ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ನಾಲ್ವರು ಪೊಲೀಸರು; ವೈರಲ್ ವಿಡಿಯೊ ಹೊರಬಂದ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ
Viral Video: ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಲು ಸಾರಿಗೆ ಇಲಾಖೆ ಟ್ರಾಫಿಕ್ ರೂಲ್ಸ್ ಜಾರಿ ಮಾಡಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ದಂಡವನ್ನು ವಿಧಿಸಲಾಗುತ್ತದೆ. ಆದರೆ ಇಂತಹ ಕಾನೂನುಗಳನ್ನು ತರುವ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿದ ಘಟನೆಯೊಂದು ನಡಿದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ನಾಲ್ವರು ಪೊಲೀಸ್ ಸಿಬ್ಬಂದಿ ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಹೆಲ್ಮೆಟ್ ಇಲ್ಲದೆ ಒಂದೇ ಬೈಕ್‌ನಲ್ಲಿ ನಾಲ್ವರು ಪೊಲೀಸರ ಪ್ರಯಾಣ -
ಪಾಟ್ನಾ, ಜು. 20: ರಸ್ತೆ ಅಪಘಾತಗಳನ್ನು ತಡೆಯಲು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಲು ಸಾರಿಗೆ ಇಲಾಖೆ ಟ್ರಾಫಿಕ್ ರೂಲ್ಸ್ ಜಾರಿ ಮಾಡಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಬೇಕಾಗುತ್ತದೆ. ಆದರೆ ಇಂತಹ ಕಾನೂನುಗಳನ್ನು ತರಬೇಕಾದ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿದ ಘಟನೆಯೊಂದು ನಡೆದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಪೊಲೀಸ್ ಸಿಬ್ಬಂದಿ ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ (Viral News) ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಜನಸಾಮಾನ್ಯರಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನಿಯಮವೇ? ಕರ್ತವ್ಯದಲ್ಲಿದ್ದ ಪೊಲೀಸರೆ ಈ ಕೃತ್ಯ ಎಸಗಿದರೆ ಹೇಗೆ? ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದೇ ಬೈಕ್‌ನಲ್ಲಿ ನಾಲ್ವರು ಪೊಲೀಸರು ಸವಾರಿ ಮಾಡುತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ವಿಡಿಯೊ ನೋಡಿ:
ಈ ಆಘಾತಕಾರಿ ವಿಡಿಯೊವನ್ನು ಜನನಿಬಿಡ ರಸ್ತೆಯಲ್ಲಿ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ್ದಾರೆ. ಬೈಕ್ ಚಲಾಯಿಸುತ್ತಿರವವರೊಬ್ಬರು ಬಿಟ್ಟರೆ ಮಿಕ್ಕ ಮೂವರು ಹೆಲ್ಮೆಟ್ ಧರಿಸಿಲ್ಲ. ಅದರಲ್ಲೂ ಒಂದೇ ಬೈಕ್‌ನಲ್ಲಿ ನಾಲ್ಕು ಜನ ಕುಳಿತುಕೊಂಡಿರುವುದು ಅಪಾಯಕಾರಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್ ಕಾರ್ ತಳ್ಳಿದ ಸೈನಿಕ
ಈ ಕ್ಲಿಪ್ ಅನ್ನು "ಬಿಹಾರದ ಒಂದೇ ಬೈಕ್‌ನಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ, ನಿಯಮಗಳು ಎಲ್ಲರಿಗೂ ಒಂದೇ ಆಗಿವೆಯೇ? ಈ ಬೈಕ್‌ಗೆ ದಂಡ ವಿಧಿಸಲಾಗುತ್ತದೆಯೇ?" ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಲಾಗಿದೆ. ಹಾಳಾದ ರಸ್ತೆಯ ನಡುವೆಯೂ ನಾಲ್ಕು ಜನ ಪೊಲೀಸರು ಪ್ರಯಾಣ ಮಾಡಿದ್ದಾರೆ. ತಮ್ಮ ಪ್ರಾಣವನ್ನಷ್ಟೇ ಅಲ್ಲದೆ ಇತರರ ಸುರಕ್ಷತೆಗೂ ಅಡ್ಡಿಪಡಿಸಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಒಬ್ಬರು ವ್ಯಂಗ್ಯವಾಡುತ್ತಾ, "ಅವರನ್ನು ಯಾರು ತಡೆಯಲಿದ್ದಾರೆ? ಇಡೀ ಸಂಚಾರ ಇಲಾಖೆಯ ತಂಡ ಈಗಾಗಲೇ ಬೈಕ್‌ನಲ್ಲಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು "ಸಂಚಾರಿ ನಿಯಮಗಳು ಸಾರ್ವಜನಿಕರಿಗೆ ಮಾತ್ರ ಇರಬಹುದು" ಎಂದು ವ್ಯಂಗ್ಯವಾಡಿದ್ದಾರೆ.