ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kuberaa Movie: ʼಕುಬೇರʼನಿಗೂ ತಟ್ಟಿದ ಪೈರಸಿ ಕಾಟ; ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕಾಯ್ತು ಧನುಷ್‌-ರಶ್ಮಿಕಾ ಚಿತ್ರ

Dhanush: ಧನುಷ್‌-ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ʼಕುಬೇರʼ ಚಿತ್ರ ತೆರೆಕಂಡಿದ್ದು, ಉತ್ತಮ ಆರಂಭ ದೊರೆತಿದೆ. ರಿಲೀಸ್‌ ಆದ ಮೊದಲ ದಿನವೇ 13 ಕೋಟಿ ರೂ. ಕಲೆಕ್ಷನ್‌ ಮಅಡಿದೆ. ಆದರೆ ಇದೀಗ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ಈ ಚಿತ್ರದ ಎಚ್‌ಡಿ ಪ್ರಿಂಟ್‌ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಚಿತ್ರತಂಡದ ನಿದ್ದೆಗೆಡಿಸಿದೆ.

ʼಕುಬೇರʼನಿಗೂ ತಟ್ಟಿದ ಪೈರಸಿ ಕಾಟ

ʼಕುಬೇರʼ ಚಿತ್ರದ ಪೋಸ್ಟರ್‌.

Profile Ramesh B Jun 21, 2025 4:17 PM

ಚೆನ್ನೈ: ಈ ವರ್ಷದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಕುಬೇರʼ (Kuberaa Movie) ತೆರೆಕಂಡಿದೆ. ಧನುಷ್‌ (Dhanush)-ರಶ್ಮಿಕಾ ಮಂದಣ್ಣ (Rashmika Mandanna)-ನಾಗಾರ್ಜುನ್‌‌ (Nagarjuna) ಕಾಂಬಿನೇಷನ್‌ನ, ಶೇಖರ್‌ ಕಮ್ಮುಲ (Sekhar Kammula) ನಿರ್ದೇಶನದ ʼಕುಬೇರʼ ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಬಡವ-ಶ್ರೀಮಂತರ ನಡುವಿನ ಸಂಘರ್ಷದಂತಹ ಸಂಕೀರ್ಣ ವಿಚಾರವನ್ನು ಶೇಖರ್‌ ಕಮ್ಮುಲ ಥ್ರಿಲ್ಲಿಂಗ್‌ ಆಗಿ ತೆರೆಮೇಲೆ ತಂದಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗಾಗಿ ಚಿತ್ರಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಸುಮಾರು 13 ಕೋಟಿ ರೂ. ಗಳಿಸಿದೆ. ಆದರೆ ಇದೀಗ ಸಿನಿಮಾ ತಂಡಕ್ಕೆ ಭರ್ಜರಿ ಶಾಕ್‌ ಎದುರಾಗಿದೆ. ಹೌದು, ಚಿತ್ರದ ಪೈರಸಿ ಕಾಪಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಎಚ್‌ಡಿ ಪ್ರಿಂಟ್‌ ಡೌನ್‌ಲೋಡ್‌ಗೆ ಲಭ್ಯವಾಗುತ್ತಿದೆ.

ತಮಿಳು-ತೆಲುಗು ದ್ವಿಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಈ ಪೈರಸಿ ಕಾಪಿ ವೆಬ್‌ಸೈಟ್‌ಗಳಾದ ಫಿಲ್ಮಿಝಲ್ಲಾ, ಮೂವಿರೂಲ್ಸ್‌, ಟೆಲಿಗ್ರಾಮ್‌, ತಮಿಳ್‌ರಾಕರ್ಸ್‌ ಮತ್ತಿತರ ಕಡೆ ಡೌನ್‌ಲೋಡ್‌ಗೆ ಸಿಗುತ್ತಿದೆ. ಇದರ 1080p, 720p, 480p, 360p, 240p ಮತ್ತು ಎಚ್‌ಡಿ ಪ್ರಿಂಟ್‌ ಲಭ್ಯ. ʼಕುಬೇರ ಮೂವಿ ಡೌನ್‌ಲೋಡ್‌ʼ ಮತ್ತು ʼಕುಬೇರ ಮೂವಿ ಎಚ್‌ಡಿ ಡೌನ್‌ಲೋಡ್‌ʼ ಹೆಚ್ಚಿನ ಸಂಖ್ಯೆಯಲ್ಲಿ ಸರ್ಚಿಂಗ್‌ ಆಗುತ್ತಿದೆ.

