Viral Video: ನೆಚ್ಚಿನ ಪತ್ನಿಗೆ ಚಿನ್ನದ ಸರ ಕೊಡಿಸಲು ಈ ಭೂಪ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ
ವ್ಯಕ್ತಿಯೊಬ್ಬ ಒಂದು ವರ್ಷಕ್ಕೂ ಹೆಚ್ಚು ಕಾಲ ಹಣ ಕೂಡಿಟ್ಟು ತನ್ನ ಚಿಲ್ಲರೆ ಹಣ ದಲ್ಲಿಯೇ ಪತ್ನಿಗೆ ಚಿನ್ನದ ಸರ ಕೊಡಿಸಿದ್ದ ಘಟನೆ ಕಾನ್ಪುರದಲ್ಲಿ (Kanpur) ನಡೆದಿದೆ. ಚಿಲ್ಲರೆ ಸಂಗ್ರಹ ಮಾಡಿದ್ದ ಎರಡು ಚೀಲಗಳ ಸಮೇತ ಆ ವ್ಯಕ್ತಿ ಆಭರಣ ಮಳಿಗೆಗೆ ಬಂದಿದ್ದು ಬಳಿಕ ಅದೇ ಚಿಲ್ಲರೆ ಹಣದಲ್ಲಿಯೇ ಚಿನ್ನದ ಸರ ಖರೀದಿ ಮಾಡಿದ್ದಾನೆ. ಸದ್ಯ ಈ ವ್ಯಕ್ತಿಯ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪತ್ನಿ ಮೇಲಿನ ಆತನ ಪ್ರೀತಿ ಮತ್ತು ಮುಗ್ದತೆಯೂ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.. 22 ವರ್ಷದ ಅಭಿಷೇಕ್ ಯಾದವ್ ಅವರು ತನ್ನ ಪತ್ನಿಗೆ ಚಿನ್ನದ ಸರ ಕೊಡಿಸಬೇಕು ಎಂಬ ಕಾರಣಕ್ಕೆ ಒಂದು ವರ್ಷಕ್ಕು ಹೆಚ್ಚು ಕಾಲ ಹಣ ಸಂಗ್ರಹಿಸಿದ್ದು ತಿಳಿದು ಬಂದಿದೆ.
                                ಚಿಲ್ಲರೆ ಹಣ ಕೂಡಿಟ್ಟು ಪತ್ನಿಗೆ ಸರ ಕೊಡಿಸಿದ ಪತಿ -
ನವದೆಹಲಿ: ಚಿನ್ನದಬೆಲೆ ಗಗನಕ್ಕೆ ಏರುತ್ತಿದ್ದು ಚಿನ್ನ ಕೊಂಡುಕೊಳ್ಳಬೇಕು ಎನ್ನುವವರ ಕನಸಿಗೆ ತಣ್ಣಿರು ಎರಚಿದಂತಿದೆ. ಹೀಗಾಗಿ ಬಹುತೇಕ ಮಹಿಳೆಯರು ಆರ್ಟಿಫಿಶಿಯಲ್ ಜ್ಯುವೆಲರಿ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ಚಿನ್ನ ಕೊಳ್ಳಲೆಂದೆ ಹಣವನ್ನು ಕೂಡಿಡುತ್ತಿದ್ದಾರೆ. ಅಂತೆಯೇ ವ್ಯಕ್ತಿಯೊಬ್ಬ ಒಂದು ವರ್ಷಕ್ಕೂ ಹೆಚ್ಚು ಕಾಲ ಹಣ ಕೂಡಿಟ್ಟು ತನ್ನ ಚಿಲ್ಲರೆ ಹಣದಲ್ಲಿಯೇ ಪತ್ನಿಗೆ ಚಿನ್ನದ ಸರ ಕೊಡಿಸಿದ್ದ ಘಟನೆ ಕಾನ್ಪುರದಲ್ಲಿ (Kanpur) ನಡೆದಿದೆ. ಚಿಲ್ಲರೆ ಸಂಗ್ರಹ ಮಾಡಿದ್ದ ಎರಡು