ಡೆಹ್ರಾಡೂನ್ ಕೋರ್ಟ್‌ನಿಂದ ಏಕಾಏಕಿ ಬಿದ್ದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
Viral News: ಉತ್ತರಾಖಂಡದ ಡೆಹ್ರಾಡೂನ್‌ನ ಕೌಟುಂಬಿಕ ನ್ಯಾಯಾಲಯದ ಕಟ್ಟಡದಿಂದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಇದರ ಸಿಸಿಟಿವಿ ಕ್ಯಾಮೆರಾ ದೃಶ್ಯ ಭಾರಿ ವೈರಲ್ ಆಗಿದೆ. ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರೇಲಿಂಗ್ ಹತ್ತಿ ಜಿಗಿಯಲು ಯತ್ನಿಸಿದ್ದಾರೆ.
ಉತ್ತರಾಖಂಡದ ಡೆಹ್ರಾಡೂನ್ ಕೋರ್ಟ್ ಕಟ್ಟಡದಿಂದ ಬಿದ್ದ ಮಹಿಳೆ -
ಡೆಹ್ರಾಡೂನ್, ಸೆ. 25: ಉತ್ತರಾಖಂಡದ ಡೆಹ್ರಾಡೂನ್‌ನ ಕೌಟುಂಬಿಕ ನ್ಯಾಯಾಲಯದ ಕಟ್ಟಡದಿಂದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಇದರ ಸಿಸಿಟಿವಿ ಕ್ಯಾಮೆರಾ ದೃಶ್ಯ ಭಾರಿ ವೈರಲ್ (Viral News) ಆಗಿದೆ. ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರೇಲಿಂಗ್ ಹತ್ತಿ ಜಿಗಿಯಲು ಯತ್ನಿಸಿದ್ದಾರೆ. ಆದರೆ ಅವರ ಹಿಂದೆಯೇ ಬಂದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಮಹಿಳೆ ಕಟ್ಟಡದಿಂದ ಬಿದ್ದಾಗಿತ್ತು.
ಕೆಳಗೆ ಬಿದ್ದ ರಭಸಕ್ಕೆ ಮಹಿಳೆಯ ಬಲಗೈ ಮುರಿದಿದ್ದು, ಚಿಕಿತ್ಸೆಗಾಗಿ ಅವರನ್ನು ಸರ್ಕಾರಿ ಡೂನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಮಹಿಳೆ ಇದ್ದಕ್ಕಿದ್ದಂತೆ ಬಂದು ರೇಲಿಂಗ್‌ನಿಂದ ಕೆಳಗೆ ಜಿಗಿಯುವಂತೆ ಕಾಣುತ್ತಾರೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕೆಯನ್ನು ತಡೆಯಲು ಪ್ರಯತ್ನಿಸಿದ್ದು ಆಕೆಯ ಹಿಂದೆ ಬರುತ್ತಿರುವುದು ಸೆರೆಯಾಗಿದೆ.
ವಿಡಿಯೊ ನೋಡಿ:
🚨 Dehradun | Woman Jumps from Court Building
— Sahil chabra (@sahii199) September 24, 2026
Meenakshi a resident of Vijay Colony (New Cantt Road), Dehradun has reportedly been involved in a family dispute case with her husband, Sanjeev Kumar which is pending before the court
On Wednesday, the woman reportedly jumped from… pic.twitter.com/bp2liEVfWs
ಲಾಯರ್‌ಗಳ ಪ್ರಕಾರ, ಮಹಿಳೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ಎದುರಿಸುತ್ತಿದ್ದರು. 2019ರಲ್ಲಿ ಹರಿಯಾಣ ಮೂಲದವರ ಜತೆ ಮದುವೆಯಾಗಿದ್ದ ಅವರು ಪತಿಯಿಂದ ದೂರವಾಗಿದ್ದರು. ಹೀಗಾಗಿ ಮಾಸಿಕ 5,000 ರೂಪಾಯಿ ಜೀವನಾಂಶ ಹಾಗೂ 48 ತಿಂಗಳ ಬಾಕಿ ಮೊತ್ತ 2.40 ಲಕ್ಷ ರೂಪಾಯಿ ಕೊಡಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!
ಆದರೆ ಮಹಿಳೆ ಆಕಸ್ಮಿಕವಾಗಿ ಬಿದ್ದಿದ್ದಾರೋ ಅಥವಾ ಉದ್ದೇಶ ಪೂರ್ವಕವಾಗಿ ಹಾರಿದ್ದಾರೊ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗಾಯಗೊಂಡಿರುವ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಕೌಟುಂಬಿಕ ವಿವಾದ ಮತ್ತು ಅವರು ಕೆಳಗೆ ಬೀಳುವ ಮುನ್ನ ನಡೆದ ಘಟನೆಗಳು ಸೇರಿ ಈ ಘಟನೆಗೆ ಸಂಬಂಧಿಸಿದ ದೃಶ್ಯವನ್ನು ಅಧಿಕಾರಿಗಳು ಈಗ ಪರಿಶೀಲಿಸುತ್ತಿದ್ದಾರೆ.
ಸದ್ಯಕ್ಕೆ, ಆ ಮಹಿಳೆ ಆಕಸ್ಮಿಕವಾಗಿ ಬಿದ್ದರೇ ಅಥವಾ ಕಟ್ಟಡದಿಂದ ಹಾರಿದರೇ ಎಂಬುದು ಸ್ಪಷ್ಟವಾಗಿಲ್ಲ. ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಪೊಲೀಸರು ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸುವ ನಿರೀಕ್ಷೆಯಿದೆ.