Viral Video: ಮಕ್ಕಳ ಕೈಯಲ್ಲಿ ಎಸ್‌ಯುವಿ ಕಾರು; ಕೊನೆಗೆ ಆದ ಆವಾಂತರವೇನು ನೋಡಿ
ಹರಿಯಾಣದಲ್ಲಿ ಕಿರಿದಾದ ರಸ್ತೆಯಲ್ಲಿ ಮಕ್ಕಳು ಎಸ್‌ಯುವಿ ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿ ರಸ್ತೆಯಲ್ಲಿ ನಡೆದುಹೋಗುತ್ತಿದ್ದವರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ಈ ಆಘಾತಕಾರಿ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರಲ್ಲಿ ತೀವ್ರ ಕಳವಳವನ್ನು ಹುಟ್ಟುಹಾಕಿದೆ.


ಚಂಡೀಗಢ: ಹರಿಯಾಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕಿರಿದಾದ ರಸ್ತೆಯಲ್ಲಿ ಮಕ್ಕಳು ಎಸ್‌ಯುವಿ ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿ ಜನರಲ್ಲಿ ಆತಂಕವನ್ನು ಸೃಷ್ಟಿಸಿದ್ದಾರೆ. ಹದಿಹರೆಯದ ಬಾಲಕನೊಬ್ಬ ಕಾರನ್ನು ಚಲಾಯಿಸಿದ್ದು, ಆದರೆ ಆತ ನಿಯಂತ್ರಣ ಕಳೆದುಕೊಂಡಿದ್ದರಿಂದ ಕಾರು ಒಂದು ಲೇನ್‌ನ ಕೊನೆಗೆ ಬರುವವರೆಗೂ ಹಲವಾರು ಬೈಕ್‌ಗಳಿಗೆ ಡಿಕ್ಕಿ ಹೊಡೆದು ತೊಂದರೆ ಉಂಟು ಮಾಡಿದೆ. ಈ ಆಘಾತಕಾರಿ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಮಕ್ಕಳ ಸುರಕ್ಷತೆ ಮತ್ತು ಪೋಷಕರ ನಿರ್ಲ್ಯಕ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಸ್ತೆ ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಆಘಾತಕಾರಿ ವಿಡಿಯೊದಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ಎಸ್‌ಯುವಿ ಕಾರು ಸಡನ್ ಆಗಿ ಜನನಿಬಿಡ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬರುತ್ತಿರುವುದು ಸೆರೆಯಾಗಿದೆ. ಕಾರು ಮೊದಲು ಅಪಾಯಕಾರಿಯಾಗಿ ಚಲಿಸುತ್ತ ಅದು ಬೈಕಿನಲ್ಲಿದ್ದ ವ್ಯಕ್ತಿಯ ಕಡೆಗೆ ಬಂದಿದೆ. ಆಗ ಅವನು ಪಕ್ಕಕ್ಕೆ ಸರಿದು ಅದರಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ. ನಂತರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೊಬ್ಬನ ಕಡೆಗೆ ಬಂದಾಗ ಬಾಲಕ ಕೂಡಲೇ ಮನೆಯೊಳಗೆ ಹೋಗಿ ಅವಘಡದಿಂದ ಪಾರಾಗಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
हरियाणा में बच्चों ने चलाई वेन्यू कार
— The News Basket (@thenewsbasket) July 18, 2025
तबाही मचा के रख दी pic.twitter.com/JMCFdJ2EVe
ಎರಡನೇ ದೃಶ್ಯದಲ್ಲಿ ಇಬ್ಬರು ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಾರು ಬರುವುದನ್ನು ಕಂಡು ಅಲ್ಲಿಂದ ಓಡಿ ಹೋದರು. ಕೊನೆಗೆ ಕಾರು ರಸ್ತೆಯ ಕೊನೆಯಲ್ಲಿ ಬಂದು ನಿಂತಿದೆ. ಕಾರಿನಲ್ಲಿದ್ದ ಮಕ್ಕಳು ತಕ್ಷಣ ಕಾರಿನಿಂದ ಇಳಿದಿದ್ದಾರೆ.
ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. ಮಕ್ಕಳಿಗೆ ಕಾರಿನ ಕೀ ಹೇಗೆ ಸಿಕ್ಕಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಘಟನೆಯಿಂದ ರಸ್ತೆಯಲ್ಲಿದ್ದ ವಾಹನಗಳಿಗೆ ದೊಡ್ಡ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ... ಏನಿದು ಇಂಟ್ರೆಸ್ಟಿಂಗ್ ಕಹಾನಿ?
ಈ ಹಿಂದೆ ರಾಜಸ್ಥಾನದ ಬೀದಿಯಲ್ಲಿ ನಡೆದ ಆಘಾತಕಾರಿ ಘಟನೆಯ ವಿಡಿಯೊವೊಂದು ನೆಟ್ಟಿಗರನ್ನು ಬೆರಗುಗೊಳಿಸಿತ್ತು . ಇಬ್ಬರು ಶಾಲಾ ಮಕ್ಕಳು ಸಾರ್ವಜನಿಕ ರಸ್ತೆಯಲ್ಲಿ ಕಾರು ಚಲಾಯಿಸುತ್ತಿರುವುದು ಕಂಡುಬಂದಿತ್ತು. ವೈರಲ್ ಆಗಿರುವ ವಿಡಿಯೊದಲ್ಲಿ ಮಕ್ಕಳು ಶಾಲಾ ಸಮವಸ್ತ್ರದಲ್ಲಿ, ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಅದಕ್ಕೆ ಆ್ಯಕ್ಷನ್ ಮಾಡುತ್ತ ಕಾರು ಚಲಾಯಿಸಿದ್ದರು. ಪ್ರಯಾಣಿಕರ ಸೀಟಿನಲ್ಲಿ ಕುಳಿತಿರುವ ಹುಡುಗನೊಬ್ಬ ಫೋನ್ ಕ್ಯಾಮೆರಾವನ್ನು ಹಿಡಿದುಕೊಂಡು ವಿಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದರೆ, ಚಾಲಕನ ಸೀಟಿನಲ್ಲಿ ಕುಳಿತಿರುವ ಹುಡುಗ ಕ್ಯಾಮೆರಾವನ್ನು ನೋಡುತ್ತಾ ಡ್ರೈವ್ ಮಾಡಿದ್ದಾನೆ.