ಚೀಲಗಳ ಸಮೇತ ಆ ವ್ಯಕ್ತಿ ಆಭರಣ ಮಳಿಗೆಗೆ ಬಂದಿದ್ದು ಬಳಿಕ ಅದೇ ಚಿಲ್ಲರೆ ಹಣ ದಲ್ಲಿಯೇ ಚಿನ್ನದ ಸರ ಖರೀದಿ ಮಾಡಿದ್ದಾನೆ. ಸದ್ಯ ಈ ವ್ಯಕ್ತಿಯ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಪತ್ನಿ ಮೇಲಿನ ಆತನ ಪ್ರೀತಿ ಮತ್ತು ಮುಗ್ದತೆಯೂ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ವೈರಲ್ ಆದ ವಿಡಿಯೋದಲ್ಲಿ ಕಾನ್ಪುರದ ಅಹಿರ್ವಾನ್ ರಾಜಾದಲ್ಲಿರುವ ಆಭರಣ ಮಳಿಗೆಗೆ ಗ್ರಾಹಕನೊಬ್ಬನು ಎರಡು ಭಾರವಾದ ಚೀಲಗಳನ್ನು ಕೌಂಟರ್ ಮೇಲೆ ಇರಿಸುತ್ತಾನೆ. ಇದನ್ನು ಕಂಡು ಆಭರಣ ಮಳಿಗೆಯ ಸಿಬಂದಿ ಹಾಗೂ ಮಾಲಿಕರು ಅಚ್ಚರಿಗೊಳ್ಳುತ್ತಾರೆ. ಆ ವ್ಯಕ್ತಿ ಎರಡು ಚೀಲಗಳಲ್ಲಿ ಸಾವಿರಾರು ನಾಣ್ಯಗಳು ಇರುವುದು ತಿಳಿದು ಬರುತ್ತದೆ. ನಾಣ್ಯಗಳು 1 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತವಿರುತ್ತದೆ. ಬಳಿಕ ಆತನ ಮೇಲೆ ಅನುಮಾನಗೊಂಡು ಪ್ರಶ್ನಿಸಲಾಗಿದೆ. ಆಗ ಆತ ತನ್ನ ಹಿನ್ನೆಲೆ ಎಲ್ಲವನ್ನು ತಿಳಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೊ ಇಲ್ಲಿದೆ
22 ವರ್ಷದ ಅಭಿಷೇಕ್ ಯಾದವ್ (Abhishek Yadav) ಅವರು ತನ್ನ ಪತ್ನಿಗೆ ಚಿನ್ನದ ಸರ ಕೊಡಿಸ ಬೇಕು ಎಂಬ ಕಾರಣಕ್ಕೆ ಒಂದು ವರ್ಷಕ್ಕು ಹೆಚ್ಚು ಕಾಲ ಹಣ ಸಂಗ್ರಹಿಸಿದ್ದು ತಿಳಿದು ಬಂದಿದೆ. ಕಾನ್ಪುರದ ರಮಾದೇವಿ ಪ್ರದೇಶದ ಹೆಚ್ಎಎಲ್ ಕಾಲೋನಿ ಬಳಿಯಲ್ಲಿ ಇವರು ಪಾನ್ ಅಂಗಡಿ ಇಟ್ಟುಕೊಂಡಿದ್ದಾರೆ. ಅಂಗಡಿಯಲ್ಲಿ ಪ್ರತಿದಿನ ಗ್ರಾಹಕರ ಸಂಖ್ಯೆ ಹೆಚ್ಚು ಇದ್ದು ಬಂದ ಗ್ರಾಹಕರಲ್ಲಿ ಬಹುತೇಕರು 10 ರೂ. ನಾಣ್ಯಗಳೊಂದಿಗೆ ಪಾವತಿಸುತ್ತಾರೆ. ಹೀಗಾಗಿ ನಾಣ್ಯಗಳನ್ನು ನೋಟುಗಳಾಗಿ ಬದಲಾಯಿಸುವ ಬದಲು, ಅದನ್ನೇ ಸಂಗ್ರಹ ಮಾಡಲು ಆರಂಭಿಸಿದರು.