ಈ ಸುದ್ದಿಯನ್ನೂ ಓದಿ: Kuberaa First Review: ರಿಲೀಸ್‌ಗೂ ಮುನ್ನವೇ ʼಕುಬೇರʼ ರಿವ್ಯೂ ಔಟ್‌; ಧನುಷ್‌-ರಶ್ಮಿಕಾ ಮಂದಣ್ಣ ಚಿತ್ರ ಹೇಗಿದೆ?

ಪೈರಸಿ ಕಾಪಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮೇಲೆ ಪರಿಣಾಮ ಬೀರುವ ಆತಂಕ ಮೂಡಿದೆ. ಹೀಗಾಗಿ ಚಿತ್ರತಂಡ ಇದನ್ನು ಡೌನ್‌ಲೋಡ್‌ ಮಾಡದಂತೆ ಮನವಿ ಮಾಡಿದೆ. ಇತ್ತೀಚೆಗೆ ರಿಲೀಸ್‌ ಆಗುತ್ತಿರುವ ಸೂಪರ್‌ ಸ್ಟಾರ್‌ಗಳ ಸಿನಿಮಾಗಳೆಲ್ಲ ಪೈರಸಿ ಕಾಟಕ್ಕೆ ತುತ್ತಾಗುತ್ತಿರುವುದು ನಿರ್ಮಾಪಕರ ತಲೆಗೆಡಿಸಿದೆ.

2000ರಲ್ಲಿ ತೆರೆಕಂಡ ʼಡಾಲರ್‌ ಡ್ರೀಮ್ಸ್‌ʼ ತೆಲುಗು-ಇಂಗ್ಲಿಷ್‌ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಶೇಖರ್‌ ಕಮ್ಮುಲ ಇದೀಗ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಇವರು ʼಕುಬೇರʼ ಚಿತ್ರಕ್ಕಾಗಿ ಧನುಷ್‌ ಜತೆಗೆ ಒಂದಾಗುತ್ತಾರೆ ಎನ್ನುವಾಗಲೇ ನಿರೀಕ್ಷೆ ಗರಿಗೆದರಿತ್ತು. ಅಲ್ಲದೆ ಧನುಷ್‌ ಮತ್ತು ರಶ್ಮಿಕಾ ಮಂದಣ್ಣ ಕೂಡ ಚೊಚ್ಚಲ ಬಾರಿಗೆ ತೆರೆ ಹಂಚಿಕೊಂಡಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿತ್ತು. ಕೊನೆಗೂ ಚಿತ್ರ ತೆರೆಕಂಡಿದ್ದು, ನಿರೀಕ್ಷೆಗೆ ತಕ್ಕ ಮೂಡಿ ಬಂದಿದೆ.

ಧನುಷ್‌- ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಮೆಚ್ಚುಗೆ

ಉತ್ತಮ ಆರಂಭ ದೊರೆತಿದ್ದರೂ ʼಕುಬೇರʼ ಚಿತ್ರ ಧನುಷ್‌ ಅವರ ಹಿಂದಿನ ʼರಾಯನ್‌ʼ ಸಿನಿಮಾ ಕಲೆಕ್ಷನ್‌ ಹಿಂದಿಕ್ಕುವಲ್ಲಿ ವಿಫಲವಾಗಿದೆ. ʼರಾಯನ್‌ʼ ಸಿನಿಮಾ ಮೊದಲ ದಿನ 16 ಕೋಟಿ ರೂ. ಗಳಿಸಿತ್ತು. ʼಕುಬೇರʼ ತಮಿಳು, ತೆಲುಗು ಜತೆಗೆ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡಿದೆ. ಅದರಲ್ಲಿಯೂ ಧನುಷ್‌ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ನಾಗಾರ್ಜುನ ಮತ್ತು ನಾಯಕಿ ರಶ್ಮಿಕಾ ಮಂದಣ್ಣ ಅಭಿನಯಕ್ಕೂ ಪ್ರೇಕ್ಷಕರು ಮನ ಸೋತಿದ್ದಾರೆ. ಚಿತ್ರಕ್ಕೆ ಪಾಸಿಟಿವ್‌ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ವೀಕೆಂಡ್‌ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ಸಾಧ್ಯತೆ ಇದೆ.