ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ದಿನವನ್ನು ಖುಷಿಯಾಗಿರಿಸಲು ಈ ಸಣ್ಣ ಕ್ಷಣ ಸಾಕು": ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಗೆ ಫೋಟೊ ತೆಗೆಯಲು ನೆರವಾದ ಯುವಕ

Viral News: ನಮಗೆ ಖುಷಿ ಕೊಡುವ ಕೆಲವೊಂದು ಸಣ್ಣ ಘಟನೆಗಳು ಸ್ಮರಣೀಯವಾಗುತ್ತವೆ. ಯಾರೋ ಅಪರಿಚಿತರು ದಯೆ ತೋರಿದರು ಎಂದಾಗ ಮನಸ್ಸಿಗೆ ಆಗುವ ಆನಂದವೇ ಬೇರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಮೂಲದ ಯುವಕನೊಬ್ಬನ ಮಾನವೀಯ ಗುಣ ಗಮನ ಸೆಳೆದಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏರೋಬ್ರಿಡ್ಜ್‌ನಲ್ಲಿ ನಿಂತು ತಾವೇ ಫೋಟೋ ತೆಗೆಯಲು ಒದ್ದಾಡುತ್ತಿದ್ದರು. ಇದನ್ನು ಕಂಡ ಯುವಕ ನೆರವಾಗಿದ್ದಾನೆ.

ಮೊದಲ ಬಾರಿಗೆ ವಿಮಾನ ಪ್ರಯಾಣ: ವ್ಯಕ್ತಿಯ ಮೊಗದಲ್ಲಿ ನಗು ತರಿಸಿದ ಯುವಕ

ಮಧ್ಯ ವಯಸ್ಕ ವ್ಯಕ್ತಿಯ ಫೋಟೊ ಕ್ಲಿಕ್ಕಿಸಿದ ಯುವಕ -

Profile
Pushpa Kumari Jul 20, 2026 9:07 PM

ನವದೆಹಲಿ, ಜು. 20: ದಿನ ನಿತ್ಯ ಜೀವನದಲ್ಲಿ ನಮಗೆ ಖುಷಿ ಕೊಡುವ ಕೆಲವೊಂದು ಸಣ್ಣ ಘಟನೆಗಳು (Viral News) ಸ್ಮರಣೀಯವಾಗಿರುತ್ತವೆ. ಯಾರೋ ಅಪರಿಚಿತರು ದಯೆ ತೋರಿದರು ಎಂದಾಗ ಮನಸ್ಸಿಗೆ ಆಗುವ ಆನಂದವೇ ಬೇರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಮೂಲದ ಯುವಕನೊಬ್ಬನ ಮಾನವೀಯ ಗುಣಕ್ಕೆ ಎಲ್ಲರೂ ತಲೆತೂಗುವಂತಾಗಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏರೋಬ್ರಿಡ್ಜ್‌ನಲ್ಲಿ ನಿಂತು ತಾವೇ ಫೋಟೊ ತೆಗೆಯಲು ಒದ್ದಾಡುತ್ತಿದ್ದರು. ಇದನ್ನು ಕಂಡ ಯುವಕ ನೆರವಾಗಿದ್ದಾನೆ.

ಮೊದಲ ಬಾರಿಗೆ ವಿಮಾನ ಪ್ರಯಾಣ ಅಂದಾಗ ಈ ಅನುಭವವನ್ನು ಸೆರೆಹಿಡಿಯಲು ಬಯಸುತ್ತೇವೆ. ಆದೇ ರೀತಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತನ್ನ ಮೊದಲ ವಿಮಾನವನ್ನು ಹತ್ತುತ್ತಿದ್ದ ವ್ಯಕ್ತಿಯೊಬ್ಬರ ಖುಷಿಯ ಕ್ಷಣ ವೈರಲ್ ಆಗಿದೆ. ಇದು ಅವರ ಅನುಭವಕ್ಕಾಗಿ ಅಲ್ಲ, ಬದಲಾಗಿ ಅಪರಿಚಿತನೊಬ್ಬ ಮಾಡಿದ ಸಣ್ಣಸಹಾಯಕ್ಕಾಗಿ. ವಯಸ್ಸಾದ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್‌ನಲ್ಲಿ ಫೋಟೊ ಕ್ಲಿಕ್ಕಿಸಲು ಪರದಾಡುತ್ತಿದ್ದಾಗ ಯುವಕ ಸಹಾಯ ಮಾಡಿದ್ದಾರೆ.

