‌ಮುಖ್ (Riteish Deshmukh) ಮತ್ತಿತರರು ಚಿತ್ರ ನೋಡಿ ಫಿದಾ ಆಗಿದ್ದಾರೆ. ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದ ರಿತೇಶ್ ದೇಶ್‌ಮುಖ್ ಅಭಿಮಾನಿಯ ಜತೆ ಒರಟಾಗಿ ನಡೆದುಕೊಂಡಿದ್ದಾರೆ. ಅವರ ನಡೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾವಾಗಲೂ ಪರಿಸ್ಥಿತಿಯನ್ನು ಕೂಲ್ ಆಗಿ ಹ್ಯಾಂಡಲ್ ಮಾಡುವ ರಿತೇಶ್ ಅವರು ಈ ಬಾರಿ ಅಭಿಮಾನಿಯನ್ನು ನಿರ್ಲಕ್ಷಿಸಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ʼವೇದ್ʼ, ʼಗ್ರ್ಯಾಂಡ್ ಮಸ್ತಿʼ, ʼಹೌಸ್‌ಫುಲ್ʼ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾ ನೀಡಿರುವ ರಿತೇಶ್ ದೇಶ್‌ಮುಖ್ ಅವರಿಗೂ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ. ಅಭಿಮಾನಿಗಳು ಕೂಡ ಇವರನ್ನು ಪಬ್ಲಿಕ್ ಪ್ಲೇಸ್‌ನಲ್ಲಿ ಕಂಡಾಗ ಮುಗಿ ಬೀಳುತ್ತಿರುತ್ತಾರೆ. ಪತ್ನಿ ಜೆನಿಲಿಯಾ ಡಿ'ಸೋಜಾ ಅವರೊಂದಿಗೆ ಆಗಾಗ ಇವೆಂಟ್‌ನಲ್ಲಿ ಭಾಗಿಯಾಗುವ ಇವರು ತಮ್ಮ ಅಭಿಮಾನಿಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಈ ಭಾರೀ ಸೆಲ್ಫಿ ಕೇಳಲು ಬಂದ ಅಭಿಮಾನಿ ಬಳಿ ಫುಲ್ ಗರಂ ಆಗಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ನಟ ರಿತೇಶ್ ಪತ್ನಿ ಜೆನಿಲಿಯಾಳ ಕೈ ಹಿಡಿದು ಸ್ಕ್ರೀನಿಂಗ್ ಸ್ಥಳದ ಕಡೆಗೆ ಕರೆದೊಯ್ಯುತ್ತಿದ್ದರು. ಅಲ್ಲಿಗೆ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ತನ್ನ ಫೋನ್‌ನೊಂದಿಗೆ ಮುಂದೆ ಬರುತ್ತಾನೆ. ಆದರೆ ರಿತೇಶ್ ಅಭಿಮಾನಿ ಕೈಯನ್ನು ಕೆಳಗೆ ತಳ್ಳಿ, ನಿರ್ಲಕ್ಷಿಸಿ ಪತ್ನಿ ಜತೆಗೆ ಮುಂದೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಸೆಲ್ಫಿ ಸಿಗದ ಕಾರಣ ಆ ಹುಡುಗ ನಿರಾಸೆಯಿಂದ ಸಪ್ಪೆ ಮುಖ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನು ಓದಿ: Kuberaa Movie: ʼಕುಬೇರʼನಿಗೂ ತಟ್ಟಿದ ಪೈರಸಿ ಕಾಟ; ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕಾಯ್ತು ಧನುಷ್‌-ರಶ್ಮಿಕಾ ಚಿತ್ರ

ವೈರಲ್ ವಿಡಿಯೊದಲ್ಲಿ ರಿತೇಶ್ ದೇಶಮುಖ್ ಅವರ ವರ್ತನೆಯ ನೋಡಿ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಮೊದಲ ಬಾರಿಗೆ ನನಗೆ ರಿತೇಶ್ ವರ್ತನೆ ಇಷ್ಟವಾಗಲಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ರಿತೇಶ್ ಅವರಿಂದ ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಈಗ ನಿಮ್ಮನ್ನು ಅನ್‌ಫಾಲೋ ಮಾಡುತ್ತಿದ್ದೇನೆ ಎಂದಿದ್ದಾರೆ.

ರಿತೇಶ್ ದೇಶ್‌ಮುಖ್ ಇತ್ತೀಚೆಗಷ್ಟೇ ತೆರೆಕಂಡ ʼಹೌಸ್‌ಫುಲ್ 5ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್ ಮತ್ತಿತರರು ನಟಿಸಿದ್ದಾರೆ. ಸದ್ಯ ತಮ್ಮ ವೈರಲ್‌ ವಿಡಿಯೊ ಬಗ್ಗೆ ರಿತೇಶ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.