ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಸಿಲಿಗೆ ತತ್ತರಿಸಿದ್ದ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಅಂಗಡಿ ಮಾಲೀಕ; ವಿಡಿಯೋ ನೋಡಿದ್ರೆ ಹೃದಯ ತುಂಬಿ ಬರುತ್ತೆ

Viral Video: ದೆಹಲಿಯ ಅಂಗಡಿ ಮಾಲೀಕರೊಬ್ಬರು ಮಾನವೀಯತೆ ಮೆರೆದಿರುವ ದೃಶ್ಯ ಕಂಡು ಬಂದಿದೆ. ಅಂಗಡಿ ಮಾಲೀಕನು ತನ್ನ ಅಂಗಡಿಯೊಳಗೆಯೇ ಬೀದಿ ನಾಯಿಗಳಿಗೆ ಆಶ್ರಯ ಪಡೆಯಲು ಅವಕಾಶ ನೀಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಿಸಿಲ ಬೇಗೆಗೆ ಬೆಂದು ಹೋದ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಅಂಗಡಿ ಮಾಲೀಕ

ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಅಂಗಡಿ ಮಾಲೀಕ -

Profile
Pushpa Kumari Apr 26, 2026 1:59 PM

ನವದೆಹಲಿ,ಏ. 26: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು ಜನ ತತ್ತರಿಸಿ ಹೋಗಿದ್ದಾರೆ. ಈ ಬಿಸಿಲ ಬೇಗೆಗೆ ಮನುಷ್ಯರೇ ಆತಂಕ ವ್ಯಕ್ತ ಪಡಿಸುತ್ತಿದ್ದು ಪ್ರಾಣಿಗಳು ಬಾಯಾರಿಕೆ ಯಿಂದ ಬೆಂದು ಹೋಗುತ್ತಿವೆ. ಈ ನಡುವೆ ದೆಹಲಿಯ ಅಂಗಡಿ ಮಾಲೀಕರೊಬ್ಬರು ಮಾನವೀಯತೆ ಮೆರೆದಿರುವ ದೃಶ್ಯ ಕಂಡು ಬಂದಿದೆ. ಅಂಗಡಿ ಮಾಲೀಕನು ತನ್ನ ಅಂಗಡಿಯೊಳಗೆಯೇ ಬೀದಿ ನಾಯಿಗಳಿಗೆ ಆಶ್ರಯ ಪಡೆಯಲು ಅವಕಾಶ ನೀಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಬಿಸಿಲಿನ ತಾಪದ ನಡುವೆ ಅಂಗಡಿ ಮಾಲೀಕನು ತನ್ನ ಪುಟ್ಟ ಅಂಗಡಿಯೊಳಗೆ ಆಶ್ರಯ ನೀಡಿದ್ದಾನೆ. ಸುಮಾರು 9ರಿಂದ 10 ಬೀದಿನಾಯಿಗಳು ಯಾವುದೇ ಭಯ ಇಲ್ಲದೆ ಅಂಗಡಿಯೊಳಗೆ ವಿಶ್ರಾಂತಿ ಪಡೆಯುತ್ತಿದೆ. ನೆಲದಾದ್ಯಂತ ಮತ್ತು ಮೇಜಿನ ಮೇಲೂ ನಾಯಿಗಳು ಆರಾಮವಾಗಿ ಮಲಗಿಕೊಂಡಿದೆ.ಈ ವಿಡಿಯೊ ಎಲ್ಲರ ಗಮನ ಸೆಳೆದಿದ್ದು ಸಾವಿರಾರು ಲೈಕ್ ಕಾಮೆಂಟ್ ಪಡೆದುಕೊಂಡಿದೆ.

ವಿಡಿಯೋ ನೋಡಿ:



ವೈರಲ್ ಆದ ದೃಶ್ಯದಲ್ಲಿ ಸುಮಾರು 9 ರಿಂದ 10 ಬೀದಿ ನಾಯಿಗಳು ಅಂಗಡಿ ಒಳಗೆ ಇರುವುದು ಕಾಣಬಹುದು. ನಾಯಿಗಳು ನೆಲದಾದ್ಯಂತ ಮತ್ತು ಮೇಜಿನ ಮೇಲೂ ಆರಾಮವಾಗಿ ಮಲಗಿವೆ. ಈ ವಿಡಿಯೊದ ಗಮನ ಸೆಳೆಯುವ ದೃಶ್ಯ ಏನಂದ್ರೆ ನಾಯಿಗಳು ಇದ್ದರೂ ಅಲ್ಲಿನ ಗ್ರಾಹಕರು ಮಾತ್ರ ಯಾವುದೇ ಮುಜುಗರ ಪಟ್ಟು ಕೊಳದೆ ಅತ್ಯಂತ ತಾಳ್ಮೆಯಿಂದ ಕುತೂ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ದೃಶ್ಯ‌ ಪ್ರಾಣಿ ಮತ್ತು ಮನುಷ್ಯರ ನಡುವೆ ಇರುವ ಸೌಹಾರ್ದತೆಯನ್ನು ಎತ್ತಿ ತೋರಿಸಿವೆ.

Viral Video: ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ಯಾವುದೇ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿಲ್ಲ. ಅವು ಶಾಂತವಾಗಿವೆ. ಅಂಗಡಿಯು ಸ್ವತಃ ತುಂಬಿದಂತೆ ಕಂಡರೂ ವಿವಿಧ ವಸ್ತುಗಳಿಂದ ಕೂಡಿದ್ದರೂ ಸ್ಥಳವು ಅಸ್ತವ್ಯಸ್ತವಾಗಿ ಕಾಣುತ್ತಿಲ್ಲ. ನಾಯಿಗಳು ಸಹ ಯಾರಿಗೂ ತೊಂದರೆ ಕೊಡದೇ ಬೊಗಳುತ್ತಿಲ್ಲ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು "ಒಳ್ಳೆಯ ಮನುಷ್ಯ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಮಾನವೀಯತೆ ಇನ್ನೂ ಅಸ್ತಿತ್ವದಲ್ಲಿದೆ" ಎಂದು ಹೇಳಿದ್ದಾರೆ.