ಮನೆಯ ಗೇಟ್‌ಗೆ ಕಟ್ಟಿದ ನಾಯಿಗೆ ದೊಣ್ಣೆಯಿಂದ ಹೊಡೆದ ಅಪ್ಪ-ಮಗ; ಕ್ರೂರ ಕೃತ್ಯ ಕ್ಯಾಮರಾದಲ್ಲಿ ಸೆರೆ
ಮನೆಯ ಗೇಟ್ ಗೆ ಕಟ್ಟಿದ್ದ ನಾಯಿಗೆ ಚಿತ್ರಹಿಂಸೆ ನೀಡಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಯಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದೆ.
ಸಂಗ್ರಹ ಚಿತ್ರ -
ಗುಜರಾತ್: ಮನೆಯ ಗೇಟ್ ಬಳಿ ಕಟ್ಟಿ ಹಾಕಿದ್ದ ನಾಯಿಗೆ (tied dog) ಇಬ್ಬರು ವ್ಯಕ್ತಿಗಳು ಚಿತ್ರಹಿಂಸೆ ನೀಡಿರುವ ಘಟನೆ ಗುಜರಾತ್‌ನ (gujarat crime) ರಾಜ್‌ಕೋಟ್‌ನಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಮಾಧಾಪರ್ ಚೋಕ್ಡಿ ಬಳಿ ಈ ಘಟನೆ ನಡೆದಿದ್ದು, ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ವ್ಯಕ್ತಿಗಳು ನಾಯಿಗೆ ಕೋಲುಗಳಿಂದ ಹೊಡೆದು ಥಳಿಸುತ್ತಿದ್ದರೆ, ಇಬ್ಬರು ಮಹಿಳೆಯರು ಧಾವಿಸಿ ಬಂದು ನಾಯಿಯ ರಕ್ಷಣೆಗೆ ಮುಂದಾಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಾಯಿಯ ಮೇಲೆ ಹಲ್ಲೆ ನಡೆಸಿರುವವರನ್ನು ತಂದೆ ಮಗ ಎಂದು ಗುರುತಿಸಲಾಗಿದೆ.
ರಾಜ್‌ಕೋಟ್‌ನ ಮಾಧಾಪರ್ ಚೋಕ್ಡಿ ಬಳಿ ಇಬ್ಬರು ವ್ಯಕ್ತಿಗಳು ಕಟ್ಟಿದ್ದ ನಾಯಿಗೆ ನಿರ್ದಯವಾಗಿ ಥಳಿಸಿದ್ದಾರೆ. ಇದರ ಸಿಸಿಟಿವಿ ದೃಶ್ಯವಾಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಹೈ ಸೆಕ್ಯುರಿಟಿ ಇದ್ದರೂ ಶ್ವೇತಭವನಕ್ಕೆ ಎಂಟ್ರಿ; ಟ್ರಂಪ್ ಮೇಲೆ ದಾಳಿ ಮಾಡಲು ಬಂದಿದ್ದ ವ್ಯಕ್ತಿ ಯಾರು?
ಇಬ್ಬರು ವ್ಯಕ್ತಿಗಳು ನಾಯಿಗೆ ಹೊಡೆಯುತ್ತಿದ್ದರೆ ಅದರ ನರಳಾಟ ಕೇಳಿ ಮಹಿಳೆಯರಿಬ್ಬರು ಓಡಿ ಬಂದು ತಡೆಯಲು ಯತ್ನಿಸಿದ್ದಾರೆ. ಬಳಿಕ ಅವರು ಹೊಡೆಯುವುದನ್ನು ನಿಲ್ಲಿಸಿದರು. ಸಾಕಷ್ಟು ಹೊಡೆತ ತಿಂದ ನಾಯಿ ಬಳಿಕ ನೆಲದ ಮೇಲೆ ಸುಮ್ಮನೆ ಮಲಗಿತ್ತು. ಗಂಭೀರವಾಗಿ ಗಾಯಗೊಂಡಿರುವ ನಾಯಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅದರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮುಂಜ್ಕಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು, ಒಬ್ಬರು ಮಾಲೀಕರು ಎಲ್ಲಿದ್ದಾರೆ? ನಾಯಿಯನ್ನು ಗೇಟ್‌ಗೆ ಏಕೆ ಕಟ್ಟಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಸಾಂಬಾರ್ ಮಾಡಿಲ್ಲ ಎಂದು ಅಪ್ಪ ಬೈದಿದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗಳು!
ನಟಿ ಮತ್ತು ಮಾಜಿ ಲೋಕಸಭಾ ಸದಸ್ಯೆ ಮಿಮಿ ಚಕ್ರವರ್ತಿ ಕೂಡ ಈ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದು, ನಾನು ಪೂರ್ಣ ವಿಡಿಯೋ ನೋಡಲು ಸಾಧ್ಯವಾಗಲಿಲ್ಲ. ಆ ಬಡ ಆತ್ಮಎಷ್ಟು ನೋವು ಅನುಭವಿಸಿದೆ ಎಂದು ಊಹಿಸಿ. ಮಾನವೀಯತೆಯೇ ಇಲ್ಲದವರು ಎಂದು ಹೇಳಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ನಾಯಿಯನ್ನು ಥಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.