ವಿಡಿಯೊ ನೋಡಿ:

ದೆಹಲಿ ವಿಮಾನ ನಿಲ್ದಾಣದ ಏರೋಬ್ರಿಡ್ಜ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಆ ಮಧ್ಯ ವಯಸ್ಕ ವ್ಯಕ್ತಿ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಅಪರಿಚಿತ ಯುವಕ ಫೋಟೊ ತೆಗೆಯಲು ಮುಂದಾಗಿದ್ದಾನೆ. ʼʼಅಂಕಲ್, ಮೊಬೈಲ್ ನನಗೆ ಕೊಡಿ. ನಾನು ಫೋಟೊ ತೆಗೆಯುತ್ತೇನೆʼʼ ಎಂದಿದ್ದಾನೆ. ಆ ವ್ಯಕ್ತಿ ಸಂತೋಷದಿಂದ ಫೋನ್ ಹಸ್ತಾಂತರಿಸಿ ಏರೋಬ್ರಿಡ್ಜ್‌ನ ಒಂದು ಬದಿಯಲ್ಲಿ ನಿಂತು ಪೋಸ್ ನೀಡಿದ್ದಾರೆ. ಯುವಕ ಆ ವ್ಯಕ್ತಿಯ ಸುಂದರ ಫೋಟೊ ಸೆರೆ ಹಿಡಿದಿದ್ದಾನೆ.

ಹಿಂದೂ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ಕಲ್ಮಾ ಕಲಿಯಲು ಹೋಮ್‌ವರ್ಕ್ ಕೊಟ್ಟ ಶಿಕ್ಷಕಿ

ಈ ಮಾನವೀಯತೆ ಮೆರೆದ ಯುವಕನನ್ನು ಬೆಂಗಳೂರು ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹಾಗೂ ರೈಡರ್ ರಯಾಜ್ ಎಂದು ಗುರುತಿಸಲಾಗಿದೆ. "ಇತರರ ಮುಖದಲ್ಲಿನ ನಗುವಿಗೆ ಕಾರಣರಾಗಿರಿ. ಒಂದು ಸಣ್ಣ ದಯೆಯು ಯಾವುದೇ ವಯಸ್ಸಿನ ಜನರನ್ನು ನಗುವಂತೆ ಮಾಡುತ್ತದೆ" ಎಂದು ವಿಡಿಯೊಕ್ಕೆ ಶೀರ್ಷಿಕೆ ನೀಡಲಾಗಿದೆ. ​ಈ ಹೃದಯಸ್ಪರ್ಶಿ ದೃಶ್ಯ ವೈರಲ್ ಆಗುತ್ತಿದ್ದಂತೆ ಲಕ್ಷಾಂತರ ನೆಟ್ಟಿಗರು ಕಮೆಂಟ್ ಮಾಡಿ ಯುವಕನನ್ನು ಶ್ಲಾಘಿಸಿದ್ದಾರೆ. ಒಬ್ಬರು, "ಇಂತಹ ಹೃದಯವಂತರು ಇರುವುದು ಅಪರೂಪ" ಎಂದು ಬರೆದಿದ್ದಾರೆ. ಮತ್ತೊಬ್ಬರು "ಇಂತಹ ಸಣ್ಣ ವಿಷಯಗಳು ಯಾರನ್ನಾದರೂ ನಿಜವಾಗಿಯೂ ಸಂತೋಷಪಡಿಸುತ್ತವೆʼʼ ಎಂದಿದ್ದಾರೆ.