Viral Video: ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ; ಇಲ್ಲಿದೆ ನೋಡಿ ಒಂದು ಶಾಕಿಂಗ್ ಸುದ್ದಿ!
ಚಾರ್ಜ್‍ಗಿಟ್ಟ ಮೋಟೋರೋಲಾ ಸ್ಮಾರ್ಟ್‌ಫೋನ್ ಸ್ಫೋಟಗೊಂಡ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಅದೃಷ್ಟವಶಾತ್, ಯಾವುದೇ ಸಾವುನೋವು ಸಂಭವಿಸಿಲ್ಲ. ಆದರೆ ಈ ಘಟನೆ ಸ್ಮಾರ್ಟ್‍ಫೋನ್ ಬಳಕೆದಾರರಲ್ಲಿ ಆತಂಕವನ್ನು ಉಂಟುಮಾಡಿದೆ.ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಶಿಮ್ಲಾ: ಸ್ಮಾರ್ಟ್‍ಫೋನ್‍ಗಳು (Smartphone) ಸ್ಪೋಟಗೊಂಡ ಘಟನೆ ಈ ಹಿಂದೆ ಹಲವು ವರದಿಯಾಗಿತ್ತು. ಇದೀಗ ಚಾರ್ಜ್‍ಗಿಟ್ಟ ಮೋಟೋರೋಲಾ ಸ್ಮಾರ್ಟ್‌ಫೋನ್ ಒಂದು ಸ್ಫೋಟಗೊಂಡ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಇದು ಸ್ಮಾರ್ಟ್‍ಫೋನ್ ಬಳಕೆದಾರರಲ್ಲಿ ಆತಂಕವನ್ನು ಉಂಟುಮಾಡಿದೆ. ಫೋನ್(Phone Blast) ಸ್ಫೋಟಗೊಂಡ ಶಬ್ದವು ಎಷ್ಟು ಜೋರಾಗಿತ್ತು ಎಂದರೆ ಬಾಂಬ್ ಸ್ಫೋಟದಂತೆ ಕೇಳಿಬಂದಿತ್ತು ಎನ್ನಲಾಗಿದೆ. ಅದೃಷ್ಟವಶಾತ್, ಆ ಸಮಯದಲ್ಲಿ ಫೋನ್ ಬಳಿ ಯಾರೂ ಇರಲಿಲ್ಲ, ಹಾಗಾಗಿ ಯಾವುದೇ ಸಾವುನೋವು ಸಂಭವಿಸಿಲ್ಲ.ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ಈ ಘಟನೆ ಸೋಲನ್ ಎಂಬ ಗ್ರಾಮದಲ್ಲಿ ನಡೆದಿದ್ದು, ಮೂರು ತಿಂಗಳ ಹಿಂದೆ ಸೋಲನ್ ನಿವಾಸಿಯೊಬ್ಬರು ಈ ದುಬಾರಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದ್ದಾರೆ. ನಂತರ ಅದನ್ನು ಚಾರ್ಜಿಂಗ್ ಹಾಕಿದ್ದಾಗ ಈ ದೊಡ್ಡ ಸ್ಫೋಟ ಸಂಭವಿದೆ. ಇದರ ಪರಿಣಾಮವಾಗಿ ಫೋನ್ ಸುಟ್ಟು ಕರಕಲಾಗಿದೆ. ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಫೋನ್‌ನ ಮಾಲೀಕರು ಅದಕ್ಕಾಗಿ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಮೊಟೊರೊಲಾ ಈ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.
ಇಂತಹ ಘಟನೆಯಿಂದಾಗಿ ಬ್ರಾಂಡೆಡ್ ಮತ್ತು ದುಬಾರಿ ಮೊಬೈಲ್‌ಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿದೆ. ಹಾಗಾಗಿ ಮೊಬೈಲ್ ಕಂಪನಿಗಳು ಹೇಳುವ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ಜನರು ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮೊಬೈಲ್ ಪೋನ್ ಸ್ಫೋಟಗೊಂಡ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಸನ್ವರ್ ಪ್ರದೇಶದ ಗರ್ಹಿ ಗ್ರಾಮದಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡು 16 ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ವರದಿಗಳ ಪ್ರಕಾರ, ಬಾಲಕಿ ಚಾರ್ಜ್ ಹಾಕಿಕೊಂಡು ಅದರಲ್ಲಿ ಮಾತನಾಡುತ್ತಿದ್ದಾಗ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಸ್ಫೋಟದ ಶಬ್ದ ಕೇಳಿ ಕುಟುಂಬ ಸದಸ್ಯರು ಕೋಣೆಗೆ ಓಡಿಬಂದಾಗ ಬಾಲಕಿ ತೀವ್ರವಾಗಿ ಸುಟ್ಟುಹೋಗಿರುವುದನ್ನು ಕಂಡು, ಆಕೆಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಆಕೆ ಸಾವನ್ನಪ್ಪಿದಳು.
ಈ ಸುದ್ದಿಯನ್ನೂ ಓದಿ:Viral Video: ಮಾವಿನ ಹಣ್ಣು ತುಂಬಿದ್ದ ಟ್ರಕ್ ಪಲ್ಟಿ; ಎದ್ನೋ ಬಿದ್ನೋ ಅಂತಾ ಓಡಿ ಬಂದ ಜನ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ
ತಜ್ಞರು ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ ಎಂಬುದಾಗಿ ತಿಳಿಸಿದ್ದಾರೆ. ಉದಾಹರಣೆಗೆ ಕಂಪನಿಯಿಂದ ಪ್ರಮಾಣೀಕರಿಸಲ್ಪಟ್ಟ ಚಾರ್ಜರ್ ಅನ್ನು ಮಾತ್ರ ಬಳಸುವುದು, ಚಾರ್ಜ್ ಮಾಡುವಾಗ ಫೋನ್ ಬಳಸದಿರುವುದು ಮತ್ತು ಫೋನ್ ತುಂಬಾ ಬಿಸಿಯಾಗುತ್ತಿದ್ದರೆ ಅದನ್ನು ತಕ್ಷಣವೇ ಚಾರ್ಜ್ ಮಾಡುವುದನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ.