ಭೀಕರ ಪ್ರವಾಹದ ನಡುವೆಯೂ ಹುಲಿಯನ್ನು ರಕ್ಷಣೆ ಮಾಡಿದ ಆನೆ: ಮೂಕ ಪ್ರಾಣಿಗಳ ಸ್ನೇಹಕ್ಕೆ ನೆಟ್ಟಿಗರು ಫಿದಾ, ವಿಡಿಯೋ ನೋಡಿ
ತೀವ್ರವಾದ ಪ್ರವಾಹದ ನಡುವೆ ಆನೆಯೊಂದು ತನ್ನ ಸೊಂಡಿಲು ನೀಡಿ ಹುಲಿಯನ್ನು ತನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಕಾಪಾಡಿರುವ ವಿಡಿಯೋವೊಂದು ಸಂಚಲನ ಸೃಷ್ಟಿ ಮಾಡಿದೆ. ಈ ಹೃದಯ ಸ್ಪರ್ಶಿ ದೃಶ್ಯವನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದು ಇದು ನಿಜವಲ್ಲ, ಎಐ ವಿಡಿಯೊ ಎಂದು ಸೋಷಿ ಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ, ಡಿ.18: ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆದ ಕೆಲವೊಂದಿಷ್ಟು ವಿಡಿಯೊಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಅಂತಹ ದೃಶ್ಯಗಳಲ್ಲಿ ಈ ವಿಡಿಯೊ ಕೂಡ ಇದೀಗ ಸೇರಿದೆ. ತೀವ್ರ ವಾದ ಪ್ರವಾಹದ ನಡುವೆ ಆನೆಯೊಂದು ತನ್ನ ಸೊಂಡಿಲು ನೀಡಿ ಹುಲಿಯನ್ನು ತನ್ನ ಬೆನ್ನ ಮೇಲೆ ಕುಳ್ಳಿರಿಸಿ ಕೊಂಡು ಕಾಪಾಡಿರುವ ವಿಡಿಯೋವೊಂದು ಸಂಚಲನ ಸೃಷ್ಟಿ ಮಾಡಿದೆ. ಈ ಹೃದಯ ಸ್ಪರ್ಶಿ ದೃಶ್ಯವನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದು ಇದು ನಿಜವಲ್ಲ, ಎಐವಿಡಿಯೊ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ.
ಆನೆಯೊಂದು ಹುಲಿಯನ್ನು ಪ್ರವಾಹದಿಂದ ರಕ್ಷಣೆ ಮಾಡುವ ತೋರಿಸುವ ಈ ಕ್ಲಿಪ್ ಅನ್ನು ನಿಜ ವೆಂದು ಹಂಚಿಕೊಳ್ಳಲಾಗುತ್ತಿದೆ, ಆದರೆ ಇದು ಕೃತಕ ಬುದ್ಧಿಮತ್ತೆ ಬಳಸಿ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪ್ರವಾಹದ ನೀರು ವೇಗವಾಗಿ ಹರಿಯುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಹುಲಿಯೊಂದು ನೀರಿನಲ್ಲಿ ಮುಳುಗಿದ್ದು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುತ್ತದೆ. ತಕ್ಷಣ ಅಲ್ಲಿಗೆ ಎಂಟ್ರಿ ಕೊಟ್ಟ ಆನೆ ತನ್ನ ಸೊಂಡಿಲನ್ನು ಚಾಚಿ ಹುಲಿಗೆ ಸಹಾಯ ಮಾಡುತ್ತದೆ.. ಹುಲಿ ಆನೆಯ ಸೊಂಡಿಲನ್ನು ಹಿಡಿದು ಅದರ ಬೆನ್ನ ಮೇಲೆ ಏರಿ ಕುಳಿತಿದೆ. ಆನೆ ಮಾತ್ರ ಯಾವುದೇ ಆತಂಕವಿಲ್ಲದೆ ಹುಲಿಯನ್ನು ಹೊತ್ತು ಮುಂದೆ ಸಾಗುತ್ತದೆ.
Viral Video: ಕರುವಿಗೆ ಟೂತ್‌ಬ್ರಷ್‌ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ: ಮುಗ್ಧತೆಗೆ ಮನಸೋತ ನೆಟ್ಟಿಗರು!
ವಿಡಿಯೋ ನೋಡಿ:
ಈ ವೀಡಿಯೊವನ್ನು ಡಿಸೆಂಬರ್ 17 ರಂದು ಶೇರ್ ಮಾಡಿಕೊಳ್ಳಲಾಗಿದ್ದು ಇದುವರೆಗೆ ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ನವೆಂಬರ್ ಅಂತ್ಯದಲ್ಲಿ ನಡೆದ 'ಸೆನ್ಯಾರ್' ಚಂಡ ಮಾರುತ ಭಾರಿ ಹಾನಿ ಉಂಟುಮಾಡಿತ್ತು. ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆ ಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಪ್ರಾಣಿಗಳು ತೋರುವ ಮಾನವೀಯತೆ ನೋಡಿ ಎಂಬ ಶೀರ್ಷಿಕೆ ಯನ್ನು ಇದಕ್ಕೆ ನೀಡಲಾಗಿದೆ. ಅನೇಕ ಜನರು ಈ ವಿಡಿಯೊ ನೋಡೊ ಭಾವುಕರಾಗಿದ್ದಾರೆ... ಹಲವಾರು ಬಳಕೆದಾರರು ಈ ವೀಡಿಯೊವನ್ನು ಎಐ ಬಳಸಿ ಮಾಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆಮತ್ತೊಬ್ಬರು ಈ ದೃಶ್ಯ ನೈಜವಾಗದೇ ಇದ್ದರೂ ಎಲ್ಲರ ಮನಸ್ಸು ಗೆದ್ದಿದೆ ಎಂದು ಬರೆದುಕೊಂಡಿದ್ದಾರೆ.