ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತರಕಾರಿ ತೋಟದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಹುಲಿ ಮರಿ: ರಕ್ಷಣಾ ಕಾರ್ಯಾಚರಣೆಯ ದೃಶ್ಯ ವೈರಲ್

Viral News: ಇತ್ತೀಚೆಗೆ ಕಾಡು ಪ್ರಾಣಿಗಳು ಅರಣ್ಯ ಪ್ರದೇಶ ಬಿಟ್ಟು ಆಹಾರ ಹುಡುಕುತ್ತಾ ಜನ ವಸತಿ ಪ್ರದೇಶಕ್ಕೂ ಭೇಟಿ ನೀಡುತ್ತಿದೆ. ಇದೀಗ ಹುಲಿಯೊಂದು ತರಕಾರಿ ತೋಟದ ಸುತ್ತಲೂ ಹಾಕಿದ್ದ ಬಲೆಯೊಂದರಲ್ಲಿ ಸಿಲುಕಿಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ.

ಅಸ್ಸಾಂನ ತರಕಾರಿ ತೋಟದ ಬಲೆಗೆ ಸಿಲುಕಿದ ಹುಲಿ: ಸ್ಥಳೀಯರಲ್ಲಿ ಆತಂಕ

ಅಸ್ಸಾಂನ ತರಕಾರಿ ತೋಟದ ಬಲೆಗೆ ಸಿಲುಕಿದ ಹುಲಿ ಮರಿ -

Profile
Pushpa Kumari Sep 25, 2026 3:55 PM

ಗ್ಯಾಂಗ್ಟಾಕ್, ಸೆ. 25: ಇತ್ತೀಚೆಗೆ ಕಾಡು ಪ್ರಾಣಿಗಳು ಅರಣ್ಯ ಪ್ರದೇಶ ಬಿಟ್ಟು ಆಹಾರ ಹುಡುಕುತ್ತ ಜನ ವಸತಿ ಪ್ರದೇಶಕ್ಕೂ ಭೇಟಿ ನೀಡುತ್ತಿವೆ. ಇದೀಗ ಹುಲಿ ಮರಿಯೊಂದು ಮನೆ ಅಂಗಳದಲ್ಲಿ ತರಕಾರಿ ತೋಟದ ಸುತ್ತಲೂ ಹಾಕಿದ್ದ ಬಲೆಯೊಂದರಲ್ಲಿ ಸಿಲುಕಿಕೊಂಡ ಆಘಾತಕಾರಿ ಘಟನೆಯೊಂದು (Viral News) ನಡೆದಿದೆ. ಸ್ಥಳೀಯರ ಪ್ರಕಾರ, ಈ ಹುಲಿ ಮರಿಯು ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರದೇಶದಿಂದ ಹೊರಬಂದು ಸಮೀಪದ ಜನವಸತಿ ಪ್ರದೇಶವನ್ನು ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳೀಯ ನಿವಾಸಿಯೊಬ್ಬರ ಮನೆಯ ಹಿತ್ತಲಿನಲ್ಲಿ ಈ ಹುಲಿ ಮರಿ ಕಂಡುಬಂದಿದೆ. ಹೀರೆಕಾಯಿ ಬೆಳೆಯುತ್ತಿದ್ದ ತೋಟದೊಳಗೆ ಈ ಮರಿ ಸಿಕ್ಕಿಹಾಕಿಕೊಂಡಿತ್ತು. ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಬಿಸ್ವನಾಥ್ ಘಾಟ್ ಹತ್ತಿರದ ನಟೂನ್‌ಗಾಂವ್‌ನಲ್ಲಿ ಈ  ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿದೆ.

ವಿಡಿಯೋ ನೋಡಿ:



ತೋಟದ ಸುತ್ತಲೂ ತರಕಾರಿ ರಕ್ಷಣೆಗೆ ಬಲೆ ಬೀಸಲಾಗಿದ್ದು, ಬಲೆಯಲ್ಲಿ ಹುಲಿ ಮರಿ ಸಿಲುಕಿಕೊಂಡಿದ್ದರಿಂದ ಅದಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಮರಿ ಸಿಕ್ಕಿಬಿದ್ದಿರುವ ವಿಷಯ ಹರಡುತ್ತಿದ್ದಂತೆ, ಅನೇಕ ನಿವಾಸಿಗಳು ಜಮಾಯಿಸಿದ್ದಾರೆ. ಆದರೆ ಕೆಲವರು, ಆ ಪ್ರಾಣಿಯು ಬಲೆಯನ್ನು ಮುರಿದುಕೊಂಡು ದಾಳಿ ಮಾಡಬಹುದು ಎಂಬ ಭಯದಿಂದ ದೂರವೇ ಉಳಿದರು.

ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ ಅರಣ್ಯಾಧಿಕಾರಿಗಳು

ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಪ್ರಸ್ತುತ ಮರಿಯ ಮೇಲೆ ನಿಗಾ ವಹಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಾರ್ವಜನಿಕರು ತೋಟದ ಹತ್ತಿರ ಸುಳಿಯದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.