ಇದನ್ನು ಓದಿ:Viral Video: ಚಿಕನ್ ಫ್ರೈ ವಿಚಾರಕ್ಕೆ ಮದ್ವೆ ಮನೆ ಆಯ್ತು ರಣಾಂಗಣ! ಬಂಧುಗಳ ನಡುವೆ ಮಾರಾಮಾರಿ
ಬಳಿಕ ಅದೇ ಹಣದಿಂದ ತಮ್ಮ ಪತ್ನಿಗೆ ಸ್ಮರಣೀಯವಾದದ್ದನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾರೆ. ಏನು ತೆಗೆದುಕೊಳ್ಳುವುದು ಎಂದು ತೋಚದೆ ಚಿನ್ನದ ಸರ ತೆಗೆದುಕೊಳ್ಳುವ ನಿರ್ಧಾ ರಕ್ಕೆ ಬಂದರು. ಅವರ ಪತ್ನಿ ಇತ್ತೀಚೆಗಷ್ಟೇ ತನ್ನ ತವರು ಮನೆಗೆ ಹೋಗಿದ್ದು ಆಕೆ ಮನೆಗೆ ವಾಪಾಸಾ ಗುತ್ತಿದ್ದಂತೆ ಈ ಗಿಫ್ಟ್ ಆಕೆಗೆ ನೀಡಬೇಕು ಎಂದು ಅಂದುಕೊಂಡಿದ್ದು ಅದಕ್ಕಾಗಿ ಚಿನ್ನ ಖರೀದಿಸಲು ಚಿಲ್ಲರೆ ನಾಣ್ಯದ ಸಮೇತ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ.
ನವೆಂಬರ್ 1 ರಂದು ಅಭಿಷೇಕ್ ಎರಡು ಚೀಲಗಳನ್ನು ಹೊತ್ತುಕೊಂಡು ಅವರ ಅಂಗಡಿಗೆ ಬಂದರು. ಮೊದಲಿಗೆ ಏನು ನಡೆಯುತ್ತಿದೆ ಎಂದು ಅರ್ಥವಾಗಲಿಲ್ಲ. ಅದರಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ನಾಣ್ಯಗಳಿವೆ ಎಂದು ಹೇಳಿದರು. ನಾವು ಎಣಿಸಿದಾಗ, ಅಭಿಷೇಕ್ ಅವರು ತಂದಿದ್ದ ಚೀಲದಲ್ಲಿ 20 ರೂಪಾಯಿ ನಾಣ್ಯಗಳೇ ಸುಮಾರು 5290 ಇತ್ತು. ಒಟ್ಟು 1.05 ಲಕ್ಷ ರೂ.ನಷ್ಟಿತ್ತು. ಈ ನಾಣ್ಯಗಳನ್ನು ಎಣಿಸಲು ಮತ್ತು ಬಂಡಲ್ ಮಾಡಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಹಿಡಿಯಿತು. ಎಂದು ಆಭರಣ ಮಳಿಗೆಯ ಮಾಲಿಕ ಮಹೇಶ್ ವರ್ಮಾ ಅವರು ತಿಳಿಸಿದ್ದಾರೆ.
ಅಭಿಷೇಕ್ ಖರೀದಿ ಮಾಡಿದ್ದ ಚಿನ್ನದ ಸರದ ಬೆಲೆ 1.25 ಲಕ್ಷ ರೂ.ಗಳಾಗಿತ್ತು ಬಯಸಿದ್ದರು, ಆದರೆ ಆತನ ಬಳಿ ಹಣ ಇಲ್ಲದ ಕಾರಣ ಆಭರಣ ವ್ಯಾಪಾರಿ ಉಳಿದ ಮೊತ್ತವನ್ನು ಕಂತುಗಳಲ್ಲಿ ಪಾವತಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ಪತಿ ಎಂದರೆ ಹೀಗಿರಬೇಕು. ಅವರ ಪತ್ನಿ ನಿಜಕ್ಕು ಅದೃಷ್ಟವಂತರು ಎಂದು ನೆಟ್ಟಿಗರೊಬ್ಬರು ಈ ವಿಡಿಯೊಗೆ ಕಾಮೆಂಟ್ ಹಾಕಿದ್ದಾರೆ.