ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಅಬ್ಬಾ... ಈತ ಅತಿ ಉದ್ದದ ಗಲ್ಲ ಹೊಂದಿರುವ ವ್ಯಕ್ತಿಯಂತೆ; ವಿಡಿಯೊ ಫುಲ್‌ ವೈರಲ್

ಜಪಾನ್‌ನ ಜೊನೌಚಿ ಎಂಬ ಯುವಕ ತನ್ನ ವಿಶಿಷ್ಟ ಮುಖಚಹರೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅವನು ಉದ್ದವಾದ ಗಲ್ಲವನ್ನು ಹೊಂದಿದ್ದು, ಹಾಗಾಗಿ ತನ್ನನ್ನು 'ಅತ್ಯಂತ ಉದ್ದನೆಯ ಗಲ್ಲದ ಯೂಟ್ಯೂಬರ್' ಎಂದು ಹೇಳಿಕೊಂಡಿದ್ದಾನೆ. ಇವನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಎಲ್ಲರ ಗಮನ ಸೆಳೆಯುತ್ತಿದೆ.

ಇವನ ಗಲ್ಲ ನೋಡಿದ್ರೆ ನೀವು ಶಾಕ್‌ ಆಗ್ತೀರಿ! ವಿಡಿಯೊ ನೋಡಿ

Profile pavithra Jul 17, 2025 1:12 PM

ಟೊಕಿಯೊ: ಈಗಂತೂ ಸೋಶಿಯಲ್‌ ಮೀಡಿಯಾದ ಜಮಾನ! ಸೋಶಿಯಲ್‌ ಮೀಡಿಯಾ ತೆರೆದರೆ ದಿನಕ್ಕೆ ನೂರಾರು ರೀಲ್ಸ್‌ಗಳು ಕಣ್ಮುಂದೆ ಬರುತ್ತವೆ. ಲೈಕ್ಸ್‌ ಹಾಗೂ ವ್ಯೂವ್ಸ್‌ಗಾಗಿ ಜನ ಕೂಡ ಏನೇನೋ ಸರ್ಕಸ್‌ ಮಾಡುತ್ತಿರುತ್ತಾರೆ. ಇದೀಗ ಜಪಾನ್‌ನ ವ್ಯಕ್ತಿಯೊಬ್ಬನ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.ಏನಿದು ವಿಡಿಯೊ ಎಂದು ಆಶ್ಚರ್ಯಪಡುತ್ತಿದ್ದೀರಾ...? ಹೌದು ಜಪಾನ್‌ನ ಈ ವ್ಯಕ್ತಿಯು ತನ್ನ ಉದ್ದನೆಯ ಗಲ್ಲದ ಕಾರಣದಿಂದ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದ್ದಾನೆ.ಇವನ ಗಲ್ಲವು ಸಾಮಾನ್ಯ ಜನರಿಗೆ ಹೋಲಿಸಿದರೆ ತುಂಬಾ ಉದ್ದವಾಗಿದೆ.

ಜಪಾನ್‌ನ ಜೊನೌಚಿ ಎಂಬ ಈ ಯುವಕ ತನ್ನ ವಿಶಿಷ್ಟ ಮುಖಚಹರೆಯನ್ನು ಹೆಮ್ಮೆಯಿಂದ ಪ್ರದರ್ಶಿಸಿ'ಅತ್ಯಂತ ಉದ್ದನೆಯ ಗಲ್ಲದ ಯೂಟ್ಯೂಬರ್' ಎಂದು ಹೇಳಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಟಿಕ್‌ಟಾಕ್‌ನಲ್ಲಿ ಈ ವ್ಯಕ್ತಿಗೆ 4 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಯೂಟ್ಯೂಬ್‌ನಲ್ಲಿ 3.47 ಲಕ್ಷ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 55,000 ಫಾಲೋವರ್‌ಗಳಿದ್ದಾರೆ.

ಆಶ್ಚರ್ಯಕರವೆಂದರೆ ಅವನ ಕುಟುಂಬದಲ್ಲಿ ಯಾರಿಗೂ ಸಹ ಈ ವಿಶಿಷ್ಟ ಮುಖಲಕ್ಷಣವಿಲ್ಲ ಮತ್ತು ಅವನ ಬಾಲ್ಯದ ಫೋಟೋಗಳಲ್ಲಿ ಕಂಡುಬಂದಂತೆ ಸುಮಾರು 10 ವರ್ಷ ವಯಸ್ಸಿನವರೆಗೆ ಅವನ ಗಲ್ಲವು ಸಾಮಾನ್ಯವಾಗಿ ಕಾಣುತ್ತಿತ್ತು. ಅವನಿಗೆ ಬಾಲ್ಯದಲ್ಲಿ, "ಗಲ್ಲ" ಎಂದು ಅಡ್ಡಹೆಸರಿನಿಂದ ಕರೆಯಲಾಗಿತ್ತು. ಆದರೆ ಎತ್ತರವಾಗಿ ಬೆಳೆಯುತ್ತಿದ್ದಾಗ, ಅವನ ಗಲ್ಲವು ಅಸಾಧಾರಣವಾಗಿ ಉದ್ದವಾಯಿತಂತೆ.

