Viral Video: ಅಜ್ಜಿಯ ಆಸೆ ಈಡೇರಿಸಲು ವಧುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮೊಮ್ಮಗ; ವಿಡಿಯೊ ನೋಡಿ
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ವರನೊಬ್ಬ ತನ್ನ ವಧುವನ್ನು ಹೆಲಿಕಾಪ್ಟರ್ ಮೂಲಕ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ವರನು ಅಜ್ಜಿಯ ಆಸೆಯನ್ನು ಪೂರೈಸಲು ಈ ವ್ಯವಸ್ಥೆ ಮಾಡಿದ್ದಾನೆ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.


ಲಖನೌ: ಸಾಮಾನ್ಯವಾಗಿ ವಧುವನ್ನು ಗಂಡನ ಮನೆಗೆ ಕಾರಿನಲ್ಲಿ, ಬೈಕ್‌ನಲ್ಲಿ, ಕುದುರೆ ಗಾಡಿಯಲ್ಲಿ ಕರೆತರುವುದನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ವರನೊಬ್ಬ ಪತ್ನಿಯನ್ನು ಹೆಲಿಕಾಪ್ಟರ್ ಮೂಲಕ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ವಧು ಹೆಲಿಕಾಪ್ಟರ್ ಮೂಲಕ ಅತ್ತೆ-ಮಾವನ ಮನೆಗೆ ಬಂದಿದ್ದಾಳೆ. ಇದನ್ನು ನೋಡಲು ಜನ ಸಮೂಹವೇ ಅಲ್ಲಿ ಜಮಾಯಿಸಿತ್ತು. ಮನೆಯ ಸೊಸೆ ತನ್ನ ಅತ್ತೆ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬರಬೇಕೆಂದು ವರನ ಅಜ್ಜಿ ಬಯಸಿದ್ದಳಂತೆ. ಹಾಗಾಗಿ ಮೊಮ್ಮಗನು ಅಜ್ಜಿಯ ಆಸೆಯನ್ನು ಪೂರೈಸಲು ಈ ವ್ಯವಸ್ಥೆ ಮಾಡಿದ್ದಾನೆ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಮದುವೆಯ ನಂತರ, ವರ ತನ್ನ ಹೆಂಡತಿಯೊಂದಿಗೆ ಹೆಲಿಕಾಪ್ಟರ್ ಮೂಲಕ ತನ್ನ ಮನೆಗೆ ಬರುವುದು ಸೆರೆಯಾಗಿದೆ. ಮಿರ್ಜಾಪುರದ ಅಕ್ಸೋಲಿ ಗ್ರಾಮದ ನಿವಾಸಿ ರೋಹಿತ್ ದುಬೆ ಉಸ್ರಿ ಖಮಾರಿಯಾ ಗ್ರಾಮದ ಪ್ರಿಯಾ ತಿವಾರಿಯನ್ನು ವಿವಾಹವಾಗಿದ್ದ. ಮದುವೆಯ ನಂತರ, ವಧುವನ್ನು ಹೆಲಿಕಾಪ್ಟರ್ ಮೂಲಕ ತನ್ನ ಮನೆಗೆ ಕರೆದುಕೊಂಡು ಬಂದಿದ್ದ.
ವಿಡಿಯೊ ಇಲ್ಲಿದೆ ನೋಡಿ...
#मिर्ज़ापुर:दुल्हन को दिलाया महारानी वाला फील,हेलीकॉप्टर से उड़ाकर ले आया दूल्हा, देखने उमड़ी भीड़
— NEWSNOWLIVE (@newsnowlivee) May 6, 2025
> लालगंज क्षेत्र के उसरी खमरिया गांव में अनोखी शादी देखने को मिली है
> शादी में सबकुछ धूमधाम से हुआ,लेकिन विदाई के समय तो दूल्हे ने सबको चौंका दिया
> दुल्हे ने अपनी दुल्हन की… pic.twitter.com/YKLekGIJoA
ವಧುವನ್ನು ಹೆಲಿಕಾಪ್ಟರ್ ಮೂಲಕ ಗಂಡನ ಮನೆಗೆ ಕರೆತಂದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಝಾನ್ಸಿಯ ಚಿರ್ಗಾಂವ್ ಗ್ರಾಮದಲ್ಲಿ ರೈತ ಕುಟುಂಬದಿಂದ ಬಂದ ಯುವಕ ಅಭಿಷೇಕ್ ಯಾದವ್ ತನ್ನ ವಧು ಜ್ಯೋತಿಯನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಕರೆತಂದಿದ್ದ.
ಈ ಸುದ್ದಿಯನ್ನೂ ಓದಿ:Viral Video: ಭಾರತದಲ್ಲಿ ರೈಲು ಪ್ರಯಾಣ ನಂತರ ಅಮೆರಿಕ ಪ್ರವಾಸಿಗನಿಗೆ ಆಗಿದ್ದೇನು? ಈತ ಬದುಕುಳಿದ್ದಿದ್ದೇ ಪವಾಡ ಅಂತೆ!
ನಗರದಿಂದ 32 ಕಿ.ಮೀ. ದೂರದಲ್ಲಿರುವ ಚಿರ್ಗಾಂವ್ ನಿವಾಸಿ ದೀಪ್ ಚಂದ್ರ ಯಾದವ್ ಒಬ್ಬ ಶ್ರೀಮಂತ ರೈತನಾಗಿದ್ದು, ಅಭಿಷೇಕ್ ಯಾದವ್ ಅವನ ಏಕೈಕ ಪುತ್ರ. ಹಾಗಾಗಿ ಅಭಿಷೇಕ್ ವಿವಾಹವು ರಾಜಮನೆತನದ ಶೈಲಿಯಲ್ಲಿ ನಡೆಯಬೇಕೆಂದು ಇಡೀ ಕುಟುಂಬ ಬಯಸಿತ್ತು. ದೀಪ್ ಚಂದ್ರ ಯಾದವ್ ಚಿರ್ಗಾಂವ್ ಬಳಿಯ ಪಾರ್ಸಾ ಗ್ರಾಮದಲ್ಲಿ ತಮ್ಮ ಮಗನ ಮದುವೆಯನ್ನು ವ್ಯವಸ್ಥೆ ಮಾಡಿದ್ದರು. ಮದುವೆ ಬಳಿಕ ಅಭಿಷೇಕ್ ತನ್ನ ವಧುವನ್ನು ಹೆಲಿಕಾಪ್ಟರ್‌ನಿಂದ ಝಾನ್ಸಿಯ ಚಿರ್ಗಾಂವ್‍ಗೆ ಕರೆಕೊಂಡು ಬಂದಿದ್ದ.