ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಫೀಸ್ ಕಟ್ಟಲು ಕೆಲಸ ಬೇಕು, ಕೆಲಸ ಮಾಡಲು ಕಾಲೇಜು ಹೋಗ್ಲೇಬೇಕು": ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಎದುರಾಯ್ತು ಸವಾಲು

Viral News: ಕಲಿಕೆಯ ಹಂಬಲದ ನಡುವೆ ವಿದ್ಯಾರ್ಥಿಯೊಬ್ಬಳು ಶಿಕ್ಷಣ ಮತ್ತು ಉದ್ಯೋಗ ಎರಡನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುವುದನ್ನು ತಿಳಿಸಿದ್ದಾಳೆ. ಕೆನಡಾಕ್ಕೆ ಹೋಗಿ ಕೆಲಸ ಮಾಡುವ, ಹೊಸ ದೇಶದಲ್ಲಿ ತಮ್ಮ ಅತ್ಯುತ್ತಮ ಜೀವನವನ್ನು ನಡೆಸುವ ಕನಸು ಯಾರು ಹೊಂದಿರುವುದಿಲ್ಲ? ಹೇಳಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿ ಜ್ಯೋತಿ ಖರಾಯತ್ ವಿದೇಶದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾಳೆ.

ಕೆಲಸ-ಶಿಕ್ಷಣ ನಡುವೆ ಭಾರತೀಯ ವಿದ್ಯಾರ್ಥಿನಿಗೆ ಎದುರಾಯ್ತು ಸವಾಲು

ಕೆನಡಾದಲ್ಲಿನ ಭಾರತೀಯ ವಿದ್ಯಾರ್ಥಿನಿ ಜ್ಯೋತಿ -

Profile
Pushpa Kumari Apr 27, 2026 7:14 PM

ಒಟ್ಟಾವ, ಏ. 27: ಶಿಕ್ಷಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಪೋಷಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ಶಾಲಾ ಶುಲ್ಕ, ಪರೀಕ್ಷೆ ಶುಲ್ಕ ಎಂದು ಮದ್ಯಮ ವರ್ಗದ ಜನರಿಗೆ ದೊಡ್ಡ ತಲೆನೋವು ಎದುರಾಗಿದೆ. ಕಲಿಕೆಯ ಹಂಬಲದ ನಡುವೆ ವಿದ್ಯಾರ್ಥಿಯೊಬ್ಬಳು ಶಿಕ್ಷಣ ಮತ್ತು ಉದ್ಯೋಗ ಎರಡನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುವುದನ್ನು ತಿಳಿಸಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ (Viral News) ವಿದ್ಯಾರ್ಥಿನಿ ಜ್ಯೋತಿ ಖರಾಯತ್ ವಿದೇಶದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾಳೆ.

ವಿದೇಶದಲ್ಲಿ ಶಿಕ್ಷಣ ಪಡೆಯಬೇಕು, ಉದ್ಯೋಗ ಗಳಿಸಬೇಕು ಎನ್ನುವ ಕನಸು ಹೆಚ್ಚಿನವರಿಗೆ ಇರುತ್ತದೆ. ಕೆನಡಾ ಡ್ರೀಮ್ ಹಿಂದಿರುವ ಕಠಿಣ ಶ್ರಮದ ಬಗ್ಗೆ ಜ್ಯೋತಿ ತನ್ನ ಅನುಭವ ಶೇರ್ ಮಾಡಿದ್ದಾರೆ. ʼʼದಿನ ನಿತ್ಯದ ಜೀವನದಲ್ಲಿ ಪಡುತ್ತಿರುವ ಕಷ್ಟ, ಸವಾಲುಗಳು ಹಲವು. ನಾನೊಂದು ಸುಳಿಯಲ್ಲಿ ಸಿಲುಕಿ ಕೊಂಡಿದ್ದು ನನಗೆ ಶಾಲೆಗೆ ಹೋಗಲು ಫೀಸ್ ಕಟ್ಟಬೇಕು‌. ಆ ಫೀಸ್ ಕಟ್ಟಲು ಕೆಲಸ ಮಾಡಲೇಬೇಕುʼʼ ಎಂದು ಹೇಳಿದ್ದಾರೆ‌.

ವಿಡಿಯೊ ನೋಡಿ:

ʼʼಬೆಳಗ್ಗೆ ಬೇಗ ಎದ್ದು ಕಾಲೇಜಿಗೆ ಹೋಗಬೇಕು. ಕಾಲೇಜು ಮುಗಿಸಿದ ತಕ್ಷಣ ಸ್ಟಾರ್ ಬಕ್ಸ್ ಕೆಫೆಯಲ್ಲಿ ಕೆಲಸಕ್ಕೆ ಜಾಯಿನ್ ಆಗಬೇಕು. ಸ್ವಲ್ಪ ಹೊತ್ತು ನಿದ್ದೆ ಮಾಡಿ ಮತ್ತೆ ಕಾಲೇಜಿಗೆ ಹೋಗಬೇಕುʼʼ ಎಂದು ದಿನ ನಿತ್ಯದ ಸವಾಲುಗಳ ಬಗ್ಗೆ ಹೇಳಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿ ಹಂಚಿಕೊಂಡಿರುವ ವಿಡಿಯೊ ಈಗ ಲಕ್ಷಾಂತರ ಜನರ ಗಮನ ಸೆಳೆದಿದ್ದು ವಿದೇಶದಲ್ಲೂ ದಿನಚರಿ ಕಷ್ಟ ಇದೆ ಎಂಬುದನ್ನು ವಿವರಿಸಿದ್ದಾರೆ.

ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಇಷ್ಟೆಲ್ಲ ಕಷ್ಟದ ನಡುವೆಯೂ ವಿಡಿಯೊದ ಕೊನೆಯಲ್ಲಿ ಆಕೆ ತಾನು ಇಲ್ಲಿ ಸಂತೋಷ ವಾಗಿದ್ದೇನೆ ಎಂದು ಹೇಳಿದ್ದಾಳೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು, ʼʼನಿಮ್ಮ ಶ್ರಮಕ್ಕೆ ಮೆಚ್ಚಲೇ ಬೇಕುʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು "ನಮಗೆಲ್ಲರಿಗೂ ನೀವು ಪ್ರೇರಣೆ'' ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.