ವೈದ್ಯರು ಅವನಿಗೆ ದವಡೆ ಮುಂಚಾಚುವಿಕೆಯ ರೋಗವಿದೆ ಎಂದು ಹೇಳಿದ್ದಾರೆ. ಆದರೆ ಈ ರೋಗಕ್ಕೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಹಾಗಾಗಿ ಅವನು ವೈದ್ಯಕೀಯ ಸಲಹೆ ಪಡೆದು ದಂತ ಆಸ್ಪತ್ರೆಯಲ್ಲಿ ಎಕ್ಸ್-ರೇಗೆ ಒಳಗಾದಾಗ, ವೈದ್ಯರು ತುಂಬಾ ಆಘಾತಕ್ಕೊಳಗಾದರು ಮತ್ತು "ಇಂತಹ ಗಲ್ಲವನ್ನು ಎಂದಿಗೂ ನೋಡಿಲ್ಲ" ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಎಕ್ಸ್-ರೇಗಳಲ್ಲಿ ಅಸಹಜ ಮೂಳೆ ರಚನೆಗಳು ಕಂಡುಬಂದಿವೆ. ಆದರೆ ತಳಿಶಾಸ್ತ್ರ ಅಥವಾ ಅತಿಯಾದ ಕ್ಯಾಲ್ಸಿಯಂ ಇರುವ ಹಾಲಿನಂತಹ ಪದಾರ್ಥಗಳನ್ನು ಸೇವಿಸಿ ಹೀಗಾಗಿದೆ ಎಂಬುದನ್ನು ವೈದ್ಯರು ತಳ್ಳಿಹಾಕಿದ್ದಾರೆ.

ಆದರೆ ಆತ ತನ್ನ ಉದ್ದನೆಯ ಗಲ್ಲದ ಕಾರಣದಿಂದಾಗಿ ಲವ್‍ ವಿಚಾರದಲ್ಲಿ ಆತ ರಿಜೆಕ್ಟ್‌ ಆಗಿದ್ದನು ಅವನು ಈಗ ತನ್ನ ಅಸಾಮಾನ್ಯ ವೈಶಿಷ್ಟ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಜೋಕ್‌ಗಳನ್ನು ಹಂಚಿಕೊಳ್ಳಲು ಮತ್ತು ಜನರು ಎಷ್ಟು ಆತ್ಮವಿಶ್ವಾಸದಿಂದಿರಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ಬಳಸುತ್ತಾನೆ. ಹಾಗೇ ಅವನಿಗೆ ತನ್ನ ನೋಟದ
ಬಗ್ಗೆ ಹೆಮ್ಮೆಯಿದೆ. ತಮಾಷೆಯ ವಿಡಿಯೊಗಳನ್ನು ಹಂಚಿಕೊಳ್ಳುತ್ತಾನೆ ಮತ್ತು ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಾನೆ.

ಈ ಸುದ್ದಿಯನ್ನೂ ಓದಿ:Viral Video: ವಿದೇಶದ ಬೀದಿಯಲ್ಲಿ ಲಂಗು ಲಗಾಮಿಲ್ಲದೇ ಕುಣಿದ ಭೂಪ! ನೆಟ್ಟಿಗರು ಹೇಳಿದ್ದೇನು?

ಅವನ ವಿಡಿಯೊಗಳು ಜಪಾನ್‌ನಲ್ಲಿ ಮಾತ್ರವಲ್ಲದೆ ಅದರ ಹೊರಗೆ ಚೀನಾ ಮತ್ತು ಇತರ ರಾಷ್ಟ್ರಗಳಲ್ಲಿಯೂ ವೈರಲ್ ಆಗಿವೆ. ಒಬ್ಬ ನೆಟ್ಟಿಗರು ಅವನನ್ನು ಚೀನಾದ ಜಿಯಾನ್ವೆನ್ ಚಕ್ರವರ್ತಿಗೆ ಹೋಲಿಸಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ಅವರು ಚೀನಾದ ಜಿಯಾನ್ವೆನ್ ಚಕ್ರವರ್ತಿ ಝು ಯುನ್ವೆನ್‌ಗೆ ಸಂಬಂಧಿಯಾಗಿರಬಹುದು" ಎಂದು ನೆಟ್ಟಿಗರು ಬರೆದಿದ್ದಾರೆ.